ಸಾರಾಂಶ
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ಭಾನುವಾರ ಆಪ್ ಕಾರ್ಯಕರ್ತರು ದೇಶಾದ್ಯಂತ ಕರೆ ನೀಡಿದ್ದ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಳಗಾವಿಯಲ್ಲಿ ಆಪ್ ಕಾರ್ಯಕರ್ತರು ನಗರದ ಚನ್ನಮ್ಮವೃತ್ತದ ಬಳಿ ಧರಣಿ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ಭಾನುವಾರ ಆಪ್ ಕಾರ್ಯಕರ್ತರು ದೇಶಾದ್ಯಂತ ಕರೆ ನೀಡಿದ್ದ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಳಗಾವಿಯಲ್ಲಿ ಆಪ್ ಕಾರ್ಯಕರ್ತರು ನಗರದ ಚನ್ನಮ್ಮವೃತ್ತದ ಬಳಿ ಧರಣಿ ನಡೆಸಿದರು.
ಎಎಪಿ ಜಿಲ್ಲಾಧ್ಯಕ್ಷ ಶಂಕರ ಹೆಗ್ಗಡೆ ಮಾತನಾಡಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಡ ಜನರ ಆಶಾದಾಯಕ ವ್ಯಕ್ತಿ. ದೇಶದ ರಾಜಕಾರಣ ಬದಲಾಯಿಸಿದ ವ್ಯಕ್ತಿ ಅರವಿಂದ ಕೇಜ್ರಿವಾಲ್, ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದ ಒಂದು ದಿನದ ಉಪವಾಸ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು .ಈ ಧರಣಿಯಲ್ಲಿ ರವೀಂದ್ರ ಬೆಲ್ಲದ , ಎಂ.ಕೆ. ಸೈಯದ್ ,ಜುನೈದ್ ಸೈಯದ್ ಇತರರು ಭಾಗವಹಿಸಿದ್ದರು.