ಸಾರಾಂಶ
ಪಾಂಡವಪುರ ತಾಲೂಕಿನ ಬಿಟ್ಟನಾಯಕನಹಳ್ಳಿಯ 33/4 ರ ಸರ್ವೇ ನಂಬರಿನ 2019 ರಲ್ಲಿ ಸರ್ವೇ ಕಾರ್ಯ ಮಾಡಿರುವ ಭೂ ದಾಖಲೆ ಸಹಾಯಕ ನಿರ್ದೇಶಕರ ಕಚೇರಿ ಭೂಮಾಪಕರಾದ ಟಿ.ಆರ್.ಭಾಸ್ಕರ್ ಅವರು ನಿಯಮದಂತೆ ಸರ್ವೇ ಕೆಲಸ ಮಾಡದೆ ಲೋಪವೆಸಗಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಜಮೀನು ಹದ್ದುಬಸ್ತಿನ ಅಳತೆ ಮತ್ತು ನೋಂದಣಿ ತಂತ್ರಾಂಶದಲ್ಲಿ ಲೋಪ, ಭೂಕಂದಾಯ ನಿಯಮಾವಳಿಗಳ ರೀತ್ಯಾ ಭೂಮಾಪಕರು ಅಳತೆ ಮಾಡಿಲ್ಲ ಎಂದು ಆರೋಪಿಸಿ ಪಟ್ಟಣದ ತಾಲೂಕು ಕಚೇರಿ ಎದುರು ಹಿರೇಮರಳಿ ಗ್ರಾಮದ ರೈತ ವೇಣುಗೋಪಾಲ ಕಣ್ಣು ಮತ್ತು ಬಾಯಿಗೆ ಬಟ್ಟೆಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.ತಾಲೂಕಿನ ಬಿಟ್ಟನಾಯಕನಹಳ್ಳಿಯ 33/4 ರ ಸರ್ವೇ ನಂಬರಿನ 2019 ರಲ್ಲಿ ಸರ್ವೇ ಕಾರ್ಯ ಮಾಡಿರುವ ಭೂ ದಾಖಲೆ ಸಹಾಯಕ ನಿರ್ದೇಶಕರ ಕಚೇರಿ ಭೂಮಾಪಕರಾದ ಟಿ.ಆರ್.ಭಾಸ್ಕರ್ ಅವರು ನಿಯಮದಂತೆ ಸರ್ವೇ ಕೆಲಸ ಮಾಡದೆ ಲೋಪವೆಸಗಿದ್ದಾರೆ ಎಂದು ದು ದೂರಿದರು.
ಈ ಬಗ್ಗೆ ಅಂದಿನಿಂದ ಇಂದಿನವರೆಗೂ ಸಂಬಂಧ ಪಟ್ಟ ಅಧಿಕಾರಿಗೆ ಹಲವಾರು ಬಾರಿ ದೂರು ಕೊಟ್ಟರು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಜತೆಗೆ ಇದಕ್ಕಾಗಿ ಸಾಕಷ್ಟ ಹಣ ಖರ್ಚಾಗಿದೆ. ಆದರೂ ಯಾವುದೇ ಪ್ರಯೋಜವಾಗಿಲ್ಲ. ಇದನ್ನು ಪ್ರಶ್ನೆ ಮಾಡಿದಕ್ಕೆ ನನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿವುದಾಗಿ ಭೂಮಾಪಕ ಭಾಸ್ಕರ್ ಬೆದರಿಕೆ ಒಡ್ಡುತ್ತಾರೆ ಎಂದು ಆರೋಪಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು.ದುರಸ್ಥೆಗೆ ಸಂಬಂಧಿಸಿದ ದಾಖಲೆತಿ ಕೊಟ್ಟು ಹಣ ಕಟ್ಟಿದ್ದಾರೆ. ಆದರಿಂದ ದುರಸ್ಥೆಗೆ ಭೂಮಾಪನ ಮಾಡುವುದಾಗಿ ಭೂ ಮಾಪಕರು ತಿಳಿಸಿದರು. ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಪ್ರತಿಭಟನಾಕಾರನ ಸಮಸ್ಯೆ ಅಲಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ರವರು ಬಂದ ಮೇಲೆ ಸರಿಪಡಿಸುವುದಾಗಿ ಹೇಳಿದ ನಂತರ ಪ್ರತಿಭಟನೆ ವಾಪಸ್ ಪಡೆದರು.