ಈ ವಿಧೇಯಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಇದನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಮ್ಮ ಸರ್ಕಾರದ ವಿರುದ್ಧ ಮಾತನಾಡುವರ ಬಾಯಿ ಮುಚ್ಚಿಸುವ ಸಾಧನವಾಗಿ ಮಾಡಿಕೊಳ್ಳಲು ಹೊರಟಿದೆ.

ಕನ್ನಡಪ್ರಭ ವಾರ್ತೆ ಯಳಂದೂರು

ರಾಜ್ಯ ಸರ್ಕಾರವು ಅನುಷ್ಟಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಇದನ್ನು ಜಾರಿಗೊಳಿಸದಂತೆ ಬಿಜೆಪಿ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಎಲ್. ನಯನ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಯಳಂದೂರು ಮಂಡಲದ ಅಧ್ಯಕ್ಷ ಎನ್. ಅನಿಲ್ ಮಾತನಾಡಿ, ಈ ವಿಧೇಯಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಇದನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಮ್ಮ ಸರ್ಕಾರದ ವಿರುದ್ಧ ಮಾತನಾಡುವರ ಬಾಯಿ ಮುಚ್ಚಿಸುವ ಸಾಧನವಾಗಿ ಮಾಡಿಕೊಳ್ಳಲು ಹೊರಟಿದೆ. ಇದರಲ್ಲಿ ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯ ಹೆಳುವುದನ್ನೂ ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ.

ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾರಕ ಕಾನೂನಾಗಿದೆ. ಸರ್ಕಾರ ಹಾಗೂ ಪೋಲಿಸರಿಗೆ ನಿರಂಕುಶ ಅಧಿಕಾರಿ ನೀಡುವ ಕಾಯ್ದೆಯಾಗುವ ಅಪಾಯವಿದೆ. ಪ್ರತಿಭಟನೆಗಳು, ಸಭೆಗಳು, ಸಾಮಾಜಿಕ ಚಳುವಳಿಗಳನ್ನು ಹತ್ತಿಕ್ಕುವ ಸಂಭವವೂ ಇದರಲ್ಲಿ ಅಡಕವಾಗಿದೆ. ಮಾಧ್ಯಮಗಳು ಹಾಗೂ ಜನರ ಧ್ವನಿಯನ್ನು ಅಡಗಿಸುವ ಕಾಯ್ದೆಯಾಗುವ ಸಂಭವೂ ಇದೆ. ಇದರ ಮೂಲಕ ಸರ್ಕಾರವು ಪ್ರತಿಪಕ್ಷಗಳು, ಮಾಧ್ಯಮದವರ ಮೇಲೆ ನಿಯಂತ್ರಣ ಹೇರುವುದು, ಬೆದರಿಸುವ ಕೆಲಸವನ್ನು ಮಾಡುತ್ತಿದೆ.

ಪತ್ರಕರ್ತರು ನೀಡುವ ತನಿಖಾ ವರದಿಗಳು ನ್ಯಾಯಾಲದಲ್ಲಿ ಕೇಸಿನ ತೂಗುಗತ್ತಿಯನ್ನು ಎದುರಿಸುವ ಅಪಾಯವಿದೆ, ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಅಥವಾ ಟಕೆಯನ್ನು ದ್ವೇಷ ಎಂದು ಬ್ಲಾಕ್ ಮಾಡಿ ತೊಂದರೆಯನ್ನು ನೀಡಬಹುದು ಒಟ್ಟಿನಲ್ಲಿ ಇದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಕಾನೂನಾಗಿದೆ. ಕೂಡಲೇ ಇದನ್ನು ಹಿಂಪಡೆಯಬೇಕು ಇದರ ಬಗ್ಗೆ ಜಾಗೃತಿ ಮೂಡಿಸಲು ನಾವು ಪ್ರತಿಭಟನಯನ್ನು ಹಮ್ಮಿಕೊಂಡಿದ್ದೇವೆ ಎಂದರು.ಬಿಜೆಪಿ ಮುಖಂಡರಾದ ಪಿ. ಮಹೇಶ್, ಮಹದೇವಸ್ವಾಮಿ, ದೊಡ್ಡರಾಜು, ಸೂರ್ಯನಾರಾಯಣ್, ರಾಜು, ಅಂಬಳೆ ರುದ್ರೇಶ್, ಕೆಂಪರಾಜು ಸೇರಿದಂತೆ ಅನೇಕರು ಇದ್ದರು.

---------೨೪ವೈಎಲ್‌ಡಿ ಚಿತ್ರ೦೨

ಯಳಂದೂರು ಪಟ್ಟಣದಲ್ಲಿ ಬುಧವಾರ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ತಹಸೀಲ್ದಾರ್ ಎಸ್.ಎಲ್. ನಯನರವರಿಗೆ ಸಲ್ಲಿಸಲಾಯಿತು.

-----------------