ಸಾರಾಂಶ
ತಾಲೂಕಿನ ಕಡಕೋಳ ಗ್ರಾಮದ ದೇವಸ್ಥಾನಗಳು, ಮನೆಗಳು ಹಾಗೂ ಖಾಲಿ ಇರುವ ಸರ್ಕಾರಿ ನಿವೇಶನಗಳನ್ನು ಅನಧಿಕೃತವಾಗಿ ವಕ್ಫ್‌ಗೆ ಸೇರಿಸುತ್ತಿರುವುದನ್ನು ಆಕ್ಷೇಪಿಸಿ ಗ್ರಾಮಸ್ಥರು ಪಟ್ಟಣದ ಕಂದಾಯ ಇಲಾಖೆ ಎದುರಲ್ಲಿ ಸಾಂಕೇತಿಕ ಪ್ರತಿಭಟನೆ ಕೈಗೊಂಡು ಆರ್‌ಐ ಮೈಲಾರಿ ಸಂಜೀವಣ್ಣನವರ ಮೂಲಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸವಣೂರು: ತಾಲೂಕಿನ ಕಡಕೋಳ ಗ್ರಾಮದ ದೇವಸ್ಥಾನಗಳು, ಮನೆಗಳು ಹಾಗೂ ಖಾಲಿ ಇರುವ ಸರ್ಕಾರಿ ನಿವೇಶನಗಳನ್ನು ಅನಧಿಕೃತವಾಗಿ ವಕ್ಫ್‌ಗೆ ಸೇರಿಸುತ್ತಿರುವುದನ್ನು ಆಕ್ಷೇಪಿಸಿ ಗ್ರಾಮಸ್ಥರು ಪಟ್ಟಣದ ಕಂದಾಯ ಇಲಾಖೆ ಎದುರಲ್ಲಿ ಸಾಂಕೇತಿಕ ಪ್ರತಿಭಟನೆ ಕೈಗೊಂಡು ಆರ್‌ಐ ಮೈಲಾರಿ ಸಂಜೀವಣ್ಣನವರ ಮೂಲಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕಡಕೋಳ ಗ್ರಾಮದಲ್ಲಿ ಸುಮಾರು ನೂರು ವರ್ಷ ಇತಿಹಾಸವುಳ್ಳ ಪುರಾತನ ಹನುಮಂತ ದೇವರ ದೇವಸ್ಥಾನ, ಗರಡಿಮನೆಯ ಆಸ್ತಿ ಸೇರಿದಂತೆ ಪಿತ್ರಾರ್ಜಿತ ಆಸ್ತಿ ಹೊಂದಿರುವ ೬೧ ಮನೆಗಳನ್ನು ವಕ್ಫ್ ಮಂಡಳಿ ಹೆಸರಿಗೆ ನೋಂದಾಯಿಸುವ ಮೂಲಕ ಬಹಿರಂಗವಾಗಿ ಮೋಸ ಮಾಡಿದ್ದಾರೆ. ಆದ್ದರಿಂದ, ಅನಧಿಕೃತವಾಗಿ ವಕ್ಫ್ ಮಂಡಳಿಗೆ ಸೇರಿಸುತ್ತಿರುವುದನ್ನು ಕೂಡಲೇ ತಡೆ ಹಿಡಿಯಬೇಕು ಎಂದು ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದಾರೆ.ತಾಪಂ ಮಾಜಿ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣವರ, ಗ್ರಾಮಸ್ಥರಾದ ಮಹೇಶ ಗುಜ್ಜರಿ, ಮಹಾಂತೇಶ ಹಡಪದ, ಮಂಜುನಾಥ ಧರಿಯಪ್ಪನವರ, ಶಿವಕುಮಾರಸ್ವಾಮಿ ಚನ್ನಾಪುರಮಠ, ಗುಡ್ಡಪ್ಪ ಬಾರ್ಕಿ, ಚಂದ್ರು ರಿತ್ತಿ, ಗುಡ್ಡಪ್ಪ ರಿತ್ತಿ, ಗಂಗವ್ವ ರಿತ್ತಿ, ತಿಪ್ಪಣ್ಣ ಬಾರ್ಕಿ, ರಾಮಣ್ಣ ಬಾರ್ಕಿ, ಸರಸ್ವತಿ ಬಾರ್ಕಿ, ರೇಣವ್ವ ಬಾರ್ಕಿ, ವಿಜವ್ವ ಬಾರ್ಕಿ, ಸುರೇಶ ಗುಜ್ಜರಿ, ಗಣೇಶ ಬಾರ್ಕಿ, ಯಲ್ಲಪ್ಪ ಬಾರ್ಕಿ, ಮಲ್ಲೇಶ ಬಾರ್ಕಿ ಹಾಗೂ ಇತರರು ಇದ್ದರು.