ಸಾರಾಂಶ
ವಕ್ಫ್ ಬೋರ್ಡ್‌ನಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ ಸೋಮವಾರ ತಾಲೂಕಾ ಬಿಜೆಪಿಯಿಂದ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಹತ್ತಿರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ವಕ್ಫ್ ಬೋರ್ಡ್‌ನಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ ಸೋಮವಾರ ತಾಲೂಕಾ ಬಿಜೆಪಿಯಿಂದ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಹತ್ತಿರ ಪ್ರತಿಭಟನೆ ನಡೆಸಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಿಂದ ಹೊರಟ ಪ್ರತಿಭಟನಾಕಾರರು ನಾನಾ ಪ್ರಮುಖ ರಸ್ತೆಗಳ ಮೂಲಕ ಕಾಂಗ್ರೆಸ್ ವಿರುದ್ಧ ನಾನಾ ಘೋಷಣೆ ಕೂಗುತ್ತಾ ಸಚಿವ ಜಮೀರ್ ಅಹ್ಮದ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಜನತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಜ್ಜ, ಮುತ್ತಜ್ಜರ ಕಾಲದಿಂದ ಬಂದ ಭೂಮಿಗಳಲ್ಲಿ ರೈತರು ಕೃಷಿ ಚಟುವಟಿಕೆ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಮುಸ್ಲಿಂರ ಓಲೈಕೆಗಾಗಿ ಕಾಂಗ್ರೆಸ್‌ನವರು ರೈತರ ಜಮೀನು, ಮಠ ಮಾನ್ಯಗಳ ಆಸ್ತಿ, ಹಿಂದೂ ದೇವಸ್ಥಾನಗಳು, ಸಾರ್ವಜನಿಕರ ಆಸ್ತಿ, ಪಾಸ್ತಿ ಸೇರಿದಂತೆ ನಾನಾ ಇಲಾಖೆಗಳ ಕಚೇರಿಗಳ ಜಾಗಗಳನ್ನು ಅಕ್ರಮವಾಗಿ ವಕ್ಫ್ ಹೆಸರಿನಲ್ಲಿ ಸೇರಿಸಿಕೊಂಡು ಬಡವರ ಭೂಮಿ ಕಬಳಿಸುವ ಹುನ್ನಾರ ನಡೆಸಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದರು.ಬಿಜೆಪಿ ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಬಸವಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ, ಶಿವಶಂಕರ ದೇಸಾಯಿ ಮಾತನಾಡಿ, ಯಲಬುರ್ಗಾದಲ್ಲಿ ೨೪೦ ಹಾಗೂ ಕುಕನೂರು ತಾಲೂಕಿನಲ್ಲಿ ೮೦೦ ಎಕರೆ ಜಮೀನಿನಲ್ಲಿ ವಕ್ಫ್ ಹೆಸರಿನಲ್ಲಿ ಸೇರಿಕೊಂಡಿರುವುದು ರೈತರಿಗೆ ಆತಂಕ ತಂದಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.ಬಳಿಕ ತಹಸೀಲ್ದಾರ ಬಸವರಾಜ ತೆನ್ನಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಬಿಜೆಪಿ ತಾಲೂಕಾಧ್ಯಕ್ಷ ಮಾರುತಿ ಗಾವರಾಳ, ಮುಖಂಡರಾದ ಬಸನಗೌಡ ತೊಂಡಿಹಾಳ, ಬಸವರಾಜ ಗೌರಾ, ಶಂಭು ಜೋಳದ, ಶಕುಂತಲಾದೇವಿ ಮಾಲಿಪಟೀಲ, ಅಂದಯ್ಯ ಕಳ್ಳಿಮಠ, ಫಕೀರಪ್ಪ ತಳವಾರ, ಅಯ್ಯನಗೌಡ, ಕಳಕಪ್ಪ ತಳವಾರ, ವಸಂತ ಭಾವಿಮನಿ, ಅಮರೇಶ ಹುಬ್ಬಳ್ಳಿ, ಸಿದ್ದು ಮಣ್ಣಿನವರ್, ಕೆ.ಅಯ್ಯನಗೌಡ, ದ್ಯಾಮಣ್ಣ ಉಜ್ಜಲಕುಂಟಿ, ಬಸವರಾಜ ಹಾಳಕೇರಿ, ಸಿದ್ದು ಉಳ್ಳಾಗಡ್ಡಿ, ಸಂಗಪ್ಪ ಬಂಡಿ, ರಾಚಪ್ಪ ಹುಳ್ಳಿ, ಶಿವಲೀಲಾ ದಳವಾಯಿ, ಸಂತೋಷಿಮಾ ಜೋಶಿ, ಶಿವಣ್ಣ ವಾದಿ, ಬಸಲಿಂಗಪ್ಪ ಕೊತ್ತಲ, ವೆಂಕಟೇಶ ಗಾದಿ, ಬಾಪುಗೌಡ ಪಾಟೀಲ, ಕಳಕನಗೌಡ ನಾಗನಗೌಡ್ರ, ಕಲ್ಲೇಶ ಕರಮುಡಿ, ಶಂಕರ ಭಾವಿಮನಿ, ಸುರೇಶ ಹೊಸಳ್ಳಿ ಸೇರಿದಂತೆ ಮಹಿಳೆಯರು ಮತ್ತಿತರರು ಇದ್ದರು.