ರಸ್ತೆಯಲ್ಲಿ ಕುರಿ ನಿಲ್ಲಿಸಿ ಸಂಸದರ ವಿರುದ್ಧ ಪ್ರತಿಭಟನೆ

| Published : Jan 17 2024, 01:48 AM IST

ರಸ್ತೆಯಲ್ಲಿ ಕುರಿ ನಿಲ್ಲಿಸಿ ಸಂಸದರ ವಿರುದ್ಧ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಕಾರ್ಯಕರ್ತರು ಅನಂತಕುಮಾರ್ ಹೆಗಡೆಯವರ ಪ್ರತಿಕೃತಿಯೊಂದಿಗೆ ಕುರಿಗಳೊಂದಿಗೆ ಆಗಮಿಸಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ಮೂಲಕ ಸಾಗಿ ಮದಕರಿ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಹೆಗಡೆಯವರ ವಿರುದ್ಧ ಘೋಷಣೆ ಕೂಗಲಾಯಿತು.

ಕೂಡ್ಲಿಗಿ: ಸಂಸದ ಅನಂತಕುಮಾರ್ ಹೆಗಡೆ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಸ್ತೆಯಲ್ಲಿ ಕುರಿಗಳನ್ನು ವಿನೂತನವಾಗಿ ಪ್ರತಿಭನಟನೆ ನಡೆಸಲಾಯಿತು.

ಮಂಗಳವಾರ ತಾಲೂಕಿನ ಹುಲಿಕೆರೆ ರಸ್ತೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಅನಂತಕುಮಾರ್ ಹೆಗಡೆಯವರ ಪ್ರತಿಕೃತಿಯೊಂದಿಗೆ ಕುರಿಗಳೊಂದಿಗೆ ಆಗಮಿಸಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ಮೂಲಕ ಸಾಗಿ ಮದಕರಿ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಹೆಗಡೆಯವರ ವಿರುದ್ಧ ಘೋಷಣೆ ಕೂಗಲಾಯಿತು. ನಂತರ ನಾಡಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕಿಕೆರೆ ಲಕ್ಕಜ್ಜಿ ಮಲ್ಲಿಕಾರ್ಜುನ ಮಾತನಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮರ್ ಗೌಡ್ರು, ದಲಿತ ಸಂಘರ್ಷ ಸಮಿತಿಯ ಮುಖಂಡ ಎಳನೀರು ಗಂಗಣ್ಣ, ಸಿ.ಬಿ. ನಾಗೇಶ್ ಮಾತನಾಡಿದರು.ಮುಖಂಡರಾದ ಪೋಟೊ ಸಿದ್ದಲಿಂಗಪ್ಪ, ಬಿ. ಜಗದೀಶ್, ಶ್ರೀನಿವಾಸ್ ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅಡವಿ ನಾಗರಾಜ್, ಹೊನ್ನೂರಸ್ವಾಮಿ ಹಾಗೂ ವೆಂಕಟೇಶ್ ಉಜ್ಜಿನಿ, ಇಮಾಮ್ ಸಾಬ್, ಬಸವರಾಜ್ ಕಂಡಕ್ಟರ್, ಗಫರ್ ಸಾಬ್, ಇಜಾಜ್ ಸಾಬ್, ಮನೋಜ್, ಹರೀಶ್ ಇತರರಿದ್ದರು.