ಬಾಗೇಪಲ್ಲಿ: ಕರ್ನಾಟಕದಲ್ಲಿ ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಕವಿಪ್ರನಿನಿ ಅಧಿಕಾರಿಗಳ ಮತ್ತು ನೌಕರರ ಒಕ್ಕೂಟ (ಫೆಡರೇಶನ್) ವತಿಯಿಂದ ಪಟ್ಟಣದ ಬೆಸ್ಕಾಂ ನೌಕರರ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಪಟ್ಟಣದ ಬೆಸ್ಕಾಂ ನೌಕರರ ಕಚೇರಿಯ ಮುಂದೆ ವಿವಿಧ ಕನ್ನಡಪರ ಸಂಘಟನೆಗಳು ರೈತಪರ ಸಂಘಟನೆಗಳು, ವಿವಿಧ ಪಕ್ಷದ ನಾಯಕರು ಬೆಸ್ಕಾಂ ನೌಕರರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನಾಕಾರರು ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿದರಲ್ಲದೆ ಖಾಸಗೀಕರಣದಿಂದ ರೈತರು ಹಾಗೂ ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಮಾತನಾಡಿ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣೆಯ ಹಕ್ಕು ನೀಡುವ ಮನವಿಯನ್ನು ಕೆಇಆರ್‍ಸಿ ತಿರಸ್ಕರಿಸಬೇಕೆಂದು ಒತ್ತಾಯಿಸಿದ ಅವರು ಪಟ್ಟಣದಲ್ಲಿ ನಡೆದ ದ್ವಾರ ಸಭೆಯಲ್ಲಿ ಜೂ.30 ರೊಳಗೆ ಪ್ರತಿಯೊಬ್ಬ ನೌಕರರು ಕೆಇಆರ್‍ಸಿಗೆ ತಮ್ಮ ಆಕ್ಷೇಪಣೆ ಸಲ್ಲಿಸುವಂತೆ ತೀರ್ಮಾನಿಸಿರುವುದಾಗಿ ತಿಳಿಸಿದರು.ಸಿಪಿಐಎಂ ಮುಖಂಡ ಚನ್ನರಾಯಪ್ಪ ಮಾತನಾಡಿ, ಇಂಧನ ಮತ್ತು ಗ್ಯಾಸ್ ಬೆಲೆ ಹೆಚ್ಚಿಸುವ ಮೂಲಕ ರೈತರ ಮತ್ತು ಜನಸಾಮಾನ್ಯರ ಜೀವನದ ಜೊತೆ ಕೇಂದ್ರ ಮತ್ತು ರಾಜ್ಯ ಚೆಲ್ಲಾಟವಾಡುತ್ತಿವೆ, ರೈತರಿಗೆ ಮತ್ತು ಜನಸಾಮಾನ್ಯರಿಗೆ ಅಗತ್ಯವಾಗಿರುವ ವಿದ್ಯುಚ್ಛಕ್ತಿಯನ್ನು ಖಾಸಗೀಕರಣ ಮಾಡುತ್ತಿರುವುದಕ್ಕೆ ತೀವ್ರವಾಗಿ ಖಂಡಿಸಿದ ಅವರು ರೈತರ ಮತ್ತು ಅನೇಕ ಕಾರ್ಮಿಕರ ಬದುಕು ಅತಂತ್ರವಾಗುತ್ತದೆ. ಯಾವುದೇ ಕಾರಣಕ್ಕೂ ಇದನ್ನ ಖಾಸಗಿಕರಣಗೊಳಿಸಬಾರದು, ಟಾಟಾ ಪವರ್ ಕಂಪನಿಗೆ ವಹಿಸುವ ಮೂಲಕ ಖಾಸಗಿಕರಣ ಗೊಳಿಸುತ್ತಿರುವಕ್ಕೆ ವಿರೋಧ ವ್ಯಕ್ತಪಡಿಸಿದರಲ್ಲದೆ ರಾಜ್ಯ ಸರ್ಕಾರ ಈ ರೈತ ವಿರೋಧಿ ನೀತಿಯನ್ನ ಕೂಡಲೇ ಕೈಬಿಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಕವಿಪ್ರನಿನಿ ರಾಜ್ಯ ಅಧೀನ ಕಾರ್ಯದರ್ಶಿ ಸುಕುಮಾರ್ ಮಾತನಾಡಿ, ಕೆಪಿಟಿಸಿಎಲ್ ನೌಕರರ ಸಂಘ ಹಾಗೂ ಒಕ್ಕೂಟದ ಅಧ್ಯಕ್ಷ ಕೆ. ಬಲರಾಂ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣ ಉದ್ದೇಶ ಹೊಂದಿರುವ ಕಾಯ್ದೆ ಇಂಧನ ಇಲಾಖೆ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿದೆ ಎಂದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣರೆಡ್ಡಿ, ಸಿಪಿಐಎಂ ಮುಖಂಡರಾದ ವಾಲ್ಮೀಕಿ ಅಶ್ವತ್ಥಪ್ಪ, ಕೃಷ್ಣಪ್ಪ, ರೈತ ಸಂಘದ ಮುಖಂಡರಾದ ಪಿ. ಮಂಜುನಾಥ್ ರೆಡ್ಡಿ, ಶ್ರೀರಾಮ ನಾಯಕ್, ಲಕ್ಷ್ಮೀನಾರಾಯಣರೆಡ್ಡಿ, ಈಶ್ವರೆಡ್ಡಿ, ಗೋವಿಂದ ರೆಡ್ಡಿ, ಜೆ.ಜೆ.ಹಳ್ಳಿ ನಾರಾಯಣ ಸ್ವಾಮಿ, ವೆಂಕಟರಾಮ ರೆಡ್ಡಿ, ಕರವೇ ಸಂಘದ ಮುಖಂಡರಾದ ಬಿಟಿಶ್ರೀನಿವಾಸ್,ಚೇಳೂರು ವೆಂಕಟರವಣಪ್ಪ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರಾದ ಎ.ರಮೇಶ್ ಸೇರಿದಂತೆ ಬೆಸ್ಕಾಂ ಸಿಬ್ಬಂದಿ ವರ್ಗದವರು ಇದ್ದರು. 12ಬಿಜಿಪಿ-2: ವಿದ್ಯುತ್ ಕ್ಷೇತ್ರ ಖಾಸಗೀರಣಗೊಳಿಸುವುದನ್ನು ಖಂಡಿಸಿ ಬಾಗೇಪಲ್ಲಿಯಲ್ಲಿ ಬೆಸ್ಕಾಂ ನೌಕರರು ಸೇರಿ ನಾನಾ ಸಂಘ ಸಂಸ್ಥೆಗಳ ಮುಖಂಡರು ಪ್ರತಿಭಟನೆ ನಡೆಸಿದರು.