ಹೆಣ್ಣುಮಗುವನ್ನು ಸಂರಕ್ಷಿಸಿ, ಉತ್ತಮ ಶಿಕ್ಷಣ ಕಲ್ಪಿಸಿ: ಮಲ್ಲಮ್ಮ

| Published : Jan 24 2024, 02:02 AM IST

ಹೆಣ್ಣುಮಗುವನ್ನು ಸಂರಕ್ಷಿಸಿ, ಉತ್ತಮ ಶಿಕ್ಷಣ ಕಲ್ಪಿಸಿ: ಮಲ್ಲಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಮೂಡಬೇಕು. ಇದಕ್ಕಾಗಿ ಹೆಣ್ಣುಮಗುವಿಗೆ ಉನ್ನತ ಶಿಕ್ಷಣ ನೀಡುವ ಅವಶ್ಯಕತೆ ಇದೆ. ಹೆಣ್ಣುಮಕ್ಕಳ ಭ್ರೂಣಹತ್ಯೆ ಮತ್ತು ಬಾಲ್ಯವಿವಾಹ ಕಾನೂನು ಬಾಹಿರವಾಗಿದೆ. ಇವುಗಳನ್ನು ತಡೆಗಟ್ಟಬೇಕು.

ಕನ್ನಡಪ್ರಭ ವಾರ್ತೆ ಯಾದಗಿರಿ

ಹೆಣ್ಣುಮಗುವನ್ನು ಸಂರಕ್ಷಿಸಿ, ಪೋಷಣೆ ದೊರೆಯುವಂತೆ ಮಾಡಿ, ಅವರನ್ನು ಸುಶಿಕ್ಷಿತರನ್ನಾಗಿ ಮಾಡುವುದೇ ಬೇಟಿ ಬಚಾವೊ, ಬೇಟಿ ಪಡಾವೋ ಯೋಜನೆ ಉದ್ದೇಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಮಲ್ಲಮ್ಮ ಅಮೃತ ಬಂದರವಾಡ ಹೇಳಿದರು.

ಸಮೀಪದ ಕಿಲ್ಲನಕೇರಾ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ವಿಶೇಷ ಮಕ್ಕಳ ಗ್ರಾಮಸಭೆ ನಡೆಸಿ ಅವರು ಮಾತನಾಡಿದರು.

ಮನೆಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಮೂಡಬೇಕು. ಇದಕ್ಕಾಗಿ ಹೆಣ್ಣುಮಗುವಿಗೆ ಉನ್ನತ ಶಿಕ್ಷಣ ನೀಡುವ ಅವಶ್ಯಕತೆ ಇದೆ. ಹೆಣ್ಣುಮಕ್ಕಳ ಭ್ರೂಣಹತ್ಯೆ ಮತ್ತು ಬಾಲ್ಯವಿವಾಹ ಕಾನೂನು ಬಾಹಿರವಾಗಿದೆ. ಇವುಗಳನ್ನು ತಡೆಗಟ್ಟಬೇಕು. ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವುದೇ ಕೇಂದ್ರ ಸರ್ಕಾರದ ಬೇಟಿ ಬಚಾವೊ, ಬೇಟಿ ಪಡಾವೋ ಯೋಜನೆ ಉದ್ದೇಶವಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೆನ್ನಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಶಾಹಿನ್ ಬಾನು, ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ರಾಮಚಂದ್ರ ಜೋಶಿ, ಸಹಶಿಕ್ಷಕಿ ಲಕ್ಷ್ಮೀ, ಅಂಗನವಾಡಿ ಶಿಕ್ಷಕಿಯರಾದ ಸಾಬಮ್ಮ, ಚೆನ್ನಮ್ಮ, ಮರಳಮ್ಮ ಸೇರಿದಂತೆ ಮಕ್ಕಳು, ಗ್ರಾಮಸ್ಥರು ಇದ್ದರು.