ಸಾರಾಂಶ
ಕೂಡಲೇ ಬೆಂಕಿಯಿಂದ ನಷ್ಟಗೊಳಗಾದ ಅಂಗಡಿ ಮಾಲೀಕರಿಗೆ ಪರಿಹಾರದ ಜೊತೆ ಹಿಂದು ಯುವಕರನ್ನು ಪೊಲೀಸರ ವಶದಿಂದ ಬಿಡಬೇಕು. ಹಿಂದೂಗಳ ಮೇಲಿನ ಪ್ರವೃತಿ ಮುಂದುವರೆದರೆ ಜಿಲ್ಲಾದ್ಯಂತ ಹಿಂದುಗಳು ದಂಗೆ ಎದ್ದು ಪ್ರತಿಭಟನೆ ನಡೆಸಬೇಕಾಗುತ್ತದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಕೃತ್ಯ ನಡೆಸಿರುವುದನ್ನು ಖಂಡಿಸಿ ಹಿಂದುಪರ ಸಂಘಟನೆಗಳು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಹಿಂದು ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗಣೇಶನ ವಿಸರ್ಜನೆ ವೇಳೆ ಕ್ಷುಲ್ಲಕ ಕಾರಣ ತೆಗೆದು ಮುಸ್ಲಿಂ ಕೆಲ ಯುವಕರ ಗುಂಪು ಗಣೇಶ ಮೆರವಣಿಗೆ ಹೋಗುವ ರಸ್ತೆಯಲ್ಲಿ ಅಲ್ಲಾ ಅಕ್ಬರ್ ಎಂದು ಕೂಗಿ ಹೀಯಾಳಿಸುವ ಜೊತೆಗೆ ಪೆಟ್ರೋಲ್ ಬಾಂಬ್, ತಲ್ವಾರ ಹಿಡಿದು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು. ಹಿಂದುಗಳ ಅಂಗಡಿ ಮುಂಗಟ್ಟುಗಳನ್ನು ಬೆಂಕಿ ಹಾಕಿ ಸುಟ್ಟು ಹಾಕಿರುವುದು ಖಂಡನೀಯ. ಘಟನೆಯಲ್ಲಿ 52ಕ್ಕೂ ಹೆಚ್ಚು ಹಿಂದು ಯುವಕರನ್ನು ಸರ್ಕಾರ ಪೊಲೀಸರ ಮೂಲಕ ಟಾರ್ಗೆಟ್ ಮಾಡಿ ವಶಕ್ಕೆ ಪಡೆದಿರುವುದನ್ನು ಖಂಡಿಸಿದರು.ಕೂಡಲೇ ಬೆಂಕಿಯಿಂದ ನಷ್ಟಗೊಳಗಾದ ಅಂಗಡಿ ಮಾಲೀಕರಿಗೆ ಪರಿಹಾರದ ಜೊತೆ ಹಿಂದು ಯುವಕರನ್ನು ಪೊಲೀಸರ ವಶದಿಂದ ಬಿಡಬೇಕು. ಹಿಂದೂಗಳ ಮೇಲಿನ ಪ್ರವೃತಿ ಮುಂದುವರೆದರೆ ಜಿಲ್ಲಾದ್ಯಂತ ಹಿಂದುಗಳು ದಂಗೆ ಎದ್ದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಬೆಳಗೊಳ ಸುನೀಲ್, ಹಿಂದುಜಾಗರಣಾ ವೇದಿಕೆ ಚಂದನ್ ಸೇರಿದಂತೆ ಹಿಂದುಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.;Resize=(128,128))
;Resize=(128,128))