ಮಂದಕೃಷ್ಣ ಮಾದಿಗ ಬಂಧನ ಖಂಡಿಸಿ ಪ್ರತಿಭಟನೆ

| Published : Oct 11 2024, 11:53 PM IST / Updated: Oct 11 2024, 11:54 PM IST

ಸಾರಾಂಶ

Protest against the arrest of Mandkrishna Madiga

-ಸಿಂಧನೂರಿನಲ್ಲಿ ಒಳ ಮೀಸಲಾತಿ ಜಾರಿಗೆ ಐಕ್ಯ ಹೋರಾಟ ಸಮಿತಿಯಿಂದ ಧರಣಿ

-----

ಕನ್ನಡಪ್ರಭ ವಾರ್ತೆ ಸಿಂಧನೂರು: ತೆಲಂಗಾಣದಲ್ಲಿ ಒಳಮೀಸಲಾತಿ ವರ್ಗೀಕರಣ ಜಾರಿಗೊಳಿಸಲು ಒತ್ತಾಯಿಸಿ ಪ್ರತಿಭಟನಾನಿರತ ಮಂದಕೃಷ್ಣ ಮಾದಿಗ ಅವರನ್ನು ಬಂಧಿಸಿದ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಸ್ಥಳೀಯ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ಮಿನಿವಿಧಾನಸೌಧ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿತು.

ಒಳಮೀಸಲಾತಿ ಜಾರಿ ಮಾಡದೆ ಉದ್ಯೋಗ ನೇಮಕಾತಿ ನಡೆಸಲು ಮುಂದಾಗಿರುವ ಮುಖ್ಯಮಂತ್ರಿ, ರೇವಂತರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರದ ನಡೆಯನ್ನು ವಿರೋಧಿಸಿ ಹೋರಾಟಗಾರ ಮಂದಕೃಷ್ಣ ಮಾದಿಗ ಕಪ್ಪು ಬಾವುಟ ಪ್ರದರ್ಶಿಸುವ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಹಾಕಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಕೂಡಲೇ ಮಂದಕೃಷ್ಣ ಮಾದಿಗ ಅವರನ್ನು ಬಿಡುಗಡೆ ಮಾಡಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲ ರಾಜ್ಯಗಳು ಸುಗ್ರೀವಾಜ್ಞೆ ಮುಖಾಂತರ ಒಳ ಮೀಸಲಾತಿ ಜಾರಿಗೊಳಿಸಬೇಕು. ಅಲ್ಲಿಯವರೆಗೆ ರಾಜ್ಯ ಸರ್ಕಾರಗಳು ಯಾವುದೇ ಉದ್ಯೋಗ ನೇಮಕಾತಿಗಳನ್ನು ನಡೆಸಬಾರದು ಎಂದು ಆಗ್ರಹಿಸಿದರು.

ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಮನವಿ ಪತ್ರ ಸ್ವೀಕರಿಸಿದರು. ಸಮಿತಿ ಮುಖಂಡರಾದ ಆರ್.ಬೋನ್ವೆಂಚರ್,ಎಚ್‌.ಎನ್‌.ಬಡಿಗೇರ್,ಮರಿಯಪ್ಪ ಜಾಲಿಹಾಳ, ಅಲ್ಲಮಪ್ರಭು ಪೂಜಾರಿ, ಅಮರೇಶ ಗಿರಿಜಾಲಿ, ಮೌನೇಶ ಜಾಲವಾಡಗಿ, ಯಮನೂರ ಬಸಾಪುರ ಸೇರಿ ಅನೇಕರು ಭಾಗವಹಿಸಿದ್ದರು.

----

ಫೋಟೋ:10ಕೆಪಿಎಸ್ಎನ್ಡಿ1: ಸಿಂಧನೂರಿನಲ್ಲಿ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.