ಸಾರಾಂಶ
- ಜಿಲ್ಲಾಡಳಿತ ಭವನ ಬಳಿ ಧರಣಿಯಲ್ಲಿ ಹನುಮಂತಪ್ಪ ಸೊರಟೂರು ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆಹೊನ್ನಾಳಿ ತಾಲೂಕಿನ ಕುಂದೂರು ಗುಡ್ಡ, ಹೊಳೆ ಹರಳಹಳ್ಳಿ, ಹೊಸೂರು ಗುಡ್ಡಗಳಲ್ಲಿ ಅಕ್ರಮ ಮಣ್ಣು-ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ವೇದಿಕೆ- ಕರ್ನಾಟಕದ ನೇತೃತ್ವದಲ್ಲಿ ಗುರುವಾರ ನಗರದ ಜಿಲ್ಲಾಡಳಿತ ಭವನ ಬಳಿ ಧರಣಿ ನಡೆಯಿತು.
ಅಕ್ರಮ ಮಣ್ಣು, ಕಲ್ಲು ಗಣಿಗಾರಿಕೆ ಮಾಡುತ್ತಿರುವ ರೈತರ ಜಮೀನುಗಳನ್ನು ಸರ್ಕಾರ ಮಟ್ಟುಗೋಲು ಹಾಕಿಕೊಳ್ಳಬೇಕು. ಬೇಜವಾಬ್ದಾರಿ ಅಧಿಕಾರಿಗಳು, ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧವೂ ಕ್ರಮ ಜರುಗಿಸಬೇಕು ಎಂದರುವೇದಿಕೆ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಸೊರಟೂರು ಮಾತನಾಡಿ, ಗುಡ್ಡ, ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ರಕ್ಷಣೆ ಕೆಲಸ ಜಿಲ್ಲಾಡಳಿತ ಮಾಡಬೇಕು. ಸಾಸ್ವೇಹಳ್ಳಿ-2ನೇ ಹೋಬಳಿ ಕುಂದೂರು ಗ್ರಾಮ, ಗೋವಿನಕೋವಿ-2ನೇ ಹೋಬಳಿ, ಹೊಳೆ ಹರಳಹಳ್ಳಿ, ಹೊಸೂರು ಗ್ರಾಮದ ಗುಡ್ಡದಲ್ಲಿ ಅಕ್ರಮ ಮಣ್ಣು, ಕಲ್ಲು ಗಣಿಗಾರಿಕೆ ಹಗಲು-ರಾತ್ರಿ ನಡೆಯುತ್ತಿದೆ. ಕುಂದೂರು ಗುಡ್ಡವು ರಾಮಾಯಣ ಇತಿಹಾಸವುಳ್ಳ ಗುಡ್ಡವಾಗಿದ್ದು, ಶ್ರೀ ಆಂಜನೇಯ ದೇವಸ್ಥಾನವೂ ಇಲ್ಲಿದ್ದು, ರಕ್ಷಣೆ ಬೇಕಿದೆ. ಕುಂದೂರು ಗುಡ್ಡ, ಹೊಳೆ ಹರಳಹಳ್ಳಿ, ಹೊಸೂರು ಗುಡ್ಡಗಳಲ್ಲಿ ಅಕ್ರಮ ಮಣ್ಣು, ಕಲ್ಲು ಗಣಿಗಾರಿಕೆ ತಡೆಗೆ ತಕ್ಷಣ ಮುಂದಾಗಬೇಕು ಎಂದರು.
ಅಧಿಕಾರಿಗಳು ಅಕ್ರಮವಾಗಿ ಸಾಗುವಳಿ ಪತ್ರ ನೀಡಿ, ಕಲ್ಲು ಮತ್ತು ಮಣ್ಣು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. 20-25 ಅಡಿಗಳಷ್ಟು ಆಳಕ್ಕೆ ಗುಡ್ಡವನ್ನು ಬಗೆಯಲಾಗಿದೆ. ಗುತ್ತಿಗೆದಾರರಿಗೆ, ಲೇಔಟ್‌ಗಳು, ಕಾಮಗಾರಿಗಳಿಗೆ ಅಧಿಕಾರಿಗಳು ಮಾರಾಟ ಮಾಡುತ್ತಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದರು.ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿ, ಸರ್ಕಾರಿ ಹಿಡುವಳಿ ನೀಡಿದ ಜಮೀನುಗಳಲ್ಲಿ ಮಣ್ಣು, ಕಲ್ಲು ಸಾಗಾಟ ಮಾಡಿರುವ ಜಮೀನು ಹಿಂಪಡೆಯಬೇಕು. ಅನಧಿಕೃತವಾಗಿ ಮಣ್ಣು ದರೋಡೆ ಮಾಡಿರುವವರ ವಿರುದ್ಧ ಕ್ರಮ ಕೈಗೊಂಡು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ವಾಹನಗಳನ್ನು ಜಪ್ತಿ ಮಾಡಿ, ಸರ್ಕಾರಕ್ಕೆ ಆಗಿರುವ ನಷ್ಟ ಭರಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಹಲವರು ಪಾಲ್ಗೊಂಡಿದ್ದರು.
- - --18ಕೆಡಿವಿಜಿ9, 10: