ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಧರಣಿ । ಕೃಷಿಯಿಂದ ಒಕ್ಕಲು ಎಬ್ಬಿಸುವ ಕೆಲಸ: ಭಾಗ್ಯರಾಜ್
ಕನ್ನಡಪ್ರಭ ವಾರ್ತೆ ಚಾಮರಾಜನಗರರಸಗೊಬ್ಬರ ಖರೀದಿಗೆಎಫ್‌ಐಡಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರದ ಬಳಿ ಜಮಾಯಿಸಿದ ಪದಾಧಿಕಾರಿಗಳು ಅಲ್ಲಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಜಿಲ್ಲಾಡಳಿತ ಭವನದ ಆವರಣಕ್ಕೆ ತೆರಳಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಹಕ್ಕು ಒತ್ತಾಯ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡು ರೈತರನ್ನು ಕೃಷಿಯಿಂದ ಒಕ್ಕಲು ಎಬ್ಬಿಸುವ ಕೆಲಸ ಮಾಡುತ್ತೇವೆ. ರೈತರ ಕೃಷಿ ಆದಾಯವನ್ನು ೨೦೨೬ ಕ್ಕೆ ದ್ವಿಗುಣ ಗೊಳಿಸುತ್ತೇವೆ ಎಂದು ನರೇಂದ್ರ ಮೋದಿ ಪ್ರಚಾರ ಮಾಡಿ ಕೃಷಿ ಆದಾಯ ದ್ವಿಗುಣಗೊಳ್ಳದೆ ಕೃಷಿಗೆ ಬಳಸುವ ರಸಗೊಬ್ಬರದ ಬೆಲೆ ಏರಿಕೆಯಾಗಿದೆ. ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷದಿಂದ ವಿದೇಶದಿಂದ ಆಮದು ಆಗುತ್ತಿದ್ದಂತಹ ರಸಗೊಬ್ಬರದ ಕಚ್ಚಾ ವಸ್ತುಗಳು ತೊಂದರೆಯಿಂದ ರಾಜ್ಯದಲ್ಲಿ ಎರಡು ಕೋಟಿ ಟನ್‌ನಷ್ಟು ಯೂರಿಯಾ ರೈತರಿಗೆ ಬೇಕಾಗಿದೆ ಎಂದರು.ಎಫ್‌ಐಡಿ ಇಲ್ಲದೆ ಬಗರು ಹುಕುಂ, ಇನಾಮತಿ ಜಮೀನು, ಗುತ್ತಿಗೆ ಮಾಡುವ ರೈತರ ಜಮೀನು, ರಾಜ್ಯದಲ್ಲಿ ಸುಮಾರು ಶೇಕಡ ಇನ್ನು ಶೇ. ೧೨ರಷ್ಟು ಪೌತಿ ಖಾತೆ ಆಗಿರುವುದಿಲ್ಲ. ಇವರಿಗೆ ರಸಗೊಬ್ಬರ ಕೊಡುವವರು ಯಾರು ರಾಜ್ಯ ಸರ್ಕಾರ ಪರ್ಯಾಯ ಮಾರ್ಗವನ್ನು ಕಂಡುಹಿಡಿದು ರೈತರಿಗೆ ರಸಗೊಬ್ಬರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ಬಿತ್ತನೆ ಮಾಡಲು ನೀರಾವರಿ ವ್ಯವಸಾಯ ಮಾಡಲು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನರೇಂದ್ರ ಮೋದಿಯವರು ಸಾವಯವ ಕೃಷಿ ಮಾಡಲು ಕರೆ ನೀಡಿದ್ದಾರೆ. ದಿಢೀರ್ ಸಾವಯವ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಶೇ. ೫೦ರಷ್ಟು ಪ್ರೋತ್ಸಾಹ ನೀಡುವಂತೆ ಒತ್ತಾಯಿಸಿದರು.ಪೆಟ್ರೋಲ್ ಪಂಪ್‌ಗಳಲ್ಲಿ ವಿಧಿಸಿರುವ ನಿಬಂಧಗಳನ್ನು ಸಡಿಲಗೊಳಿಸಿ ಯಂತ್ರೋಪಕರಣಗಳಿಗೆ ಬೇಕಾಗುವ ಡೀಸೆಲ್ ಪೆಟ್ರೋಲ್ ಕ್ಯಾನುಗಳ ಮುಖಾಂತರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಕೃಷಿ ಸಚಿವ ಕೃಷಿ ಮೂಲ ಸೌಕರ್ಯಗಳ ಬಗ್ಗೆ ಚಿಂತಿಸದೆ ಕೃಷಿ ಸಚಿವರು ನುಸಿ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಕ್ಷಣ ಕೃಷಿ ಸಚಿವರು ಎಫ್‌ಐಡಿ ಮತ್ತು ಪೆಟ್ರೋಲ್ ಡೀಸೆಲ್‌ನಿಂದ ಕೃಷಿಗೆ ತೊಂದರೆ ಆಗುತ್ತಿರುವುದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಹಾಲಿನ ನಾಗರಾಜ್, ಮಲಿಯೂರು ಮಹೇಂದ್ರ, ಸತೀಶ್, ಹೊನ್ನೇಗೌಡನಹಳ್ಳಿ ಮಹೇಶ್, ಗೌಡಿಕೆ ನಾಗಪ್ಪ, ಅರಳಿ ಕಟ್ಟೆ ಪ್ರಭುಸ್ವಾಮಿ, ವೀರಭದ್ರಪ್ಪ, ಮಹೇಶ್, ಚಂದ್ರು, ಜನ್ನೂರ್ ಶಾಂತರಾಜು, ಮುಕುಡಹಳ್ಳಿ ರಾಜು, ಪುಟ್ಟಮಲ್ಲೇಗೌಡ, ಶ್ಯಾನಡ್ರಹಳ್ಳಿ ನಾಗರಾಜಪ್ಪ, ಉಮೇಶ್, ಕಿಲ್ಲಿಪುರ ಶ್ರೀಕಂಠ, ಮಹದೇವಸ್ವಾಮಿ, ಗೌಡಿಕೆ ಮಹದೇವಪ್ಪ, ನಸರತ್, ಮಂಜು, ಮಹದೇವಸ್ವಾಮಿ, ನಾಸಿರ್ ಇದ್ದರು.--------೨೫ಸಿಎಚ್‌ಎನ್೧ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.