ಸಾರಾಂಶ
ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮೊಬೈಲ್ ರಿಟೈಲರ್‌ಗಳು ಹಾಗೂ ಗ್ರಾಹಕರು, ತಮ್ಮ ಬೇಡಿಕೆಗಳನ್ನು ಕೂಡಲೆ ಪೂರೈಸುವಂತೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರುಆಪಲ್ ಐಫೋನ್ ಸರ್ವಿಸ್ ಸೆಂಟರ್ ಮ್ಯಾಪಲ್‌ನ ನಿರ್ಲಕ್ಷ್ಯದ ವಿರುದ್ಧ ದಕ್ಷಿಣ ಕನ್ನಡ ಮತು ಉಡುಪಿ ಮೊಬೈಲ್ ರಿಟೇಲರ್ಸ್ ಎಸೋಸಿಯೇಶನ್ ನೇತೃತ್ವದಲ್ಲಿ ಗ್ರಾಹಕರು ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಗಮನ ಸೆಳೆದರು.
ಆಪಲ್ ಐಒಎನ್ ಅಪ್‌ಡೇಟ್ ಮಾಡಿದ ನಂತರ ಮೊಬೈಲ್ ಸ್ಕ್ರೀನ್ ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲ್ಯಾಂಕ್ ಆಗುವಂತಹ ಸಮಸ್ಯೆಗಳು ಅನೇಕರಿಗೆ ಎದುರಾಗಿದೆ. ಗ್ರಾಹಕರು ಆಪಲ್ ಸರ್ವಿಸ್ ಸೆಂಟರ್ ಮ್ಯಾಪಲ್‌ಗೆ ಭೇಟಿ ನೀಡಿದರೆ ಉಡಾಫೆಯಾಗಿ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಮ್ಯಾಪಲ್ ಸರ್ವಿಸ್ ಸೆಂಟರ್‌ನ ಕಳಪೆ ಸೇವೆ ವಿರುದ್ಧ ಈ ಪ್ರತಿಭಟನೆ ಆಯೋಜಿಸಲಾಗಿತ್ತು.ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮೊಬೈಲ್ ರಿಟೈಲರ್‌ಗಳು ಹಾಗೂ ಗ್ರಾಹಕರು, ತಮ್ಮ ಬೇಡಿಕೆಗಳನ್ನು ಕೂಡಲೆ ಪೂರೈಸುವಂತೆ ಆಗ್ರಹಿಸಿದರು.
ಸಂಘಟನೆಯ ಚೇರ್‌ಮ್ಯಾನ್ ಗುರುದತ್ ಕಾಮತ್, ಪ್ರಮುಖರಾದ ರಾಜೇಶ್ ಮಾಬಿಯಾನ್, ಇಮ್ರಾನ್, ಸಲೀಮ್, ಅಝರ್ ಮೊಹಮದ್, ವಿವೇಕ್ ಜಿ. ಸುವರ್ಣ, ಶೈಲೇಂದ್ರ ಸರಳಾಯ ಮತ್ತಿತರರು ನೇತೃತ್ವ ವಹಿಸಿದ್ದರು.