ಸಿಂಗನಲ್ಲೂರಿನಲ್ಲಿ ಮ್ಯೂಸಿಯಂ ತೆರೆಯಲು ಪ್ರಸ್ತಾವನೆ: ಎಆರ್‌ಕೆ

| Published : Mar 29 2025, 12:39 AM IST

ಸಿಂಗನಲ್ಲೂರಿನಲ್ಲಿ ಮ್ಯೂಸಿಯಂ ತೆರೆಯಲು ಪ್ರಸ್ತಾವನೆ: ಎಆರ್‌ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ಪಟ್ಟಣದ ಜೀವಿ ಗೌಡ ಕಾಲೇಜಿನಲ್ಲಿ ಜನಪರ ಸಾಹಿತ್ಯ ಪರಿಷತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆ ತಾಲೂಕು ಘಟಕದ ವತಿಯಿಂದ ಜಾನಪದ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹನೂರುಜಾನಪದ, ಸಾಹಿತ್ಯ ಹಾಗೂ ಕಲೆಗಳ ತವರೂರು ಜಿಲ್ಲೆಯ ಹನೂರು ತಾಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಡಾ.ರಾಜ್ ಹಾಗೂ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ಸರ್ಕಾರಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಜಾನಪದ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ ಹನೂರು ವತಿಯಿಂದ ಜಾನಪದ ಉತ್ಸವ, ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲೆಗಳ ತವರೂರು ಚಾಮರಾಜನಗರ ಜಿಲ್ಲೆಯಲ್ಲಿ ಮಲೆಮಾದೇಶ್ವರ, ಮಂಟೇಸ್ವಾಮಿ ಹಾಗೂ ಕಲಾ ಆರಾಧಕರು ಪಡೆದಂತಹ ನಾವು ಹನೂರು ತಾಲೂಕಿನ ಸಿಂಗನಲ್ಲೂರು ಗ್ರಾಮ ಕಲೆಗಳ ಉಗಮ ಸ್ಥಾನ ಎಂದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ಸಿಂಗನಲ್ಲೂರು ಪುಟ್ಟಸ್ವಾಮಿಯ ಹಾಗೂ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ಚಿಂತನೆ ನಡೆಸಿದ್ದು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆದು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ಮ್ಯೂಸಿಯಂ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಹೇಶ್ ಚಿಕ್ಕಲ್ಲೂರು ರಾಜ್ಯಾದ್ಯಂತ 22 ಕಾರ್ಯಕ್ರಮಗಳನ್ನು ನೀಡಿ ಪಟ್ಟಣದಲ್ಲಿ ಜಾನಪದ ಸಾಹಿತ್ಯ ಮತ್ತು ಕಲಾತಂಡಗಳ ಬಗ್ಗೆ ಅವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ಲಾಘನೀಯ. ಚಾಮರಾಜನಗರ ಜಿಲ್ಲೆ, ಶ್ರೀಮಂತ ಕಲಾ ಪೋಷಕರ ತವರೂರು ಎಂದರೆ ತಪ್ಪಾಗಲಾರದು. ಇಡೀ ದೇಶ, ರಾಜ್ಯ ತಿರುಗಿ ನೋಡುವಂತಹ ಕಲಾರಾಧಕರು ಮಂಟೇಸ್ವಾಮಿ ಮಲೆಮಾದೇಶ್ವರರು ನಡೆದಾಡಿದಿರುವ ತವರೂರು. ಈ ನಿಟ್ಟಿನಲ್ಲಿ ಇಂತಹ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗಾಗಿ ವಿದ್ಯಾರ್ಥಿಗಳು ಈಗಿನಿಂದಲೇ ಉತ್ತಮ ವ್ಯಾಸಂಗದ ಜೊತೆ ಕಲಾರಾಧಕರಾಗಿ ಜಿಲ್ಲೆ, ತಾಲೂಕಿನಿಂದ ಗುರುತಿಸಿಕೊಳ್ಳಲು ಈಗಿನಿಂದಲೇ ಪ್ರತಿಭಾವಂತರಾಗಿ ಸಾಧನೆ ಮಾಡಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.ಮುಖ್ಯ ಅತಿಥಿಗಳಾಗಿ ಮೈಸೂರಿನ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಚಿಂತನೆ ಮೈಗೂಡಿಸಿಕೊಂಡು ಸಾಹಿತ್ಯ ಕಲೆ ಚಿಂತನಗಳನ್ನು ನಡೆಸಿ ಕಲೆ, ನಾಡು, ನುಡಿ, ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮೊಬೈಲ್ ಬಳಕೆಯಿಂದ ಕಲೆಗಳು ಕಣ್ಮರೆಯಾಗುತ್ತಿದೆ ಎಂದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ದತ್ತೇಶ್ ಕುಮಾರ್ ಮಾತನಾಡಿ, ಜಿಲ್ಲೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದೆ. ಆದರೆ ಸಾಂಸ್ಕೃತಿಕವಾಗಿ ಪ್ರಪಂಚದಲ್ಲಿಯೇ ಚಾಮರಾಜನಗರ ಜಿಲ್ಲೆ ರಾಯಭಾರಿಯಾಗಿ ಶ್ರೀಮಂತ ಜಿಲ್ಲೆ ಹಾಗೂ ಮಲೆ ಮಾದೇಶ್ವರ ಮಂಟೇಸ್ವಾಮಿ ಶರಣರ ನೀಡಿದ ಜಿಲ್ಲೆಯ ಜೊತೆ ಹಲವು ಸಾಧಕರ ಕಲೆ, ನೆಲ, ಜಲ, ಭಾಷೆ ಬಗ್ಗೆ ಹಲವರನ್ನು ಕೊಡುಗೆಯಾಗಿ ನೀಡಿರುವ ಜಿಲ್ಲೆ ಶ್ರೀಮಂತ ಜಿಲ್ಲೆಯಾಗಿದೆ.

ವಿದ್ಯಾರ್ಥಿಗಳು ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲೆ ಬಗ್ಗೆ ಚಿಂತನೆ ಮಾಡಬೇಕು. ಸಿಂಗನ್ನಲೂರು ಗ್ರಾಮದಲ್ಲಿ ಡಾ.ರಾಜ್‌ಕುಮಾರ್ ಮತ್ತು ಪುನೀತ್ ರಾಜಕುಮಾರ್ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ಶಾಸಕರು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಹೀಗಾಗಿ ನಮ್ಮ ಕಲೆ ಮತ್ತು ಕಲಾರಾಧಕರನ್ನು ಪ್ರೋತ್ಸಾಹಿಸಿ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕು. ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಉನ್ನತ ಸ್ಥಾನದಲ್ಲಿದ್ದಾರೆ. ಜೊತೆಗೆ ಇಂತಹ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗಾಗಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಜಾನಪದ ಸಿರಿ ಪ್ರಶಸ್ತಿಗೆ ಭಾಜನ:ಕಸಾಪ ವತಿಯಿಂದ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆರು ಜನರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಂಗೀತ ಕ್ಷೇತ್ರದಲ್ಲಿನ ಗೀತಾ ಭತ್ತದ್, ಜಾನಪದ ಕಲಾ ಕ್ಷೇತ್ರದಲ್ಲಿ ಎಂ.ಕೈಲಾಸ್ ಮೂರ್ತಿ, ದೊಣ್ಣೆವರಸೆ ಕಲಾ ಕ್ಷೇತ್ರದಲ್ಲಿ ಹಿರಿಯ ನಾಗರಿಕರಾದ ನಂಜೇಗೌಡ, ಸಂಶೋಧನಾ ಕ್ಷೇತ್ರದಲ್ಲಿ ಡಾ.ಪ್ರೇಮ ಪಿ ವೈಕೆ ಮೊಳೆ ಮತ್ತು ಕಲಾ ಪೋಷಕರಾದ ಹರೀಶ್ ಸೇರಿದಂತೆ ಕಲಾ ಪೋಷಕರಾದ ಎಂಎಂ ಮಹದೇವ ಪ್ರಸಾದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಜಾನಪದ ಸಾಹಿತ್ಯ, ಕನ್ನಡ ಸಾಹಿತ್ಯ ಮತ್ತು ಜಿಲ್ಲೆಯಲ್ಲಿ ಹೆಚ್ಚು ಸಾಧಕರನ್ನು ನೀಡಿರುವರನ್ನು ಗುರುತಿಸಿ ಅಧ್ಯಕ್ಷ ಮಹೇಶ್ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ಲಾಘನೀಯ. ಜಿಲ್ಲೆಯು ಇಡೀ ದೇಶದಲ್ಲಿ ಹೆಚ್ಚು ಹುಲಿಗಳಿರುವ ಬಂಡಿಪುರ ಹಾಗೂ ನಾಲ್ಕು ಅರಣ್ಯ ಪ್ರದೇಶಗಳನ್ನು ನೀಡಿರುವ ಹೆಗ್ಗಳಿಕೆಯನ್ನು ಈ ಜಿಲ್ಲೆ ಹೊಂದಿದೆ ಎಂದರು.

ಇಲ್ಲಿನ ಶೈಕ್ಷಣಿಕ ಪ್ರಗತಿ ಸಾಧಿಸುತ್ತಿರುವ ಮಾನಸ ಶಿಕ್ಷಣ ಸಂಸ್ಥೆ ಚಾಮರಾಜನಗರ ಜಿಲ್ಲೆಯಲ್ಲಿಯೇ ಉತ್ತಮ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಜಾನಪದ ಸಾಹಿತ್ಯ ಮತ್ತು ಇಂತಹ ಕಾರ್ಯಕ್ರಮಗಳನ್ನು ಭಾಗವಹಿಸಿ ತಮ್ಮನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಮುಂದಾಗಬೇಕು ಜೊತೆಗೆ ಇಂತಹ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡಬೇಕು ಇಂತಹ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಹೆಚ್ಚು ನಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಮಹೇಶ್ ಚಿಕ್ಕಲ್ಲೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಅಧ್ಯಕ್ಷ ಕಂದವೇಲು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಚಂದ್ರಮ ಎಸ್ ಸ್ವಾಗತ ಭಾಷಣ ಮಾಡಿದರು. ಡಾ.ಆರ್.ನಾಗಭೂಷಣ್, ಗೀತಾ ಭತ್ತದ್, ಜಾನಪದ ಕಲಾತಂಡದ ಕೈಲಾಸ್ ಮೂರ್ತಿ, ದೊಣ್ಣೆವರ್ಸೇ ನಂಜೇಗೌಡ, ಸಂಶೋಧನಾ ಕ್ಷೇತ್ರದ ಡಾ.ಪ್ರೇಮ, ಪಿ ವೈಕೆ ಮೊಳೆ, ಕಲಾ ಪೋಷಕರಾದ ಎ.ಎಂ ಮಹದೇವ್ ಪ್ರಸಾದ್, ಹರೀಶ್ ಮೊಗಣ್ಣ ಇನ್ನಿತರರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರು ಉಪಸ್ಥಿತರಿದ್ದರು.