ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣವರ್ಷಗಳಿಂದ ಸರ್ವೇ ಇಲಾಖೆಯಲ್ಲಿ ರೈತರ ಕೆಲಸಗಳು ಸಮರ್ಪಕವಾಗಿ ಆಗದೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಮಿನಿ ವಿಧಾನಸೌಧದ ಎದುರು ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿ ಮಾತನಾಡಿದ ರಾಜ್ಯ ರೈತ ಸಂಘದ ಸಂಚಾಲಕ ಮೀಸೆ ಮಂಜಣ್ಣ, ಹಲವು ವರ್ಷಗಳಿಂದ ರೈತರ ಜಮೀನಿಗೆ ಸರ್ವೆಗೆ ಬಾರದೆ ಇಲಾಖೆಯವರು ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳ ನಡುವೆ ನಡೆಯುತ್ತಿರುವ ಗುದ್ದಾಟಕ್ಕೆ ರೈತರು ಬಡವಾಗುತ್ತಿದ್ದಾರೆ, ಲಂಚ ನೀಡಿ ಜಮೀನಿನ ಸರ್ವೆ ಮಾಡಿಸಿಕೊಳ್ಳುವ ಪರಿಮಿತ ಈ ಸಂಬಂಧ ಅಧಿಕಾರಿಗಳಿಗೆ ಕೇಳಿದರೆ ಸರ್ವೇ ಅಧಿಕಾರಿಗಳು ಮುಷ್ಕರವನ್ನು ನಡೆಸುತ್ತಿದ್ದಾರೆ. ಆದ್ದರಿಂದ ರೈತರ ಕೆಲಸ ನಡೆಸಲು ಆಗುತ್ತಿಲ್ಲ ಎಂದು ಸಮಜಾಯಿಸಿ ಉತ್ತರ ನೀಡುತ್ತಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಗಮನ ಹರಿಸದೆ ಬರೀ ಅಧಿಕಾರಕ್ಕಾಗಿ ಹೆಚ್ಚು ಮಹತ್ವವನ್ನು ನೀಡುತ್ತಿದೆ. ಆದರೆ ರೈತರ ಗೋಳು ಕೇಳುವವರು ಯಾರು, ರೈತರು ಹಲವು ವರ್ಷಗಳಿಂದ ಅರ್ಜಿ ಕಟ್ಟಿ ಸರ್ವೆ ಮಾಡಿಸಲು ಕಾಯುತ್ತಿದ್ದರೂ ಸಹ ಸ್ಥಳಗಳಿಗೆ ಭೇಟಿ ನೀಡಿ ರೈತರಿಗೆ ಅನುಕೂಲ ವಾಗುವಂತೆ ಇಲಾಖೆಯವರು ಕೆಲಸ ಮಾಡದೇ ಇರುವುದು ಖಂಡನೀಯ, ಮುಂದಿನ ದಿನಗಳಲ್ಲಿ ರೈತರ ಕೆಲಸವನ್ನು ಸಮರ್ಪಕವಾಗಿ ಮಾಡಿಕೊಡದೆ ಹೋದರೆ ಸರೈತರ ಪರವಾಗಿ ಉಗ್ರ ಹೋರಾಟವನ್ನ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.ಉಪತಹಸೀಲ್ದಾರ್‌ ಪವನ್‌ ಕುಮಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ತಾಂಡವೇಶ್, ರೈತ ಮುಖಂಡರಾದ ಕುಮಾರ್‌, ಶಿವಣ್ಣ ಸೊಪ್ಪಿನಹಳ್ಳಿ, ಮಹೇಶ್, ರಂಗಸ್ವಾಮಿ, ಚಲುವರಾಜ್ ಮತ್ತಿತರಿದ್ದರು.