ಕುರಿಗಾರರ ರಕ್ಷಣೆ ಸರ್ಕಾರದ ಹೊಣೆಯಾಗಬೇಕು: ಎ.ಎನ್.ಮಹೇಶ್

| Published : May 22 2024, 12:49 AM IST

ಕುರಿಗಾರರ ರಕ್ಷಣೆ ಸರ್ಕಾರದ ಹೊಣೆಯಾಗಬೇಕು: ಎ.ಎನ್.ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಅನುಸಾರ ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಎ.ಎನ್.ಮಹೇಶ್ ಅವರಿಗೆ ಚಿಕ್ಕಮಗಳೂರು ಕುರಿ ಮತ್ತು ಉಣ್ಣೆ ಸಹಕಾರ ಸಂಘದ ವತಿಯಿಂದ ಕಚೇರಿಯಲ್ಲಿ ಮಂಗಳವಾರ ಅಭಿನಂದಿಸಲಾಯಿತು.

ಚಿಕ್ಕಮಗಳೂರು ಕುರಿ-ಉಣ್ಣೆ ಸಹಕಾರ ಸಂಘದಿಂದ ಅಭಿನಂದನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಅನುಸಾರ ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಎ.ಎನ್.ಮಹೇಶ್ ಅವರಿಗೆ ಚಿಕ್ಕಮಗಳೂರು ಕುರಿ ಮತ್ತು ಉಣ್ಣೆ ಸಹಕಾರ ಸಂಘದ ವತಿಯಿಂದ ಕಚೇರಿಯಲ್ಲಿ ಮಂಗಳವಾರ ಅಭಿನಂದಿಸಲಾಯಿತು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎ.ಎನ್.ಮಹೇಶ್ ರಾಜ್ಯದ ಜನಸಂಖ್ಯೆಯಲ್ಲಿ 70 ಲಕ್ಷದಷ್ಟು ಸಂಖ್ಯೆಯಿರುವ ಕುರಿ ಗಾರರು ಅಸಂಘಟಿತ ಕಾರ್ಮಿಕರಿದ್ದಾರೆ. ಇವರ ರಕ್ಷಣೆ ಸರ್ಕಾರದ ಹೊಣೆಯಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಈ ಸಮುದಾಯಕ್ಕೆ ಆರ್ಥಿಕ ಸಬಲತೆ ಇಲ್ಲ, ಆಧುನಿಕ ಸಾಕಾಣಿಕೆ ಪದ್ಧತಿಯಲ್ಲಿ ಸಾಕಾಣಿಕೆ ಮಾಡಲು ಕಷ್ಟವಾಗುತ್ತಿದೆ ಎಂದರು.ಕುರಿಗಾರರ ನೆರವಿಗೆ ಸರ್ಕಾರ ಧಾವಿಸುವ ಅಗತ್ಯ ಇದೆ. ಆ ನಿಟ್ಟಿನಲ್ಲಿ ನಮ್ಮ ಸಹಕಾರ ಸಂಘ ಎಲ್ಲಾ ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದು ಕುರಿಗಾರರ ರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.ರಾಜ್ಯದ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರು ಹೊಸದಾಗಿ ಜವಾಬ್ದಾರಿ ನೀಡಿದ್ದು ಸಮಿತಿ ಅಧ್ಯಕ್ಷರಾಗಿ ರಾಜ್ಯ ಪರಿಸರಕ್ಕೆ ಸಂಬಂಧಿಸಿದ ಹೊಣೆ ತಮ್ಮ ಮೇಲಿದೆ. ಅದನ್ನು ಸಮರ್ಥವಾಗಿ ನಿರ್ವಹಿಸಲಾಗುವುದು. ಅಲ್ಲದೇ ಕೇಂದ್ರ ಸರ್ಕಾರದ ಪರಿಸರ ಇಲಾಖೆ ನಿಯಮಗಳು ಸ್ಪಷ್ಟವಾಗಿದ್ದು ಅದನ್ನು ಅನುಷ್ಟಾನಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಸಂಘದ ಉಪಾಧ್ಯಕ್ಷ ಕೆ.ಸಿ.ಕೆಂಗೇಗೌಡ ಮಾತನಾಡಿ, ಯೋಗ್ಯ ವ್ಯಕ್ತಿಗೆ ಸರಿಯಾದ ಜವಾಬ್ದಾರಿಯನ್ನು ಸರ್ಕಾರ ನೀಡಿದ್ದು ಅವರ ವಿದ್ಯಾಭ್ಯಾಸ ಹಾಗೂ ಅನುಭವ ಸಂಬಂಧಿಸಿದ ವಿಷಯದಲ್ಲಿದ್ದು ಅವರ ಆಯ್ಕೆಗೊಳಿಸಿರುವುದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಭರತೇಶ್, ಪರಮೇಶ್ವರಪ್ಪ, ಲಕ್ಷ್ಮಣಗೌಡ, ಗೀತಾ ಬಾಯಿ, ರಮೇಶ್, ಎ.ಮೂರ್ತಿ, ಅಡವೇಗೌಡ, ವಸಂತ್‌ಕುಮಾರ್, ಹರ್ಷವರ್ಧನ್, ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಎಚ್.ಮನು ಉಪಸ್ಥಿತರಿದ್ದರು.

21 ಕೆಸಿಕೆಎಂ 5ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಎ.ಎನ್.ಮಹೇಶ್ ಅವರಿಗೆ ಚಿಕ್ಕಮಗಳೂರು ಕುರಿ ಮತ್ತು ಉಣ್ಣೆ ಸಹಕಾರ ಸಂಘದಿಂದ ಕಚೇರಿಯಲ್ಲಿ ಮಂಗಳವಾರ ಅಭಿನಂದಿಸಲಾಯಿತು.