ಪ್ರಕೃತಿ ಸಂಪತ್ತು ರಕ್ಷಣೆ ಎಲ್ಲರ ಜವಾಬ್ದಾರಿ: ಪಾಂಡೋಮಟ್ಟಿ ಶ್ರೀ

| Published : Jun 24 2024, 01:31 AM IST

ಪ್ರಕೃತಿ ಸಂಪತ್ತು ರಕ್ಷಣೆ ಎಲ್ಲರ ಜವಾಬ್ದಾರಿ: ಪಾಂಡೋಮಟ್ಟಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸುತ್ತಮುತ್ತಲಿನ ಪರಿಸರ ಹಸಿರುಮಯವಾಗಿ ಇರಬೇಕಾದರೆ ಬಿಸಿಲು, ಮಳೆ, ಚಳಿಗಾಲ ಋತುಮಾನಗಳಿಗೆ ತಕ್ಕಂತೆ ಬರಬೇಕು. ಹಾಗಾದಲ್ಲಿ ಪ್ರಕೃತಿ ಸಂಪತ್ತು ಸಮೃದ್ಧವಾಗಿ ಇರಲಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ಚನ್ನಗಿರಿಯಲ್ಲಿ ನುಡಿದಿದ್ದಾರೆ.

- ಚನ್ನಗಿರಿ ತಾಲೂಕು ಸೂಳೆಕೆರೆ ಬೆಟ್ಟದಲ್ಲಿ ಬೀಜದ ಉಂಡೆಗಳ ಹಾಕುವ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ನಮ್ಮ ಸುತ್ತಮುತ್ತಲಿನ ಪರಿಸರ ಹಸಿರುಮಯವಾಗಿ ಇರಬೇಕಾದರೆ ಬಿಸಿಲು, ಮಳೆ, ಚಳಿಗಾಲ ಋತುಮಾನಗಳಿಗೆ ತಕ್ಕಂತೆ ಬರಬೇಕು. ಹಾಗಾದಲ್ಲಿ ಪ್ರಕೃತಿ ಸಂಪತ್ತು ಸಮೃದ್ಧವಾಗಿ ಇರಲಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ನುಡಿದರು.

ಶನಿವಾರ ಸಂಜೆ ತಾಲೂಕಿನ ಸೂಳೆಕೆರೆಯ ಬೆಟ್ಟದಲ್ಲಿ ಖಡ್ಗ ಸಂಘ, ಸೂಳೆಕೆರೆ ಸಂರಕ್ಷಣಾ ಸಮಿತಿ, ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ, ಎಲ್.ಐ.ಸಿ. ಆಶ್ರಯದಲ್ಲಿ ಮರ-ಗಿಡಗಳ ಬೀಜದ ಉಂಡೆಗಳನ್ನು ಬೆಟ್ಟದಲ್ಲಿ ಹಾಕಿ, ಪರಿಸರ ಪ್ರೇಮಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮರ-ಗಿಡಗಳು ಗುಡ್ಡಗಾಡು ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯಬೇಕು. ಆಗ ಸಕಲ ಜೀವರಾಶಿಗಳಿಗೂ ಆಶ್ರಯವಾಗಲಿದ್ದೆ. ಮಾನವರು ಮರ-ಗಿಡಗಳನ್ನು ಬೆಳೆಸುತ್ತಾ ಅರಣ್ಯ ರಕ್ಷಣೆ ಮಾಡಬೇಕು ಎಂದರು.

ಸೂಳೆಕೆರೆಯ ಗುಡ್ಡಗಾಡಿನಲ್ಲಿ ಗಾಳಿಯಿಂದ ವಿದ್ಯುತ್ ತಯಾರಿಕೆಯ ಪವನ ಯಂತ್ರಗಳನ್ನು, ಸೋಲಾರ್ ಪ್ಲಾಂಟ್‌ಗಳನ್ನು ಅಳವಡಿಸುವ ಹುನ್ನಾರ ನಡೆದಿದೆ. ಇದರಿಂದ ಪ್ರಕೃತಿಯಲ್ಲಿನ ಜೀವರಾಶಿಗಳಿಗೆ ತೊಂದರೆ ಯಾಗಲಿದೆ. ಈ ಪ್ರದೇಶದಲ್ಲಿ ಇಂತಹ ಯಾವುದೇ ಯೋಜನೆಗಳು ಜಾರಿಯಾಗುವುದು ಬೇಡ. ಒಂದುವೇಳೆ ಪವನ ಯಂತ್ರಗಳನ್ನು, ಸೋಲಾರ್ ಪ್ಲಾಂಟ್‌ಗಳನ್ನು ಅಳವಡಿಸಲು ಮುಂದಾದರೆ ಪ್ರತಿಭಟನೆ ನಡೆಸಲಾಗುವುದು ಎಂದರು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ, ಸೂಳೆಕೆರೆ ಸಂರಕ್ಷಣಾ ಸಮಿತಿಯ ಚಂದ್ರಹಾಸ್, ಖಡ್ಗ ಸಂಘದ ರಘು, ಸುನೀಲ್, ಆರ್.ಎಫ್.ಒ. ಜಗದೀಶ್, ಸುನೀಲ್ ಕುಮಾರ್, ಸೋಮಶೆಟ್ಟಹಳ್ಳಿ ಸಿದ್ದಾಪುರ, ಲಿಂಗದಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.

- - -

ಕೋಟ್‌ ಅರಣ್ಯ ಪ್ರದೇಶಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವು ಗೊಳಿಸಬೇಕು. ಅರಣ್ಯ ಸಂಪತ್ತು 32 ಪರ್ಸೆಂಟ್ ಇರಬೇಕು. ಪ್ರಸ್ತುತವಾಗಿ ಕೇವಲ 14 ಪರ್ಸೆಂಟ್ ಅರಣ್ಯ ಪ್ರದೇಶವಿದೆ. ಇದು ಅಪಾಯಕಾರಿ ಬೆಳವಣಿಗೆ

- ಗುರುಬಸವ ಮಹಾಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತ ಮಠ

- - - -23ಕೆಸಿಎನ್‌ಜಿ1:

ಚನ್ನಗಿರಿ ತಾಲೂಕಿನ ಸೂಳೆಕೆರೆಯ ಬೆಟ್ಟದಲ್ಲಿ ಗಿಡಗಳ ಬೆಳೆಸುವ ಬೀಜದ ಉಂಡೆಗಳನ್ನು ಹಾಕುವ ಕಾರ್ಯಕ್ರಮದಲ್ಲಿ ಪಾಂಡೋಮಟ್ಟಿ ಶ್ರೀಗಳು, ಹಿರೇಮಠದ ಶ್ರೀಗಳು, ಅಧಿಕಾರಿಗಳು, ಪರಸರ ಪ್ರೇಮಿಗಳು ಪಾಲ್ಗೊಂಡರು.