ಪರಿಸರ ಸಂರಕ್ಷಣೆಯಿಂದ ನಮ್ಮ ರಕ್ಷಣೆ

| Published : Jun 06 2024, 12:31 AM IST

ಸಾರಾಂಶ

ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕಾದಲ್ಲಿ ಉತ್ತಮ ಮತ್ತು ಆರೋಗ್ಯಕರ ಪರಿಸರದ ಅವಶ್ಯಕ

ಗದಗ: ನಾವು ಪರಿಸರ ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ, ಸುಂದರ ಪರಿಸರ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಹೇಳಿದರು.

ಅವರು ಬುಧವಾರ ಗದಗ ನಗರದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ದಂಪತಿಗಳು ದತ್ತು ಪಡೆದ ಸ್ಥಳೀಯ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕಾದಲ್ಲಿ ಉತ್ತಮ ಮತ್ತು ಆರೋಗ್ಯಕರ ಪರಿಸರದ ಅವಶ್ಯಕತೆ ಇದೆ. ಇದಲ್ಲದೇ ಜೀವನ ಸುಸ್ಥಿರವಾಗಿಸುವ ಏಕೈಕ ವಿಷಯವಾಗಿದೆ. ಪರಿಸರ ಇಲ್ಲದೇ ನಾವು ಒಂದು ದಿನವೂ ಬದುಕಲು ಸಾಧ್ಯವಿಲ್ಲ, ಉದಾಹರಣೆಗೆ ನಮ್ಮ ಚರ್ಮವು ಸುಡುತ್ತದೆ ಒತ್ತಡದ ಶ್ವಾಸಕೋಶಗಳು ಛಿದ್ರವಾಗುತ್ತವೆ ನಮ್ಮ ರಕ್ತದ ಒತ್ತಡ ಹೆಚ್ಚಾಗುತ್ತದೆ ಇದಲ್ಲದೆ ನಮಗೆ ಬದುಕಲು ಆಹಾರ ಮತ್ತು ನೀರು ಇರುವುದಿಲ್ಲ ಮತ್ತು ಶಾಖ ಮತ್ತು ವಾತಾವರಣದ ಒತ್ತಡದ ಅಸಮಾತೋಲನದಿಂದ ಇದು ಸಾಧ್ಯವಾಗುತ್ತದೆ.

ಕೊರೋನಾ ಸಂದರ್ಭದಲ್ಲಿ ಉತ್ತಮ ಗಾಳಿ ಕೊಂಡು ಬದುಕಿದ್ದನ್ನು ನೋಡಿದಾಗ ಶುದ್ಧ ಗಾಳಿ ನೀರು ಎಷ್ಟು ಮಹತ್ವದ್ದು ಎನ್ನುವುದು ಇಡೀ ಜಗತ್ತಿಗೆ ಸಾಬೀತುಪಡಿಸಿದೆ. ಹೀಗಾಗಿ ನಾವು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಅತಿ ಮುಖ್ಯ ಅಲ್ಲದೆ ನಾವು ಪರಿಸರದ ಮೇಲೆ ಮಾಡುವ ಎಲ್ಲ ಶೋಷಣೆ ಕೈ ಬಿಡೋಣ ಪರಿಸರದ ಕುರಿತು ಕಾಳಜಿ ವಹಿಸಿ ಉಸಿರಿನಂತೆ ಪರಿಸರ ರಕ್ಷಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಸಿ ನೀಡಿ ತಮ್ಮ ಮನೆಯಲ್ಲಿ ಸಸಿ ನೆಟ್ಟು ಉತ್ತಮ ಪರಿಸರಕ್ಕೆ ಕೈಜೋಡಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಬಸವರಾಜ ಧಾರವಾಡ, ನಮನ್ ನಾಯಕ್ ವಲಯ ಅರಣ್ಯ ಅಧಿಕಾರಿ ಸಾಮಾಜಿಕ ಅರಣ್ಯ ವಲಯ, ಎಸ್.ಎಂ.ಲಮಾಣಿ, ಉಪ ವಲಯ ಅರಣ್ಯ ಅಧಿಕಾರಿ ಸಾಮಾಜಿಕ ಅರಣ್ಯ ವಲಯ, ವನಪಾಲಕ ಬಡೇಸಾಬ್ ಅಲ್ಲಿ ಖಾನ್, ಪ್ರಭಾರ ಮುಖ್ಯೋಪಾಧ್ಯಾಯ ಜಯಲಕ್ಷ್ಮಿ ಅಣ್ಣಿಗೇರಿ, ಶಶಿಕಲಾ ಗುಳೇದವರ, ಮಂಜುಳಾ ಸಾಮ್ರಾಣಿ, ಸಂಜೀವಿನಿ ಕುಲಗುಡಿ, ಸುಮಂಗಲ ಪತ್ತಾರ್, ಎಂ.ಐ .ಶಿವನಗೌಡ್ರು, ಎಸ್. ಬಿ. ಗದ್ದನಕೇರಿ, ಜಿ.ಎನ್. ಅಳವಂಡಿ, ಶಂಕ್ರಮ್ಮ . ಹಣಮಗೌಡ, ಶಾರದಾ ಬಾಣದ್, ಶೋಭಾ ಗಾಳಿ, ಎಸ್.ಯು.ಕುಷ್ಟಗಿ, ನಾಗಪ್ಪ ಶಿರೋರ್, ರಮೇಶ್ ಬಸರಿ, ಪದ್ಮಾವತಿ ದಾಸರ, ಲಕ್ಷ್ಮಮ್ಮ ಮಾಳುತರ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.