ಚಾಲಕರ ವಿರೋಧಿ ಮಸೂದೆ ಖಂಡಿಸಿ ಪ್ರತಿಭಟನೆ

| Published : Jan 07 2024, 01:30 AM IST

ಚಾಲಕರ ವಿರೋಧಿ ಮಸೂದೆ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಚಾಲಕರ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಬಳಿ ಆಕ್ರೋಶ

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಚಾಲಕರ ವಿರೋಧಿ ಮಸೂದೆ ವಿರೋಧಿಸಿ ಕರ್ನಾಟಕ ಚಾಲಕರ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿ.25 ರಂದು ಸಂಸತ್ತಿನಲ್ಲಿ ಚಾಲಕರ ವಿರೋಧಿಯಾದ ಅವೈಜ್ಞಾನಿಕ ಮಸೂದೆಯನ್ನು ಮಂಡಿಸಿದ್ದಾರೆ. ಅದು ಈಗಾಗಲೇ ರಾಷ್ಟ್ರಪತಿಗಳ ಅಂಕಿತಕ್ಕೂ ಹೋಗಿದೆ. ಓರ್ವ ಚಾಲಕ ಅಪಘಾತ ಮಾಡಿದರೆ ಗಾಯಗೊಂಡವರನ್ನು ರಸ್ತೆಯಲ್ಲೇ ಬಿಟ್ಟು ಹೋಗುವಂತಿಲ್ಲ. ಸ್ಥಳದಲ್ಲೇ ಇದ್ದು ಚಿಕಿತ್ಸೆ ಕೊಡಿಸಬೇಕು. ಮಹಜರು ಸಂದರ್ಭದಲ್ಲಿ ಸ್ಥಳದಲ್ಲಿರದಿದ್ದರೆ 10 ಲಕ್ಷ ರೂ. ದಂಡ ವಿಧಿಸಬಹುದಾದ ಕಾನೂನು ತರಲು ಮುಂದಾಗಿದ್ದಾರೆ. ಇದು ಚಾಲಕರನ್ನು ಪರೋಕ್ಷವಾಗಿ ಕೊಲ್ಲುವ ಪ್ರಯತ್ನ ಎಂದು ಅವರು ಕಿಡಿಕಾರಿದರು.

ಅಪಘಾತದ ಸಂದರ್ಭದಲ್ಲಿ ಸಾರ್ವಜನಿರು ವಾಹನ ಚಾಲಕರನ್ನು ಥಳಿಸಿ, ಕೊಲೆ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಈ ಕಾನೂನು ಜಾರಿಯಾದರೆ ಚಾಲಕರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಅವರು ಆತಂಕ ವಕ್ತಪಡಿಸಿದರು.

ಹೊರ ರಾಜ್ಯ ಪರ್ಮಿಟ್‌ ಗಳನ್ನು ನಿಲ್ಲಿಸಬೇಕು. ಸಾರಿಗೆ ಇಲಾಖೆಯಿಂದ ಮೈಸೂರು ಜಿಲ್ಲೆಯ ಎಲ್ಲಾ ಆಟೋ ಚಾಲಕರಿಗೆ ಚಾಲನ ಪರವಾನಗಿ ಬ್ಯಾಡ್ಜ್ ವಿತರಿಸಬೇಕು. ಮೈಸೂರು ಪ್ರವಾಸಿ ತಾಣವಾಗಿರುವುದರಿಂದ ನಗರದ ಆಟೋಗಳ ಅಂತರದ ಪರ್ಮಿಟ್‌ ಅನ್ನು 25- 30 ಕಿ.ಮೀ.ವರೆಗೂ ವಿಸ್ತರಿಸಬೇಕು. ಆಟೋದವರಿಗೆ ಮಾರಕವಾಗಿರುವ ರ್ಯಾ-ಪಿಡೋ, ಉಬರ್, ಓಲಾ ಬೈಕ್ ಟ್ಯಾಕ್ಸಿಗಳನ್ನು ಬ್ಯಾನ್ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಜಿ. ಮುರುಗನ್, ನಗರಾಧ್ಯಕ್ಷ ಸತ್ಯನಾರಾಯಣ್‌ ಸಿಂಗ್, ಪದಾಧಿಕಾರಿಗಳಾದ ಪಿ. ವಿನಾಯಕ, ಶಿವಕುಮಾರ್, ಸುರೇಶ್ ಮೊದಲಾದವರು ಇದ್ದರು.