ಪ್ರೊ. ಭಗವಾನ್ ಹೇಳಿಕೆ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
KannadaprabhaNewsNetwork | Published : Oct 19 2023, 12:45 AM IST
ಪ್ರೊ. ಭಗವಾನ್ ಹೇಳಿಕೆ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಸಾರಾಂಶ
ಒಕ್ಕಲಿಗರು ಸಂಸ್ಕೃತಿ ಹೀನರು ಎಂಬುದಾಗಿ ಹೇಳಿಕೆ ನೀಡಿದ್ದ ಪ್ರೊ. ಭಗವಾನ್‌ರವರ ಹೇಳಿಕೆಯನ್ನು ಖಂಡಿಸಿ ಪಟ್ಟಣದಲ್ಲಿ ನಾನಾ ಪ್ರಗತಿಪರ ಸಂಘಟನೆಗಳು ಭಗವಾನ್‌ರವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ, ಅವರ ಗಡಿಪಾರಿಗೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಒಕ್ಕಲಿಗರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆಂದು ಆಕ್ರೋಶ ಒಕ್ಕಲಿಗರು ಸಂಸ್ಕೃತಿ ಹೀನರು ಎಂಬುದಾಗಿ ಹೇಳಿಕೆ ನೀಡಿದ್ದ ಪ್ರೊ. ಭಗವಾನ್‌ರವರ ಹೇಳಿಕೆಯನ್ನು ಖಂಡಿಸಿ ಪಟ್ಟಣದಲ್ಲಿ ನಾನಾ ಪ್ರಗತಿಪರ ಸಂಘಟನೆಗಳು ಭಗವಾನ್‌ರವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ, ಅವರ ಗಡಿಪಾರಿಗೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಮೈಸೂರಿನಲ್ಲಿ ನಡೆದ ಮಹಿಷಾ ದಸಾರ ವೇಳೆ ಭಗವಾನ್ ಎಂಬಾತ ಒಕ್ಕಲಿಗರ ಸಂಸಕೃತಿ ಹೀನರು, ಎಂದು ರಾಷ್ಟ್ರಕವಿ ಕುವೆಂಪು ಈ ಹಿಂದೆ ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಕುವೆಂಪು ಮತ್ತು ಒಕ್ಕಲಿಗರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ನಾನಾ ಸಂಘಟನೆಗಳು ಸೇರಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕೆ.ಆರ್.ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಅವರ ಪ್ರತಿಕೃತಿ ಹಿಡಿದು ಅವರು ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಿ.ಎಂ.ರಸ್ತೆಯಲ್ಲಿ ಸಾಗಿ ನವೋದಯ ವೃತ್ತದಲ್ಲಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್ ಮಾತನಾಡಿ, ಭಗವಾನ್ ಹೇಳಿಕೆ ಶಾಂತಿಯತೆಯನ್ನು ಕದಡುವ ಕೆಲಸ ಮಾಡಿದ್ದಾರೆ. ಸಮಾಜ, ಧರ್ಮಗಳನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೊಳಕು ಸಂಸ್ಕೃತಿ ಹೊಂದಿದ್ದಾರೆ. ಅನ್ನ ಹಾಕುವ ಒಕ್ಕಲಿಗ ಸಮುದಾಯವನ್ನು ತೇಜೋವಧೆ ಮಾಡಿರುವ ಇಂತಹ ಅಯೋಗ್ಯರು ನಾಡಿನಲ್ಲಿ ಇರಲು ಅನರ್ಹರು, ಕುವೆಂಪು ಹೇಳಿಕೆ ಎನ್ನುವ ಮೂಲಕ ವಿಶ್ವಮಾನವರಿಗೆ ಮಸಿ ಬಳಿಯಲು ಹೊರಟ ಈತ ಅಲ್ಪಮಾನವನಾಗಿ ವರ್ತಿಸುತ್ತಿದ್ದಾನೆ. ಜಾತಿನಿಂದನೆ, ಧರ್ಮನಿಂದನೆ ಮೂಲಕ ಸಮಾಜದ ಶಾಂತಿ ಕದಡುವ ಇಂತಹ ವ್ಯಕ್ತಿಯ ವಿರುದ್ಧ ಪೊಲೀಸ್ ಸುಮೊಟೋ ದೂರು ದಾಖಲಿಸಬೇಕಿತ್ತು, ಸರ್ಕಾರವು ಇವರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ, ಈತನ ವರ್ತನೆ ರಾಜ್ಯಕ್ಕೆ ಯಾವತ್ತಿದ್ದರೂ ಕಂಟಕವೇ, ಶೀಘ್ರ ಈತನನ್ನು ರಾಜ್ಯದಿಂದ ಗಡಿಪಾರು ಮಾಡುಬೇಕೆಂದು ಆಗ್ರಹಿಸಿದರು. ನಾಡಪ್ರಭು ಕೆಂಪೇಗೌಡ ವೇದಿಕೆ ಅಧ್ಯಕ್ಷ ಆನಂದ್ ಕಾಳೇನಹಳ್ಳಿ ಮಾತನಾಡಿ, ಒಕ್ಕಲಿಗರು ಶಾಂತಿಪ್ರಿಯರು, ಅನ್ನದಾತರು, ಇದು ನಮ್ಮ ದೌರ್ಬಲ್ಯವಲ್ಲ, ಸರ್ಕಾರವೇ ಈತನ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸಿದ್ದೆವು, ಸರ್ಕಾರ ಇನ್ನಾದರೂ ಈತನ ವಿರುದ್ಧ ಕ್ರಮಕ್ಕೆ ಮುಂದಾಗದಿದ್ದಲ್ಲಿ ಇಡೀ ಒಕ್ಕಲಿಗ ಸಮುದಾಯವೇ ರೋಡಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖಂಡ ಎ.ಸಿ.ಆನಂದ್ ಕುಮಾರ್ ಮಾತನಾಡಿ, ಒಕ್ಕಲಿಗನಾಗಿ, ತನ್ನ ಸಮುದಾಯದ ವಿರುದ್ಧವೇ ಮಾತನಾಡುವ ಭಗವಾನ್, ತನ್ನ ಸುರಕ್ಷತೆಗಾಗಿ ಸರ್ಕಾರದ ಸೆಕ್ಯೂರಿಟಿಗಾಗಿ ಇಂತಹ ಗಿಮಿಕ್ ಮಾತನಾಡುವ ನೀಚ ವ್ಯಕ್ತಿ, ಹಿಂದೆಯೂ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಮಾತು, ಶ್ರೀರಾಮನ ಕುರಿತಾಗಿ ವ್ಯಂಗ್ಯ ವ್ಯಕ್ತಪಡಿಸಿದ ಈತ, ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾನೆ, ರಾಜ್ಯದಲ್ಲಿ ಮುಂದೆ ದೊಡ್ಡ ಅನಾಹುತ ಆಗುವುದನ್ನು ತಪ್ಪಿಸಬೇಕಾದ್ದಲ್ಲಿ ಈತನ ಗಡಿಪಾರು ಆಗಬೇಕೆಂದರು. ಪ್ರತಿಭಟನಕಾರರು ಈತನ ಗಡಿಪಾರಿಗೆ ಸರ್ಕಾರವನ್ನು ಆಗ್ರಹಿಸಿ ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್‌ಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನಾನಾ ಸಂಘಟನೆಗಳ ಮುಖಂಡರಾದ ಸಿ.ಎನ್.ಅಶೋಕ್, ಅರಳಾಪುರದ ಮಂಜೇಗೌಡ, ಭರತ್ ಗೌಡ, ಅಪ್ಪಿಕರವೇ, ಸಿ.ಜಿ.ರವಿ, ಮೀಸೆ ಮಂಜಣ್ಣ, ತರಕಾರಿ ಕೃಷ್ಣ, ಶಿವೇಗೌಡ, ಜಯಪಾಲ್, ಸಿ.ಎನ್.ನಾಗರಾಜು, ಪುಟ್ಟಸ್ವಾಮಿಗೌಡ, ನಾಗರತ್ನ, ಬೀಡಾ ಮಂಜು, ಸಿ.ಜಿ.ಗಂಗಾಧರ್, ಶ್ರೀಧರ್, ಸೇರಿ ಇತರರು ಇದ್ದರು.