ಸಾರಾಂಶ
ನಿವೃತ್ತ ನ್ಯಾ.ನಾಗಮೋಹನದಾಸ ಅವರ ಒಳ ಮೀಸಲಾತಿ ಸಮೀಕ್ಷಾ ವರದಿ ಖಂಡಿಸಿ ದಲಿತ ಬಲಗೈ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಡಚಣ
ನಿವೃತ್ತ ನ್ಯಾ.ನಾಗಮೋಹನದಾಸ ಅವರ ಒಳ ಮೀಸಲಾತಿ ಸಮೀಕ್ಷಾ ವರದಿ ಖಂಡಿಸಿ ದಲಿತ ಬಲಗೈ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.ಈಚೆಗೆ ಸಲ್ಲಿಸಿರುವ ನ್ಯಾ.ನಾಗಮೋಹನದಾಸ ಅವರ ಒಳ ಮೀಸಲಾತಿ ಸಮೀಕ್ಷಾ ವರದಿ ಪ್ರಕಾರ ಹೊಲೆಯ ಸಮುದಾಯ (ಬಲಗೈ)ಕ್ಕೆ ಮೀಸಲಾತಿ ಶೇ.5 ನೀಡಿದ್ದು ನ್ಯಾಯ ಸಮ್ಮತವಲ್ಲದ ವರದಿಯಾಗಿದೆ. ಬಲಗೈ ಸಮುದಾಯದ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಒಳಪಂಗಡಗಳಾಗಿ ಒಡೆದು ಹೋಗಿ ನೈಜವಾಗಿರುವ ಜಾತಿಯ ಜನಸಂಖ್ಯೆ ಕಡಿಮೆ ಮಾಡಿದ ವರದಿಯಿಂದ ಮೀಸಲಾತಿ ಪ್ರಮಾಣ ಕಡಿಮೆಯಾಗಿದೆ. ಮಾದಿಗ ಸಮಾಜ ಹೋಲಿಸಿದಾಗ ನಮ್ಮ ಸಮುದಾಯದ ಜನಸಂಖ್ಯೆ ಜಾಸ್ತಿ ಇದೆ. ಕಾರಣ ಸದರಿ ವರದಿ ಸ್ಥಗಿತಗೊಳಿಸಿ ಮರುಪರಿಶೀಲಿಸಿ ಸರಿಯಾದ ನ್ಯಾಯ ಸಮ್ಮತ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ನಂತರ ತಹಸೀಲ್ದಾರ್ ಸಂಜಯ ಇಂಗಳೆಗೆ ಮನವಿ ಸಲ್ಲಿಸಿದರು.
ಈ ವೇಳೆ ಸಮುದಾಯ ಮುಖಂಡರಾದ ದಶರಥ ಬನಸೋಡೆ, ಧರ್ಮಣ್ಣ ಬನಸೋಡೆ, ಬೀರಪ್ಪ ಬನಸೋಡೆ, ನಾರಾಯಣ ವಾಘಮೋರೆ, ಪರಮೇಶ್ವರ ಸಿಂಗೆ, ಸುನೀಲ ಬನಸೋಡೆ, ಪ್ರಕಾಶ ಬನಸೋಡೆ, ಶ್ರವಣ ಕಾಂಬಳೆ, ಸಾಯಿನಾಥ ಬನಸೋಡೆ, ರುದ್ರೇಶ ಬನಸೋಡೆ, ದಾವಲ ಬನಸೋಡೆ, ಶಶಿ ಸಾತಲಗಾಂವ, ಪರಶುರಾಮ ಬನಸೋಡೆ, ರವಿ ಧಾಬೆ, ಆನಂದ ಕಾಂಬಳೆ, ದೇವಾನಂದ ಸಿಂಗೆ, ಬಾಬಾಸಾಹೇಬ್ ಕಾಂಬಳೆ ಅಪ್ಪಾಸಾಹೇಬ ಉಕ್ಲೋಂಡೆ, ರಾಜು ನಿಂಬರಗಿ, ಬಾಬು ವಾಲೀಕಾರ, ಚಿದಂಬರ ರಣಕಂಬೆ, ಅಶೋಕ ಸಾವಳೆ, ಚಂದು ತೊಳೆ, ಪ್ರಕಾಶ ಬನಸೋಡೆ, ಸುಭಾಸ ಬನಸೋಡೆ, ಸಿದ್ದು ಹೊಸಮನಿ ಹಾಗೂ ಸಮಾಜದ ಹಿರಿಯರು, ಯುವಕರು ಇದ್ದರು.