ಸಾರಾಂಶ
ಯರಮುಖದಲ್ಲಿ ಯಕ್ಷಗಾನ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಂದ ಶಶಿಪ್ರಭ ಪರಿಣಯ ಯಕ್ಷಗಾನ ಪ್ರದರ್ಶನ ನಡೆಯಿತು.
ಜೋಯಿಡಾ: ಜಿಲ್ಲೆಯ ಗಡಿ ಭಾಗದಲ್ಲಿ ಯಕ್ಷಗಾನ ಸಪ್ತಾಹ ನಡೆಯುತ್ತಿದೆ. ಇದರಿಂದ ಕಲಾಪ್ರಿಯರಿಗೆ ಯಕ್ಷಗಾನ ನೋಡುವ ಅವಕಾಶ ಲಭಿಸಿದೆ. ಯಕ್ಷಗಾನ ಸೇರಿದಂತೆ ಪಾರಂಪರಿಕ ಕಲೆಗಳ ರಕ್ಷಣೆಯಾಗಬೇಕು ಎಂದು ತಹಸೀಲ್ದಾರ್ ಮಂಜುನಾಥ ಮುನ್ನೋಳ್ಳಿ ತಿಳಿಸಿದರು.
ಬುಧವಾರ ಯರಮುಖದಲ್ಲಿ ನಡೆಯುತ್ತಿರುವ ಯಕ್ಷಗಾನ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಯಲು ಸೀಮೆಗಳಲ್ಲಿ ಬಯಲಾಟ, ದೊಡ್ಡಾಟ, ಸಣ್ಣಾಟ, ಸಂಗ್ಯಾ ಬಾಳ್ಯಾ ಪಾರಿಜಾತಗಳು ನಡೆಯುತ್ತದೆ. ಆದರೆ ಅಲ್ಲಿ ಹಳೆಯ ತಲೆಮಾರಿನವರೆ ಕಾರ್ಯಕ್ರಮ ನಡೆಸುತ್ತಿದ್ದು, ಹೊಸಬರು ಮುಂದೆ ಬಂದಿಲ್ಲ. ಇಲ್ಲಿ ಮಕ್ಕಳಿಗೂ ತರಬೇತಿ ನೀಡಲಾಗುತ್ತಿದೆ. ಇದು ಸಂತಸದ ವಿಚಾರ ಎಂದರು.ಶ್ರೀಧರ ಭಾಗ್ವತ ಮಾತನಾಡಿ, ತಾಲೂಕಿನ ಪ್ರಮುಖ ಬೆಳೆ ಅಡಕೆಯು ಶೇಕಡಾ ಅರವತ್ತರಷ್ಟು ಕೊಳೆರೋಗದಿಂದ ಹಾಳಾಗಿದೆ. ತಾಲೂಕು ದಂಡಾಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ನಾವು ಈ ಸಪ್ತಾಹದಲ್ಲಿ ನಮ್ಮ ಕಷ್ಟ ದೂರ ಮಾಡಲಿ ಎಂದು ರಾಮಾಯಣ, ಮಹಾಭಾರತದ ಕತೆಗಳನ್ನು ತೋರಿಸುವ ಮೂಲಕ ದೇವರ ಸ್ಮರಣೆ ಮಾಡುತ್ತಿದ್ದೇವೆ ಎಂದರು.ಶಿಕ್ಷಕ ಜನಾರ್ದನ ಹೆಗಡೆ ಮಾತನಾಡಿ, ಇಂದಿನ ವಿದ್ಯುನ್ಮಾನ ಯುಗದಲ್ಲಿ ಮಾನವ ಒಂಟಿಯಾಗಿದ್ದಾನೆ. ಇಂಥ ಸ್ಥಿತಿಯಲ್ಲೂ ಗ್ರಾಮದ ಜನರನ್ನು ಒಂದೆಡೆ ಸೇರಿಸುವ ಕೆಲಸ ಸಪ್ತಸ್ವರ ಸಂಸ್ಥೆ ಮಾಡುತ್ತಿದೆ. ಆ ಮೂಲಕ ಕಲೆಯ ಉಳಿವಿಗೆ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿ ಸುಜಾತಾ ಸುಬ್ರಾಯ, ಅಡುಗೆ ಕಲಾವಿದರಾದ ಗಾಯತ್ರಿ ಹೆಗಡೆ ಮತ್ತು ಗಂಗಾಧರ ಹೆಗಡೆ ಅವರನ್ನು ಗೌರವಿಸಲಾಯಿತು.ರಾಧಾ ಹೆಗಡೆ, ಅನಂತ ಹೆಗಡೆ, ಶ್ರೀಪಾದ ದೇಸಾಯಿ, ಲಕ್ಷ್ಮಣ ಸಿದ್ದಿ ಇದ್ದರು. ಸೀತಾ ದಾನಗೇರಿ ನಿರೂಪಿಸಿದರು. ನಂತರ ಮಕ್ಕಳಿಂದ ಶಶಿಪ್ರಭ ಪರಿಣಯ ಯಕ್ಷಗಾನ ಪ್ರದರ್ಶನ ನಡೆಯಿತು.ಇಂದು ಚಿತ್ರಾಪುರದಲ್ಲಿ ಹೆಣ್ಣುಮಕ್ಕಳ ದಿನಾಚರಣೆ
ಭಟ್ಕಳ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಶ್ರೀವಲಿ ಪ್ರೌಢಶಾಲೆ ಚಿತ್ರಾಪುರ ಇವುಗಳ ಆಶ್ರಯದಲ್ಲಿ ಅ. ೨೪ರಂದು ಬೆಳಗ್ಗೆ ಶ್ರೀವಲಿ ಪ್ರೌಢಶಾಲಾ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ಹಿರಿಯ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಕಾಂತ ಕುರಣಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶ್ರೀವಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಮಮತಾ ಭಟ್ಕಳ ವಹಿಸುವರು. ಹೆಚ್ಚುವರು ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶೆ ಧನವತಿ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ, ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸೀತಾರಾಮ ಹರಿಕಾಂತ, ಶೇಖರ ಹರಿಕಾಂತ ಉಪಸ್ಥಿತರಿರುವರು. ನ್ಯಾಯವಾದಿ ನಾಗರಾಜ ಈ.ಎಚ್., ಉಪನ್ಯಾಸ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.