ಸಾರಾಂಶ
ಭೂಮಿಯ ಮೇಲೆ ಬುದ್ದಿವಂತ ಜೀವಿ ಎನ್ನಿಸಿಕೊಂಡ ಮನುಜ ಇಂದು ಭೂಮಿಯ ಪರಿಸರವನ್ನೇ ಹಾಳು ಮಾಡುತ್ತಿದ್ದಾನೆ. ಇದರಿಂದಾಗಿ ಭೂಮಿಯ ಆಯಸ್ಸು ಕ್ಷೀಣಿಸುತ್ತಿದೆ. ಇದೀಗ ನಾವು ಭೂಮಿಯನ್ನು ಉಳಿಸದೇ ಇದ್ದರೇ ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ಜೀವರಾಶಿಗಳೇ ಇಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ಭೂಮಿಯ ಮಹತ್ವವ ಅರಿತುಕೊಳ್ಳಿ.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಭೂಮಿಯ ಮೇಲೆ ಬುದ್ದಿವಂತ ಜೀವಿ ಎನ್ನಿಸಿಕೊಂಡ ಮಾನವನ ದುರಾಸೆಯಿಂದ ಭೂಮಿ ದಿನೇ ದಿನೇ ನಾಶವಾಗುತ್ತಿದೆ. ಇದರಿಂದ ಇಡೀ ಜೀವ ರಾಶಿಗಳೇ ಭೂಮಿಯ ಮೇಲೆ ಇಲ್ಲದಂತಾಗುವ ಪರಿಸ್ಥಿತಿ ಉಂಟಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಭೂಮಿಯನ್ನು ರಕ್ಷಣೆ ಮಾಡುವತ್ತ ಮುಂದಾಗಬೇಕೆಂದು ಜೆ.ಎಂ.ಎಫ್.ಸಿ. ನ್ಯಾಯಾಧೀಶ ಕೆ.ಎಂ.ಹರೀಶ್ ತಿಳಿಸಿದರು.ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಗುಡಿಬಂಡೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಭೂಮಿ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಂದ ಪರಿಸರಕ್ಕೆ ಧಕ್ಕೆಭೂಮಿಯ ಮೇಲೆ ಬುದ್ದಿವಂತ ಜೀವಿ ಎನ್ನಿಸಿಕೊಂಡ ಮನುಜ ಇಂದು ಭೂಮಿಯ ಪರಿಸರವನ್ನೇ ಹಾಳು ಮಾಡುತ್ತಿದ್ದಾನೆ. ಇದರಿಂದಾಗಿ ಭೂಮಿಯ ಆಯಸ್ಸು ಕ್ಷೀಣಿಸುತ್ತಿದೆ. ಇದೀಗ ನಾವು ಭೂಮಿಯನ್ನು ಉಳಿಸದೇ ಇದ್ದರೇ ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ಜೀವರಾಶಿಗಳೇ ಇಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ಭೂಮಿಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಏ.22 ರಂದು ವಿಶ್ವ ಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
ಇದೇ ಸಮಯದಲ್ಲಿ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡದಂತೆ, ಕಡ್ಡಾಯವಾಗಿ ಹೆಲ್ಮೆಟ್ ದರಿಸುವಂತೆ, ವಾಹನ ವಿಮೆ ಮಾಡಿಸುವಂತೆ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ, ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದರೆ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುವಂತೆ, ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡದಂತೆ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಸೂಚನೆ ನೀಡಿದರು.ಭೂಮಿಯ ರಕ್ಷಣೆ ಎಲ್ಲರ ಹೊಣೆ
ಬಳಿಕ ವಕೀಲರ ಸಂಘದ ಅಧ್ಯಕ್ಷ ಟಿ.ಸಿ.ಅಶ್ವತ್ಥರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭೂಮಿಯ ಸಂರಕ್ಷಣೆಯಲ್ಲಿ ಸಮಸ್ತ ಮಾನವಕುಲದ ಜವಾಬ್ದಾರಿ ಮಹತ್ತರವಾಗಿದೆ. ಪರಿಸರ ಹಾಗೂ ಭೂಮಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಇಂದಿನ ಹಾಗೂ ಭವಿಷ್ಯದ ಪೀಳಿಗೆಗಾಗಿ ಆರ್ಥಿಕ, ಸಾಮಾಜಿಕ ಹಾಗೂ ನೈಸರ್ಗಿಕ ಸಮತೋಲನ ಸಾಧಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂಬ ಗೊತ್ತುವಳಿಯನ್ನು 1992ರ ರಿಯೋ ಸಮಾವೇಶದಲ್ಲಿ ಅಂಗೀಕರಿಸಲಾಗಿದೆ ಎಂದರು.ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಕೆ.ಆರ್.ಮಂಜುನಾಥ, ವಕೀಲರಾದ ತೇಜಶ್ರೀ, ನ್ಯಾಯಾಲಯದ ಸಿಬ್ಬಂದಿ ಸುರೇಶ್ ಸೇರಿದಂತೆ ಹಲವರು ಇದ್ದರು.