ಸಾರಾಂಶ
ದೇಶ, ಸಮಾಜ ಸಂಕಷ್ಟ ಪರಿಸ್ಥಿತಿ ಎದುರಿಸಿದರೆ ಅದೆಲ್ಲವನ್ನು ಪಾರು ಮಾಡುವ ಶಕ್ತಿ ನಮ್ಮ ಶ್ರದ್ಧಾ ಕೇಂದ್ರಗಳಿಂದ ಮಾತ್ರ ಸಾಧ್ಯ
ಲಕ್ಷ್ಮೇಶ್ವರ: ಹಿಂದುಗಳ ಶ್ರದ್ಧಾ ಕೇಂದ್ರಗಳಾದ ಮಠ-ಮಂದಿರ,ಮಾತೃಭೂಮಿ,ಗೋಮಾತೆ, ಗಂಗಾಮಾತೆ, ಧರ್ಮ ಗ್ರಂಥಗಳನ್ನು ಗೌರವಿಸಿ ರಕ್ಷಿಸಿಕೊಳ್ಳುವುದರ ಜತೆಗೆ ಅವುಗಳ ಪಾವಿತ್ರ್ಯತೆ ಕಾಯ್ದುಕೊಂಡು ಹೋಗುವುದು ಹಿಂದುಗಳ ಜವಾಬ್ದಾರಿಯಾಗಿದೆ ಎಂದು ವಿಶ್ವ ಹಿಂದು ಪರಿಷತ್ತಿನ ಗದಗ ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ ಹೇಳಿದರು.
ಅವರು ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದ ವಿಶ್ವಹಿಂದು ಪರಿಷತ್‌ನ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶ, ಸಮಾಜ ಸಂಕಷ್ಟ ಪರಿಸ್ಥಿತಿ ಎದುರಿಸಿದರೆ ಅದೆಲ್ಲವನ್ನು ಪಾರು ಮಾಡುವ ಶಕ್ತಿ ನಮ್ಮ ಶ್ರದ್ಧಾ ಕೇಂದ್ರಗಳಿಂದ ಮಾತ್ರ ಸಾಧ್ಯ ಎಂದರು.ಧಾರ್ಮಿಕ ಶ್ರದ್ಧೆಯ ಜತೆಗೆ ದೇಶ ಭಕ್ತಿ ಸಮಾಜಕ್ಕೆ ತಿಳಿಸಿಕೊಡುವ ಕೆಲಸ ವಿಶ್ವ ಹಿಂದು ಪರಿಷತ್ ಮಾಡುತ್ತಿದ್ದು, ಭಾರತ ದೇಶದ ಜತೆಗೆ ವಿದೇಶಗಳಲ್ಲಿಯೂ ತನ್ನ ಕಾರ್ಯಚಟುವಟಿಕೆ ಮಾಡುತ್ತ ಸನಾತನ ಧರ್ಮದ ಸಾರ ಸಮಾಜಕ್ಕೆ ತಿಳಿಸುವ ಕೆಲಸ ಪರಿಷತ್ ಮಾಡುತ್ತಿದ್ದು, ಇದರಿಂದ ಭಯಪಡುವ ಮತಾಂಧ ಶಕ್ತಿಗಳು,ಸ್ವಾರ್ಥ ರಾಜಕಾರಣಿಗಳು ತಮ್ಮ ಅಸ್ವಿತ್ವವೇ ನಾಶವಾಗಿತೆಂದು ಭಯದಲ್ಲಿ ದೇಶಭಕ್ತ ಸಂಘಟನೆಗಳ ಬಗ್ಗೆ ಅಪಪ್ರಚಾರ ಮಾಡಿ ಸಮಾಜ ಒಡೆಯುವ ಕೃತ್ಯ ಖಂಡನೀಯ ಎಂದರು.
ಈ ವೇಳೆ ನಿವೃತ್ತ ಸೈನಿಕ ರಮೇಶ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು. ಅಮಿತ್ ಚವ್ಹಾಣ ಸ್ವಾಗತಿಸಿದರು. ದಶರಥ ತೋಟದ ವಂದಿಸಿದರು. ಚೇತನ ಎಲಿಗಾರ ಕಾರ್ಯಕ್ರಮ ನಿರ್ವಹಿಸಿದರು.