ಅಂಜಲಿ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

| Published : May 19 2024, 01:47 AM IST

ಅಂಜಲಿ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನೇಹಾ ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ನಗರದಲ್ಲಿ ಮತ್ತೋಂದು ಕೊಲೆ ಪ್ರಕರಣ ನಡೆದಿದೆ. ಹೀಗಾಗಿ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರಲು ಹಿಂಜರಿಯುವಂತ್ತಾಗಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ಹುಬ್ಬಳ್ಳಿ ನಗರದ ಅಂಜಲಿ ಅಂಬಿಗೇರ ಕೊಲೆಗೈದ ಆರೋಪಿಯನ್ನು ಮರಣ ದಂಡನೆ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ ಕೊಲಿ ಸಮಾಜದಿಂದ ಪ್ರತಿಭಟನೆ ಮರವಣಿಗೆ ನಡೆಸಿ ತಹಸೀಲ್ದಾರ್‌ ಮಲ್ಲಣ್ಣ ಯಲಗೋಡ ಅವರ ಮುಖಾಂತರ ಸಿಎಂ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಶೋಭಾ ಬಾಣಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ನೇಹಾ ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ನಗರದಲ್ಲಿ ಮತ್ತೋಂದು ಕೊಲೆ ಪ್ರಕರಣ ನಡೆದಿದೆ. ಹೀಗಾಗಿ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರಲು ಹಿಂಜರಿಯುವಂತ್ತಾಗಿ ಭಯದ ವಾತಾವರಣ ನಿರ್ಮಾಣವಾಗಿದೆ.

ಸರ್ಕಾರ ಕೇವಲ ಗ್ಯಾರಂಟಿಗಳನ್ನು ಹೇಳುತ್ತಿದ್ದು ಮಹಿಳೆಯರ ರಕ್ಷಣೆಗೆ ಗ್ಯಾರಂಟಿ ಕೊಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಮರೆಪ್ಪ ಬಡಿಗೇರ ಭಗವಂತರಾಯ ಬೆಣ್ಣೂರ, ರಾಜು ತಳವಾರ, ಭೀಮರಾಯ ಜನಿವಾರ, ಬಾಬು ಪಾಟೀಲ, ಕಾಂತಪ್ಪ ಪೂಜಾರಿ, ಭೀಮರಾಯ ಮುತ್ತಕೊಡ, ಅಂಜಲಿ ಕೊರಬಾ, ಭಾಗೇಶ ಹೋತಿನಮಡು, ಮಲ್ಲಿಕಾರ್ಜುನ ಕುಸ್ತಿ, ಶಿವಪುತ್ರಪ್ಪ ಕೊಣಿನ, ಗುರು ಜೈನಾಪುರ ಸೇರಿದಂತೆ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಕೋಲಿ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.