ಸಾರಾಂಶ
ಮೈಸೂರು: ನಗರದ ಜಲದರ್ಶಿನಿಯಲ್ಲಿ ಆಯೋಜಿಸಿದ್ದ ಸಭೆಗೆ ಸ್ಥಳಾವಕಾಶ ನೀಡದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ– ಹಸಿರು ಸೇನೆಯವರು ಶನಿವಾರ ಪ್ರತಿಭಟಿಸಿದರು.
ಮೈಸೂರು: ನಗರದ ಜಲದರ್ಶಿನಿಯಲ್ಲಿ ಆಯೋಜಿಸಿದ್ದ ಸಭೆಗೆ ಸ್ಥಳಾವಕಾಶ ನೀಡದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ– ಹಸಿರು ಸೇನೆಯವರು ಶನಿವಾರ ಪ್ರತಿಭಟಿಸಿದರು.
ಸಂಘದ ಮುಖಂಡರು ಜಲದರ್ಶಿನಿ ಅತಿಥಿ ಗೃಹ ಮುಂಭಾಗ ಜಮಾಯಿಸಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಮೇಲಾಧಿಕಾರಿಗೆ ಕರೆ ಮಾಡಿದಾಗ ರೈತರಿಗೆ ಸಭೆ ನಡೆಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಇದನ್ನು ಖಂಡಿಸಿ ರೈತ ಮುಖಂಡರು ಜಲದರ್ಶಿನಿ ಮುಂಭಾಗ ಪ್ರತಿಭಟಿಸಿದರು. ಪ್ರೊ. ನಂಜುಂಡಸ್ವಾಮಿ ಕಾಲದಿಂದಲೇ ರೈತರಿಗೆ ಅತಿಥಿಗೃಹದಲ್ಲಿ ಸಭೆ ನಡೆಸಲು ಅವಕಾಶ ಇತ್ತು. ರಾಜಕಾರಣಿಗಳಿಗೆ ಅವಕಾಶ ನೀಡುವ ಅಧಿಕಾರಿಗಳು ನಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪೊಲೀಸರು ರೈತರನ್ನು ಸಮಾಧನಪಡಿಸಿದರು. ನಂತರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಭೆ ನಡೆಸಲು ರೈತರಿಗೆ ಅವಕಾಶ ನೀಡಿದರು.
ರೈತ ಮುಖಂಡರಾದ ಟಿ.ಆರ್. ವಿದ್ಯಾಸಾಗರ್, ಚಿನ್ನಪ್ಪ ಪೂಜಾರಿ, ಫಯಾಜ್, ಸತೀಶ್ ರಾವ್, ರೆಹಮಾನ್, ಆಲಗೂಡು ಮಹದೇವ್ ಮೊದಲಾದವರು ಇದ್ದರು.