ಕೇಂದ್ರದ ಅಮೃತ ಸರೋವರ ಯೋಜನೆಯಡಿ ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿನಂದಿ ಗ್ರಾಮದ ಸ.ನಂ. 62 ಮತ್ತು 65ರ ಜಮೀನಿನಲ್ಲಿ ಕಾಮಗಾರಿ ನೆಡೆದಿದೆ. ಸುಮಾರು 40 ಲಕ್ಷ ಹಣ ಅವ್ಯವಹಾರ ನಡೆದಿದ್ದು ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಲ್ಲಿ ಸುಮಾರು 32 ಸಾವಿರ ಕರಿಬೇವಿನ ಸಸಿ ಹಾಕಿದ್ದು ಅದರಲ್ಲಿ ಸುಮಾರು 32 ಲಕ್ಷ ಹಣ ದುರುಪಯೋಗವಾಗಿದೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ಕಲ್ಲೂರು ಗ್ರಾಮ ಪಂಚಾಯತಿ ವತಿಯಿಂದ ನೆಡೆದಿರುವ ಅಮೃತ ಸರೋವರ ಹಾಗೂ ಕರಿಬೇವಿನ ಸಸಿ ಕಾಮಗಾರಿಯಲ್ಲಿ ಸುಮಾರು 70ಲಕ್ಷ ಅವ್ಯವಹಾರ ನಡೆದಿದ್ದು ಇದರ ಸಮಗ್ರ ತನಿಖೆ ನೆಡೆಸುವಂತೆ ಗ್ರಾಮಸ್ಥ ಡಿ. ಮಂಜುನಾಥ್ ಆಗ್ರಹಿಸಿದರು.ತಾಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ ಮುಂಭಾಗ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿ. ಕೇಂದ್ರದ ಅಮೃತ ಸರೋವರ ಯೋಜನೆಯಡಿ ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿನಂದಿ ಗ್ರಾಮದ ಸ.ನಂ. 62 ಮತ್ತು 65ರ ಜಮೀನಿನಲ್ಲಿ ಕಾಮಗಾರಿ ನೆಡೆದಿದೆ. ಸುಮಾರು 40 ಲಕ್ಷ ಹಣ ಅವ್ಯವಹಾರ ನಡೆದಿದ್ದು ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಲ್ಲಿ ಸುಮಾರು 32 ಸಾವಿರ ಕರಿಬೇವಿನ ಸಸಿ ಹಾಕಿದ್ದು ಅದರಲ್ಲಿ ಸುಮಾರು 32 ಲಕ್ಷ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದರು.ಇದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುವಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಜಿಲ್ಲಾ ಓಂಬಡ್ಸ್ ಪರ್ಸನ್ ಅವರಿಗೆ ದೂರು ಸಲ್ಲಿಸಿದ್ದೇನೆ. ಸ್ಥಳ ಪರಿಶೀಲನೆಗೆ ದಿನಾಂಕ ನಿಗದಿಪಡಿಸಲು ಇಂದು ಉದ್ದೇಶ ಪೂರ್ವಕ ವಾಗಿ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಆಪಾದಿಸಿದರು.
ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿದರು.ಸ್ಥಳೀಯ ಯುವಕ ನಿತೀನ್, ಮುಖಂಡ ಶಾಂತರಾಜು ಮಾತನಾಡಿದರು. ಪ್ರತಿಭಟನೆಯಲ್ಲಿ ಸತೀಶ್, ಚಿದಾನಂದ್, ವಿಷ್ಣು, ಕಾರ್ತಿಕ್, ದರ್ಶನ್, ಶಿವು ಸೇರಿದಂತೆ ಹಲವರು ಭಾಗವಹಿಸಿದ್ದರು.