ಸಾರಾಂಶ
ಕೊಪ್ಪಳ-ಗಂಗಾವತಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ಮಾಡಿ ಆಕ್ರೋಶ
ಕನ್ನಡಪ್ರಭ ವಾರ್ತೆ ಕೊಪ್ಪಳತಾಲೂಕಿನ ಬೂದುಗುಂಪಾ ಗ್ರಾಮದ ಬಳಿ ಹೆದ್ದಾರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಕಾಲ ಕೊಪ್ಪಳ-ಗಂಗಾವತಿ ರಸ್ತೆ ತಡೆ ನಡೆಸಿದರು. ಘೋಷಣೆ ಕೂಗಿದರಲ್ಲದೆ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಕೀರಪ್ಪ ಎಮ್ಮಿ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರ ಹಣತೆಯಂತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಸಂವಿಧಾನ ಬಾಹಿರ ನಿರ್ಣಯ ಕೈಗೊಂಡಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ. ಕೇಂದ್ರದ ಮೋದಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ ಭವನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ತಕ್ಷಣ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಸಿದ್ದರಾಮಯ್ಯ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡರಾದ ಎ.ವಿ. ಗುರುರಾಜ್, ನಜೀರಸಾಬ ಅರಗಂಜಿ, ಗಿರೀಶ್ ಹಿರೇಮಠ, ಬಸವರಾಜ ಪೆದ್ಲ, ಸೀಮಣ್ಣ ಗಬ್ಬೂರ, ಕುಬೇರ ಮಜ್ಜಿಗಿ ಮಾತನಾಡಿದರು.ಈ ಸಂದರ್ಭ ಕರಿಯಪ್ಪ ಸಂಗಟಿ, ದಾಸಪ್ಪ ಕುದರಿಮೋತಿ, ರವಿ ಪೆದ್ಲ, ವೀರೇಶ ಬಡಗಿ, ಮಂಜುನಾಥ ಜೀನಿನ, ಅಮಾಜಪ್ಪ ತುರವಿಹಾಳ, ನಿಂಗಜ್ಜ ಅಡಿಗಿ, ಮಂಜುನಾಥ ಕಾಟ್ರಳ್ಳಿ, ಫಕೀರಪ್ಪ ದೊಡ್ಡಮನಿ, ನಾಗರಾಜ ಕಂಬಳಿ, ಆದೆಪ್ಪ ಇಂದರಗಿ, ಗೋಪಾಲ್ ಕೂಕನಪಳ್ಳಿ, ಸುರೇಶ್ ದನಕನದೊಡ್ಡಿ, ಪರಶುರಾಮ ಕೆರೆಹಳ್ಳಿ, ರಮೇಶ್ ಅಂಜನಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.