ಸಾರಾಂಶ
ಅಪರೂಪದ ಗೂಬೆ ಮರಿಗಳ ರಕ್ಷಣೆ
ಕನ್ನಡಪ್ರಭ ವಾರ್ತೆ ತುಮಕೂರುತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ಅನಾಥವಾಗಿದ್ದ 5 ಗೂಬೆ ಮರಿಗಳನ್ನು ರಕ್ಷಿಸಲಾಗಿದೆ.ಕಾಲೇಜು ಆವರಣದಲ್ಲಿ ಗೂಬೆ ಮರಿಗಳನ್ನು ಕಂಡ ಡಾ. ಮಾಂತೇಶ್ ಕೂಡಲೇ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಂಸ್ಥೆಯ ಉರಗ ಸಂರಕ್ಷಕ ಮನು ಅಗ್ನಿವಂಶಿ ಮತ್ತು ಚೇತನ್ ಅಪರೂಪದ 5 ಬರ್ನ್ ಔಲ್ ಜಾತಿಯ (ಕಣಜದ ಗೂಬೆ) ಮರಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ವೇಳೆ ಮಾತನಾಡಿದ ಉರಗ ಸಂರಕ್ಷಕ ಮನು ಅಗ್ನಿವಂಶಿ 5 ಮರಿಗಳನ್ನು ವಲಯ ಅರಣ್ಯಾಧಿಕಾರಿ ನಮಿತಾ ರವರ ಅನುಮತಿ ಪಡೆದು ಬೆಂಗಳೂರಿನ ಪೀಪಲ್ ಫಾರ್ ಆ್ಯನಿಮಲ್ಸ್ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು. ಹಾವುಗಳು ಹಾಗೂ ಇತರೆ ವನ್ಯಜೀವಿ ರಕ್ಷಣೆ ಮಾಡಲು 9964519576 ಕರೆಮಾಡಬಹುದು ಎಂದು ತಿಳಿಸಿದರು.