ಛಾಯಾಗ್ರಾಹಕರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

| Published : May 25 2024, 12:45 AM IST

ಸಾರಾಂಶ

ಬೆಂಗಳೂರಿನಲ್ಲಿ ಛಾಯಾಗ್ರಾಹಕರ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ರಾಮದುರ್ಗ ತಾಲೂಕು ವೃತ್ತಿನಿರತ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ಸಂಘದ ಪದಾಧಿಕಾರಿಗಳು ಬೈಕ್‌ ರ್‍ಯಾಲಿಯ ಮೂಲಕ ಪ್ರತಿಭಟನೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗಬೆಂಗಳೂರಿನಲ್ಲಿ ಛಾಯಾಗ್ರಾಹಕರ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ರಾಮದುರ್ಗ ತಾಲೂಕು ವೃತ್ತಿನಿರತ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ಸಂಘದ ಪದಾಧಿಕಾರಿಗಳು ಬೈಕ್‌ ರ್‍ಯಾಲಿಯ ಮೂಲಕ ಪ್ರತಿಭಟನೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಬೆಂಗಳೂರಿನ ಶಿವಾಜಿನಗರದ ಶೈಮ್ಸ್ ಕಲ್ಯಾಣ ಮಂಟಪದಲ್ಲಿ ವೃತ್ತಿ ನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ವೃತ್ತಿ ನಿರತ ಛಾಯಾಗ್ರಾಹಕರ ಕ್ಯಾಮೆರಾ ಪರಿಕರ ಕಳ್ಳತನ, ಸ್ಪುಡಿಯೋಗಳಲ್ಲಿ ಕಳ್ಳತನ ಮತ್ತು ಛಾಯಾಗ್ರಾಹಕರನ್ನು ರಸ್ತೆಗೆ ಅಡ್ಡಗಟ್ಟಿ ಪರಿಕರಗಳನ್ನು ವಶ ಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅತಿ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡ ವೃತ್ತಿಪರರು. ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಛಾಯಾಚಿತ್ರಗಾರರ ರಕ್ಷಣೆ ಮತ್ತು ಪರಿಕರಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಶಿವಾಜಿನಗರದಲ್ಲಿ ಹಲ್ಲೆಗೊಳಗಾದ ಛಾಯಾಗ್ರಾಹಕನಿಗೆ ನ್ಯಾಯ ಕೊಡಿಸಲು ಪೊಲೀಸರು ಕ್ರಮ ಜರುಗಿಸಬೇಕು ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ತಾಲೂಕು ವೃತ್ತಿನಿರತ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ಗೌರವಾಧ್ಯಕ್ಷ ರಮೇಶ್ ರಾಯಬಾಗ. ಅಧ್ಯಕ್ಷ ವಿಜಯ ನಾಯ್ಕ, ಉಪಾಧ್ಯಕ್ಷ ಸಿದ್ದು ಮೋಹಿತೆ. ಕಾರ್ಯದರ್ಶಿ ಅಕ್ಷಯ್ ಯಾದವಾಡ. ಖಜಾಂಚಿ ಸೋಮೇಶ್ವರ ಕುಂದರಗಿ, ಬಸವರಾಜ ಬಾರ್ಕಿ, ವೀರಣ್ಣ ಕಟ್ಟಿಮನಿ. ಬಾಲನಗೌಡ ಪಾಟೀಲ್. ಮಾಂತೇಶ್ ಗೋಡಿ. ಮರಾತಿ ಪತ್ತಾರ. ಮೌನೇಶ್ ಪತ್ತಾರ್. ಸಿದ್ದಪ್ಪ ಬೂತಾಳಿ ಸೇರಿದತೆ ತಾಲೂಕಿನ ವಿವಿಧ ಗ್ರಾಮಗಳ ಛಾಯಾಗ್ರಾಹಕರು ಭಾಗವಹಿಸಿದ್ದರು.24ಆರ್‌ಎಂಡಿ1