ಸಾರಾಂಶ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆಯ ಮೇಲೆ ಕಲ್ಲು ತೂರಿ ಹಿಂಸಾಚಾರ ನಡೆಸಿ, ಸಾರ್ವಜನಿಕರ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡಿದ ಮತಾಂದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಒಕ್ಕೂಟ, ನಾಗರೀಕ ಸಮಿತಿ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆಯ ಮೇಲೆ ಕಲ್ಲು ತೂರಿ ಹಿಂಸಾಚಾರ ನಡೆಸಿ, ಸಾರ್ವಜನಿಕರ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡಿದ ಮತಾಂದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಒಕ್ಕೂಟ, ನಾಗರೀಕ ಸಮಿತಿ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶವನ್ನು ಹೊರಹಾಕಿದರು.ನೆಹರೂ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕೃಷ್ಣ, ನಾಗಮಂಗಲದಲ್ಲಿ ಗಣೋಶೋತ್ಸವ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಕಿಡಿಗೇಡಿ ಮತಾಂದರು ಕಲ್ಲುತೂರುವ ಮೂಲಕ ಸಾರ್ವಜನಿಕ ನೆಮ್ಮದಿಗೆ ಭಂಗ ತಂದಿದ್ದಾರೆ. ಶಾಂತಿಯಿಂದ ಇದ್ದ ಜನರನ್ನು ಕೆಣಕುವ ರೀತಿಯಲ್ಲಿ ವರ್ತಿಸಿದ್ದಾರೆ. ಪೊಲೀಸರನ್ನು ಲೆಕ್ಕಿಸದೆ ತಮಗೆ ಇಷ್ಟ ಬಂದಹಾಗೆ ಅಂಗಡಿ, ಮುಂಗಟ್ಟುಗಳ ಮೇಲೆ ಪೆಟ್ರೋಲ್‌ಬಾಂಬ್ ಎಸೆದು ದುಷ್ಕೃತ್ಯ ಮೆರೆದಿದ್ದಾರೆ ಎಂದು ಸಿಟ್ಟು ಹೊರಹಾಕಿದರು.
ಸುಮಾರು 30ಕ್ಕೂ ಹೆಚ್ಚು ಹಿಂದೂ ಸಮುದಾಯದ ಮುಖಂಡರ ಅಂಗಡಿಗಳನ್ನು ದೋಚಿಸಿದ್ದಾರೆ. ಕೈಯಲ್ಲಿ ಪೆಟ್ರೋಲ್ ಬಾಂಬ್, ತಳವಾರ ಹಿಡಿದು ಭಯಹುಟ್ಟಿಸುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ವಿಶೇಷವಾಗಿ ಗಣಪತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಮಾಜದ ಎಲ್ಲಾ ಬಂಧುಗಳಿಗೂ ಭಯವನ್ನುಂಟು ಮಾಡಿದ್ದಾರೆ. ಆದರೆ ರಾಜ್ಯದ ಗೃಹ ಸಚಿವರು ಸುಳ್ಳು ಹೇಳಿಕೆ ನೀಡುವ ಮೂಲಕ ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ದೂರಿದರು.ಗಣಪತಿ ಪೆಂಡಾಲ್‌ನಿಂದ ಮೆರವಣಿಗೆ ಹೊರಟು ನೆಹರೂ ವೃತ್ತದಲ್ಲಿ ಮೆರವಣಿಗೆ ಅಂತ್ಯಗೊಳಿಸಿದರು. ಡಾ. ಡಿ.ಎನ್. ಮಂಜುನಾಥ, ಕೆ.ಎಂ. ಯತೀಶ್, ಚಿದಾನಂದ, ಮಾತೃಶ್ರೀ ಎನ್. ಮಂಜುನಾಥ, ನಾಗೇಶ್ ಬಾಬು, ಬಾಲಕೃಷ್ಣ, ಉಮೇಶ್, ಭರತ್, ಸಿದ್ದೇಶ್, ಮೋಹನ್, ಕುಮಾರ್, ಯಶ್ವಂತ್, ಮೋಹನ್ ಕುಮಾರ್, ನಾಗೇಶ್, ಮನೋಜ್, ಎಸ್. ಶ್ರೀಧರಚಾರ್, ಸಿ.ಇ. ಪ್ರಸನ್ನ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.