ಸಾರಾಂಶ
ರಕ್ಷಣೆ ಎಂದರೆ ಕೇವಲ ಇತಿಹಾಸ ಉಳಿಸಿಕೊಳ್ಳುವುದು ಮಾತ್ರವಲ್ಲ, ಅದು ನಮ್ಮ ಒಳಗಿನ ಸಂಸ್ಕೃತಿಯ ಅರಿವನ್ನು ಜೀವಂತವಾಗಿಡುವ ಹಾಗೂ ಸಮಾಜದ ಸಾಂಸ್ಕೃತಿಕ ಬುನಾದಿ ಬಲಪಡಿಸುವ ಒಂದು ಜವಾಬ್ದಾರಿಯಾಗಿದೆ.
ಹೊಸಪೇಟೆ: ವಾಸ್ತುಶಿಲ್ಪ ಸ್ಮಾರಕಗಳು ನಮ್ಮ ಸಂಸ್ಕೃತಿಯ ಜೀವಾಳ ಆಗಿವೆ. ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಆಗಿದೆ ಎಂದು ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ. ಆರ್.ಶೇಜೇಶ್ವರ ಹೇಳಿದರು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಮಲಾಪುರ-ಹಂಪಿ, ಇನ್ಸಿಟ್ಯೂಷನ್ ಆಫ್ ಎಂಜನಿಯರ್ಸ್ (ಇಂಡಿಯಾ), ಮುನಿರಾಬಾದ್ ಹಾಗೂ ಕಮಲಾಪುರದ ವಿರೂಪಾಕ್ಷೇಶ್ವರ ಪದವಿ ಮಹಾವಿದ್ಯಾಲಯ ಸಹಯೋಗದಲ್ಲಿ ಹಂಪಿಯ ಉತ್ಪನನ ನೆಲೆ ಮತ್ತು ವೀರಭದ್ರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಂಪರೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಕ್ಷಣೆ ಎಂದರೆ ಕೇವಲ ಇತಿಹಾಸ ಉಳಿಸಿಕೊಳ್ಳುವುದು ಮಾತ್ರವಲ್ಲ, ಅದು ನಮ್ಮ ಒಳಗಿನ ಸಂಸ್ಕೃತಿಯ ಅರಿವನ್ನು ಜೀವಂತವಾಗಿಡುವ ಹಾಗೂ ಸಮಾಜದ ಸಾಂಸ್ಕೃತಿಕ ಬುನಾದಿ ಬಲಪಡಿಸುವ ಒಂದು ಜವಾಬ್ದಾರಿಯಾಗಿದೆ. ನಮ್ಮ ಪರಂಪರೆಯ ಆಚರಣೆಗಳಲ್ಲಿ ವೈಜ್ಞಾನಿಕತೆಯ ಅಂಶಗಳು ಅಡಗಿವೆ ಎಂದರು.
ಪುರಾತತ್ತ್ವ ಸಹಾಯಕ ಡಾ. ಆರ್. ಮಂಜನಾಯ್ಕ ಅವರು ಪರಂಪರೆಯ ಸಂರಕ್ಷಣೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ವಿರೂಪಾಕ್ಷೇಶ್ವರ ಸ್ವಾಮಿ ಮಹಾ ವಿದ್ಯಾಲಯದ ಪ್ರಾಚಾರ್ಯ ಬಸವರಾಜ ಎಮ್ಮಿಗನೂರ ಮಾತನಾಡಿದರು. ದಿ. ಇನ್ಸಿಟ್ಯೂಷನ್ ಆಫ್ ಇಂಜಿನೀಯರ್ಸ್ ನ ಅಧ್ಯಕ್ಷ ಡಾ.ಎಸ್. ಎಂ. ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ.ಬಿ.ಎನ್.ಬಿಎಡ್ ಪದವಿ ಮಹಾವಿದ್ಯಾಲಯದ ಡಾ.ಎಸ್.ಎಸ್. ಸಾತ್ಕಾರ, ಡಾ. ವೀಣಾ ಮತ್ತಿತರರಿದ್ದರು.