ಸಾರಾಂಶ
ಶಿಗ್ಗಾಂವಿ: ಬೆಳಗಾವಿಯಲ್ಲಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಘಟನೆ ಘಟನೆ ಖಂಡಿಸಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಜಿಲ್ಲಾ ಸಮಿತಿ ಅಧ್ಯಕ್ಷ ರಾಮು ತಳವಾರ ಮಾತನಾಡಿ, ಇತ್ತೀಚೆಗೆ ಕೆಎಸ್ಆರ್‌ಟಿಸಿ ಬೆಳಗಾವಿ ನಗರ ಘಟಕದ ಬಸ್‌ನ ಸುಳೇಭಾವಿ- ಬಾಳೇಕುಂದ್ರಿ ಮಾರ್ಗಮಧ್ಯೆ ಸಾಗುತ್ತಿದ್ದಾಗ ಯುವತಿಯೊಬ್ಬಳು ಮರಾಠಿ ಭಾಷೆಯಲ್ಲಿ ಮಾತನಾಡುವಾಗ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಾರೆ. ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದಾಗ ಕೋಪಗೊಂಡ ಯುವತಿ ಮರಾಠಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಾಳೇಕುಂದ್ರಿ ಗ್ರಾಮದಲ್ಲಿ ಬಸ್ಸನ್ನು ತೆಡೆದು ೨೦ ಹೆಚ್ಚಿನ ಯುವಕರು ಕೂಡಿಕೊಂಡು ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಜರುಗಿಸಲು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಸುರೇಶ ವನಹಳ್ಳಿ ಮಾತನಾಡಿ, ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಗಡಿಭಾಗಗಳಲ್ಲಿ ಮರಾಠಿಗರು ಕನ್ನಡಿಗರ ಮೇಲೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಪದೇ ಪದೇ ತಂಟೆ, ತಕರಾರು ಮಾಡುತ್ತಾ ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ವೈಷಮ್ಯ ಉಂಟು ಮಾಡಿ ಶಾಂತಿ ಸುವ್ಯವಸ್ಥೆ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದರು.ಜಿಲ್ಲಾ ಸಂಚಾಲಕರಾದ ಎಸ್.ಎಸ್. ಭರಮಣ್ಣನವರ ಹಿರಿಯ ಕನ್ನಡಪರ ಹೋರಾಟಗಾರ ಡಿ.ಎಸ್. ಓಲೇಕಾರ ಮುಖಂಡರಾದ ಮಾಲತೇಶ ಸುಂಕದ, ಪ್ರದೀಪ ಅತ್ತಿಗೇರಿ, ವೀರಯ್ಯ ಪ್ರಭಯ್ಯನವರಮಠ, ಬಾಪುಗೌಡ್ರ ಪಾಟೀಲ, ಧರ್ಮಣ್ಣ ಜೋಳದ ಸೇರಿದಂತೆ ಅನೇಕರು ಉಪಸ್ಥಿತರು ಇದ್ದರು. 26ರಿಂದ ಈಶ್ವರ ದೇವರ ಜಾತ್ರಾ ಮಹೋತ್ಸವಬ್ಯಾಡಗಿ: ತಾಲೂಕಿನ ಕೊಲ್ಲಾಪುರ ಗ್ರಾಮದ ಈಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಫೆ. 26 ಹಾಗೂ 27ರಂದು ಜರುಗಲಿವೆ. ಫೆ. 26ರಂದು ಹೂವಿನ ತೇರು, ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಲಿದೆ. 27ರಂದು ಬೆಳಗ್ಗೆ 9ಕ್ಕೆ ಗುಗ್ಗಳ ಬಳಿಕ ವೀರಗಾಸೆ ಸೇರಿದಂತೆ ವಿವಿಧ ವಾದ್ಯ ಮೇಳಗಳೊಂದಿಗೆ ಮಹಾ ರಥೋತ್ಸವ ನಡೆಯಲಿದೆ.ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಸಂಜೆ 7ಕ್ಕೆ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.