ವಿದ್ಯಾರ್ಥಿಗಳಿಗೆ ಬಲವಂತದ ಧಾರ್ಮಿಕ ಬೋಧನೆ ಖಂಡಿಸಿ ಪ್ರತಿಭಟನೆ

| Published : Feb 14 2025, 12:30 AM IST

ವಿದ್ಯಾರ್ಥಿಗಳಿಗೆ ಬಲವಂತದ ಧಾರ್ಮಿಕ ಬೋಧನೆ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಮಕ್ಕಳಿಗೆ ಧರ್ಮ ಬೋಧನೆ ನಡೆಸಿರುವುದರ ಬಗ್ಗೆ ಕೂಡಲೇ ತನಿಖೆ ಆಗಬೇಕು. ತಾಲೂಕಿನಲ್ಲಿ ತಲೆ ಎತ್ತುತ್ತಿರುವ ಚರ್ಚ್‌ಗಳ ಸ್ಥಾಪನೆಯ ಅನುಮತಿಯ ಬಗ್ಗೆ ಸಂಬಂಧಪಟ್ಟ ಇಲಾಖೆ ಪರಿಶೀಲನೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಹುಳಿಯಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬಲವಂತದ ಧಾರ್ಮಿಕ ಬೋಧನೆ ನಡೆಸಿದ ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದು ಹಿತರಕ್ಷಣೆ ವೇದಿಕೆಯಿಂದ ಬರುವ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ನೆಹರು ಸರ್ಕಲ್‌ನಲ್ಲಿ ಹುಳಿಯಾರಿನ ಚರ್ಚ್‌ನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಬಲವಂತದಿಂದ ಧಾರ್ಮಿಕ ಬೋಧನೆ ನಡೆಸಿದೆ ಎಂದು ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಾಮರಸ್ಯದ ಜಿಲ್ಲಾ ಸಹ ಸಂಚಲಕ ನಾಗರಾಜ್ ಮಾತನಾಡಿ, ಶಾಲಾ ಮಕ್ಕಳಿಗೆ ಧರ್ಮ ಬೋಧನೆ ನಡೆಸಿರುವುದರ ಬಗ್ಗೆ ಕೂಡಲೇ ತನಿಖೆ ಆಗಬೇಕು. ತಾಲೂಕಿನಲ್ಲಿ ತಲೆ ಎತ್ತುತ್ತಿರುವ ಚರ್ಚ್‌ಗಳ ಸ್ಥಾಪನೆಯ ಅನುಮತಿಯ ಬಗ್ಗೆ ಸಂಬಂಧಪಟ್ಟ ಇಲಾಖೆ ಪರಿಶೀಲನೆ ನಡೆಸಬೇಕು. ಧರ್ಮ ಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಬಿಜೆಪಿ ಮುಖಂಡ ರಾಕೇಶ್ ಅಣೆಕಟ್ಟೆ ಮಾತನಾಡಿ, ಏನು ಅರಿಯದ ಮಕ್ಕಳನ್ನು ಚರ್ಚಿಗೆ ಕರೆದುಕೊಂಡು ಹೋಗಿ ಧರ್ಮದ ವಿಷ ಬೀಜ ಬೀಜ ಬಿತ್ತುವ ಪ್ರಯತ್ನ ನಡೆಯುತ್ತಿದ್ದು, ಕೈಗಾರಿಕಾ ಬೇಟಿಯ ಹೆಸರಲ್ಲಿ ಸರ್ಕಾರಿ ಶಿಕ್ಷಕರೇ ಚರ್ಚ್‌ಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಇಲ್ಲಸಲಾದ ವಿಷಯಗಳನ್ನು ಮಕ್ಕಳಿಗೆ ತುಂಬುತ್ತಿರುವುದು ಖಂಡನೀಯ ಎಂದರು.ಮಿಲಿಟರಿ ಶಿವಣ್ಣ ಮಾತನಾಡಿ, ಯೇಸು ಕ್ರಿಸ್ತನ ಪರಿಚಯದ ಮೂಲಕ ನಮ್ಮ ಹಿಂದೂ ಧರ್ಮದ ಅವಹೇಳನ ಮಾಡುವ ಧೈರ್ಯ ಆ ಚರ್ಚ್ ಪಾದ್ರಿಗೆ ಎಲ್ಲಿಂದ ಬಂತು. ಶಾಲೆಯ ಸಮಯದಲ್ಲಿ ಮಕ್ಕಳನ್ನು ಚರ್ಚೆಗೆ ಕರೆದುಕೊಂಡು ಹೋಗುವ ಅವಶ್ಯಕತೆ ಏನಿತ್ತು. ಬಲವಂತವಾಗಿ ಮಕ್ಕಳನ್ನು ಒಂದು ಕಡೆ ಸೇರಿಸಿಕೊಂಡು ಇಲ್ಲಸಲ್ಲದ ವಿಷಯಗಳನ್ನು ಹೇಳಲು ಸಂಬಂಧಪಟ್ಟ ಶಿಕ್ಷಕರು ಪಾದ್ರಿಗೆ ಏಕೆ ಬಿಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದನ್ನು ತನಿಖೆ ನಡೆಸಬೇಕು ಎಂದರು.ಎಬಿವಿಪಿ ಗುರುಪ್ರಸಾದ್ ಮಾತನಾಡಿ, ಶಾಲಾ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಇರುವಾಗ ಧಾರ್ಮಿಕ ಬಲಾತ್ಕಾರ ನಡೆಸಿರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಹಿಂದೂ ಸಮುದಾಯದ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳನ್ನು ಅಪಮಾನಗೊಳಿಸಿ ಬಲವಂತದ ಮತ ಪ್ರಚಾರ ನಡೆಸಿದ್ದು ಚರ್ಚ್ ಗೆ ಕರೆದುಕೊಂಡು ಹೋದ ಹಾಗೂ ಹಿಂದೂ ಧರ್ಮವನ್ನು ಕುಗ್ಗಿಸಿ ಮಾತನಾಡಿದ ಪಾತ್ರೆಯ ಮಾತುಗಳನ್ನು ಕೇಳಿಸಿಕೊಂಡು ಅದನ್ನು ಖಂಡಿಸಿದ ಶಿಕ್ಷಕರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆ ಸ್ಥಳಕ್ಕೆ ಉಪ ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜ್ ಆಗಮಿಸಿ ಪ್ರತಿಭಟನೆಕಾರರ ಮನವಿಯನ್ನು ಸ್ವೀಕರಿಸಿದರು ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಮುಖಂಡ ಹರ್ಷ, ಜೆಸಿಪಿ ರಘುನಾಥ್, ಮನು ಕುಮಾರ್, ಕೇಬಲ್ ಮಲ್ಲಿಕಾರ್ಜುನ್ ಸೇರಿದಂತೆ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.

ಫೋಟೋ: ನೆಹರು ಸರ್ಕಲ್‌ನಲ್ಲಿ ಹುಳಿಯಾರಿನ ಚರ್ಚ್‌ನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಬಲವಂತದಿಂದ ಧಾರ್ಮಿಕ ಬೋಧನೆ ನಡೆಸಿದೆ ಎಂದು ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.