ಐತಿಹಾಸಿಕ ಹಿರೆಕೆರೆ ಸೌಂದರ್ಯೀಕರಣಕ್ಕೆ ಅನುದಾನಕ್ಕೆ ಪ್ರಸ್ತಾವನೆ

| Published : Sep 01 2025, 01:03 AM IST

ಐತಿಹಾಸಿಕ ಹಿರೆಕೆರೆ ಸೌಂದರ್ಯೀಕರಣಕ್ಕೆ ಅನುದಾನಕ್ಕೆ ಪ್ರಸ್ತಾವನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ನೂರಾರು ವರ್ಷಗಳ ಇತಿಹಾಸವಿರುವ ಐತಿಹಾಸಿಕ ಹಿರೇಕೆರೆ ಸೌಂದರ್ಯೀಕರಣಕ್ಕೆ 5 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು. ಶ್ರೀ ಚಂದ್ರಮೌಳೇಶ್ವರ ಸೇವಾ ಸಮಿತಿಯ ಸದಸ್ಯರು ಪುರಾತನ ಶ್ರೀ ಚಂದ್ರಮೌಳೇಶ್ವರ ದೇವಾಲಯವನ್ನು ಸುಂದರವಾಗಿ ನವೀಕರಣ ಮಾಡಿಸಿದ್ದಾರೆ. ತಾವು ಕೂಡ ದೇವಾಲಯದ ನವೀಕರಣಕ್ಕೆ ಹೆಚ್ಚಿನ ಸಹಾಯ ಮಾಡಲಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ಗ್ರಾಮದ ನೂರಾರು ವರ್ಷಗಳ ಇತಿಹಾಸವಿರುವ ಐತಿಹಾಸಿಕ ಹಿರೇಕೆರೆ ಸೌಂದರ್ಯೀಕರಣಕ್ಕೆ 5 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.

ಹೋಬಳಿ ಕೇಂದ್ರದ ಶ್ರೀ ವಿನಾಯಕರ ಗೆಳೆಯರ ಬಳಗ ಹಾಗೂ ಚಂದ್ರಮೌಳೇಶ್ವರ ಸೇವಾ ಸಮಿತಿ, ಚಂದ್ರಮೌಳೇಶ್ವರ ಸರ್ಕಲ್ ಯುವಕರ ಬಳಗದ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವ ವಿಸರ್ಜನ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಐತಿಹಾಸಿಕ ಹಿರೇಕೆರೆಯನ್ನು ಕಳೆದ ಆರು ವರ್ಷಗಳಿಂದ 6 ವರ್ಷಗಳಿಂದ ಕೆರೆಗೆ ನೀರು ಹರಿಸಿ ತುಂಬಿಸಲಾಗುತ್ತಿದೆ. ಕೆರೆಯ ಹೋಬಳಿ ಕೇಂದ್ರದ ಮಧ್ಯಭಾಗದಲ್ಲಿ ಕೆರೆ ಬರುವುದರಿಂದ ಕೆರೆಯ ಏರಿ ಮೇಲೆ ಪಾರ್ಕ್ ಮಾದರಿಯಲ್ಲಿ ನಿರ್ಮಾಣ ಮಾಡಿದರೆ ಕೆರೆಯ ಸೌಂದರ್ಯ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ 5 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಯೋಜನೆಗೆ ಒಪ್ಪಿಗೆ ಸಿಗುವ ಭರವಸೆ ಇದೆ ಎಂದರು.ಶ್ರೀ ಚಂದ್ರಮೌಳೇಶ್ವರ ಸೇವಾ ಸಮಿತಿಯ ಸದಸ್ಯರು ಪುರಾತನ ಶ್ರೀ ಚಂದ್ರಮೌಳೇಶ್ವರ ದೇವಾಲಯವನ್ನು ಸುಂದರವಾಗಿ ನವೀಕರಣ ಮಾಡಿಸಿದ್ದಾರೆ. ತಾವು ಕೂಡ ದೇವಾಲಯದ ನವೀಕರಣಕ್ಕೆ ಹೆಚ್ಚಿನ ಸಹಾಯ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ದೇವಾಲಯದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ಕೊಡುವುದರ ಜೊತೆಗೆ ದೇವಾಲಯದ ಹಿಂಭಾಗದಲ್ಲಿರುವ ಸಾರ್ವಜನಿಕ ಕಲ್ಯಾಣ ಮಂಟಪವನ್ನು ನಿವೀಕರಣಗೊಳಿಸಿ ದೇವಾಲಯ ಸಮಿತಿ ಸದಸ್ಯರಿಗೆ ನಿರ್ವಹಣೆಗೊಳಿಸಲು ಹಸ್ತಾಂತರ ಮಾಡಿಸುವುದಾಗಿ ಭರವಸೆ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವದ ಆಚರಣೆ ಮಹಾರಾಷ್ಟ್ರ ರಾಜ್ಯದಲ್ಲಿ ಜಾರಿಗೆ ಬಂದಿತು ಭಕ್ತಿ ಭಾವನೆ ಜೊತೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಗಣೇಶೋತ್ಸವ ಆಚರಣೆ ಶಕ್ತಿ ತುಂಬಿತು ಎಂದರು. ಗೌರಿ ಗಣೇಶ ಮೂರ್ತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಬಾರಿ ಮದ್ದುಗುಂಡಿನ ಪ್ರದರ್ಶನ ಹಾಗೂ ಉತ್ಸವ ಮತ್ತು ರಸ ಸಂಜೆ ಕಾರ್ಯಕ್ರಮವನ್ನು ಜೊತೆಗೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.