ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಮನುಷ್ಯನ ಸ್ವಾರ್ಥಕ್ಕೆ ಬರಡಾಗುತ್ತಿರುವ ಭೂ ತಾಯಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿ ತಾಯಿ ಮನುಷ್ಯನ ಮಾತ್ರವಲ್ಲದೆ ಸಸ್ಯ ಸಂಕುಲ, ಪ್ರಾಣಿ ಸಂಕುಲಗಳನ್ನು ತನ್ನ ಒಡಲಿನಲ್ಲಿಟ್ಟು ಸಾಕಿ ಸಲಹುತ್ತಿದ್ದಾಳೆ ಎಂದು 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.
ನಗರದ ಕೆಂಗಲ್ ಹನುಮಂತಯ್ಯ ಕಾನೂನು ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭೂ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶವಾಗುತ್ತಿದ್ದೆ, ಅದೆಷ್ಟೋ ಜೀವ ಸಂಕುಲಗಳು ಅಳಿವಿನಂಚಿನಲ್ಲಿ. ಈ ನಿಟ್ಟಿನಲ್ಲಿ ಪರಿಸರ ಮತ್ತು ಭೂಮಿಯನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಬೇಕು ಎಂದರು. ಜಾಗತಿಕ ತಾಪಮಾನ ಏರಿಕೆಹಿರಿಯ ನ್ಯಾಯಾಧೀಶರಾದ ಮುಜಫರ್ ಎ ಮಾಂಜರಿ ಮಾತನಾಡಿ, ಭೂಮಿ ತಾಯಿ ಎಲ್ಲ ಜೀವ ಸಂಕುಲಗಳಿಗೂ ಆಶ್ರಯದಾತೆ. ಆದರೆ ಇಂದು ಮನುಷ್ಯನ ಸ್ವಾರ್ಥಕ್ಕೆ ಭೂಮಿ ವಿನಾಶದತ್ತ ಸಾಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ, ಜಾಗತಿಕ ತಾಪಮಾನ ಏರಿಕೆ, ಶಾಖ ಹೆಚ್ಚಳ, ಪ್ರವಾಹ ಮತ್ತು ಕಾಡ್ಗಿಚ್ಚಿನಂತಹ ಸಮಸ್ಯೆಗಳು ತೀರಾ ಹೆಚ್ಚಾಗುತ್ತಿವೆ ಎಂದರು.
೨೦೩೦ ರ ವೇಳೆಗೆ ನಾವು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡದಿದ್ದರೆ, ಭೂಮಿಯ ಉಷ್ಣತೆ ಹೆಚ್ಚಾಗಿ ಬಹಳಷ್ಟು ಹಾನಿಗಳಾಗುತ್ತವೆ ಎಂದ ವಿಶ್ವ ಸಂಸ್ಥೆಯ ವರದಿಯೊಂದು ತಿಳಿಸಿದೆ. ಈ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಗಾಗಿ ಸಕಲ ಜೀವ ಸಂಕುಲಗಳ ಉಳಿವಿಗಾಗಿ ಪರಿಸರ ಮತ್ತು ಭೂಮಿಯನ್ನು ರಕ್ಷಿಸಬೇಕೆಂದು ತಿಳಿಸಿದರು.ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ಡಾ.ರಾಜಗೋಪಾಲಗೌಡ ಮಾತನಾಡಿ, ನಗರೀಕರಣ, ಆಧುನೀಕರಣ ಸೇರಿದಂತೆ ಇಂದು ಮನುಷ್ಯನ ಸ್ವಾರ್ಥಕ್ಕೆ ಹವಾಮಾನ ಬದಲಾವಣೆ, ಜೀವ ಸಂಕುಲಗಳ ನಾಶ, ಮಾಲಿನ್ಯ ಮತ್ತು ಅರಣ್ಯನಾಶ ಸೇರಿದಂತೆ ಇಡೀ ಪರಿಸರವೇ ನಾಶವಾಗುತ್ತಿದೆ. ಇವುಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮುಂದಿನ ಪೀಳಿಗೆಗಾಗಿ ಸುಸ್ಥಿರ ಪರಿಸರವನ್ನು ನಿರ್ಮಿಸಲು ಜನರಿಗೆ ಶಿಕ್ಷಣ ನೀಡಲು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಜತೆಗೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭೂ ದಿನ ಕೇವಲ ಒಂದು ಆಚರಣೆಯಲ್ಲ, ಇದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ಲಾಸ್ಟಿಕ್ ನಿಧಾನ ವಿಷ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್.ಎಂ. ಮಾತನಾಡಿ, ಪ್ಲಾಸ್ಟಿಕ್ ಇಲ್ಲದೆ ಮನುಷ್ಯನ ಜೀವನ ಇಲ್ಲ, ಕುಡಿವ ನೀರು, ಹಾಲಿನ ಪ್ಯಾಕೆಟ್, ಅಹಾರ ಪದಾರ್ಥಗಳ ಪ್ಯಾಕೇಜ್, ಮದ್ಯದ ಪ್ಯಕೇಟ್‌ಗಳು, ಅಡುಗೆ ಎಣ್ಣೆಯ ಪ್ಯಾಕೆಟ್, ಚಾಕ್ಲೆಟ್, ಪಾನ್‌ಗುಟಕ, ಮಕ್ಕಳು ತಿನ್ನುವ ತಿಂಡಿಗಳು ಎಲ್ಲವೂ ಪ್ಲಾಸ್ಟಿಕ್‌ನಿಂದ ಪ್ಯಾಕ್ ಮಾಡಿದ ಅಹಾರ ಪದಾರ್ಥಗಳು ಇವುಗಳನ್ನು ಸೇವನೆ ಮಾಡುವ ಮುನುಷ್ಯರು ಪ್ರತಿ ದಿನವು ಮನಷ್ಯನ ದೇಹ ವಿಷಯುಕ್ತವಾಗುತ್ತಿದೆ, ಸರಕಾರಗಳು ಕೂಡಲೇ ಪ್ಲಾಸ್ಟಿಕ್ ಉತ್ಪಾದನೆ ಮಾಡುವ ಕಾರ್ಖಾನೆಗಳ ಪರಾವನಿಗೆ ರದ್ದು ಮಾಡಿ ಪ್ಲಾಸ್ಟಿಕ್ ಉತ್ಪಾದನೆಗೆ ಕಡಿವಾಣ ಹಾಕಬೇಕು ಎಂದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಮಣಿವಣ್ಣನ್, ಕಾರ್ಯದರ್ಶಿ ಕೆ.ಸಿ. ನಾಗರಾಜ್, ಉರಿಗಾಂ ಪೊಲೀಸ್ ಠಾಣೆಯ ವೃತ್ತ ನಿರಿಕ್ಷಕ ಮಾರ್ಕಂಡಯ್ಯ, ಸಬ್‌ಇನ್ಸ್‌ಪೆಕ್ಟರ್ ರಾಜೇಶ್ವರಿ ಉಪಸ್ಥಿತರಿದ್ದರು, ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲ ಮ್ಯಾಥ್ಯುಸ್ ಸ್ವಾಗತಿಸಿ,ತ ಉಪ ಪ್ರಾಂಶುಪಾಲ ಪ್ರಸನ್ನಕುಮಾರ್ ವಂದನಾರ್ಪಣೆ ಮಾಡಿದರು.