ಎಸ್.ಸಿ., ಎಸ್.ಟಿ. ಅನುದಾನ ಬಳಸಿದ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ

| Published : Mar 07 2025, 12:47 AM IST

ಸಾರಾಂಶ

ಎಸ್.ಸಿ .ಎಸ್ ಟಿ. ಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿದ ರಾಜ್ಯ ಸರ್ಕಾರ ನಡೆ ಖಂಡಿಸಿ ಗುರುವಾರ ರೋಣದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾ ನೇತೃತ್ವದಲ್ಲಿ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ಜರುಗಿತು. ಬಳಿಕ ತಹಸೀಲ್ದಾರ್‌ ಕಚೇರಿಗೆ ತೆರಳಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ರೋಣ: ಎಸ್.ಸಿ .ಎಸ್ ಟಿ. ಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿದ ರಾಜ್ಯ ಸರ್ಕಾರ ನಡೆ ಖಂಡಿಸಿ ಗುರುವಾರ ರೋಣದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾ ನೇತೃತ್ವದಲ್ಲಿ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ಜರುಗಿತು. ಬಳಿಕ ತಹಸೀಲ್ದಾರ್‌ ಕಚೇರಿಗೆ ತೆರಳಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಎಸ್.ಸಿ., ಎಸ್.ಟಿ. ವರ್ಗಗಳ ಅಭಿವೃದ್ಧಿಗಾಗಿ ಇರಿಸಿದ ಇ.ಎಸ್.ಪಿ ಹಾಗೂ ಟಿ.ಎಸ್.ಪಿ. ಅನುದಾನವನ್ನು ಅನುದಾನವನ್ನು ಉದ್ದೇಶಿತ ಯೋಜನೆಗಳಿಗೆ ಬಳಸದೆ, ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗೆ ಬಳಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿ ಪ್ರತಿಭಟಿಸಿದರು.

ಉಪ ತಹಸೀಲ್ದಾರ್‌ ಜೆ.ಟಿ.ಕೊಪ್ಪದ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಬಿಜೆಪಿ ಹಿರಿಯ ಮುಖಂಡ ಅಶೋಕ ನವಲಗುಂದ, ಶಿವಾನಂದ ಜಿದ್ದಿಬಾಗಿಲ, ಡಿ. ಜಿ. ಕಟ್ಟಿಮನಿ, ಶಿವಕುಮಾರ ಜಾಧವ, ಮಂಜು ಬುರಡಿ, ಮುತ್ತಪ್ಪ ಜೋಗನ್ನವರ, ನಿಂಗಪ್ಪ ಮಾದರ, ಮೈಲಾರಪ್ಪ ಮಾದರ, ಮುತ್ತಪ್ಪ ಪೂಜಾರ, ಮಜೂರಪ್ಪ ಮಾದರ, ಚಂದ್ರು ಹಂಚಿನಾಳ, ಪ್ರಕಾಶ ಜಿಗಳೂರು, ಪ್ರಕಾಶ ಕುರಹಟ್ಟಿ, ರವಿ ಮಾದರ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲು ಮಾದರ, ರೋಣ ಮಂಡಲ ಬಿಜೆಪಿ ಎಸ್. ಸಿ. ಮೋರ್ಚಾ ಅಧ್ಯಕ್ಷ ಭೀಮಪ್ಪ ಮಾದರ, ಪ್ರಧಾನ ಕಾರ್ಯದರ್ಶಿ ಮಂಜು ಛಲವಾದಿ, ಚಂದ್ರು ಲಮಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.