ಮಂಡ್ಯ ಜಿಲ್ಲೆಯ ಘಟನೆ ಖಂಡಿಸಿ ಪ್ರತಿಭಟನೆ

| Published : Feb 02 2024, 01:04 AM IST

ಮಂಡ್ಯ ಜಿಲ್ಲೆಯ ಘಟನೆ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯ ಕರ್ನಾಟಕ ಪ್ರದೇಶ ಕುರುಬ ಗೊಂಡ ಸಂಘದ ವಸತಿ ನಿಲಯದ ಅಸುಪಾಸಿನ ಸಂಗೊಳ್ಳಿ ರಾಯಣ್ಣ ಮತ್ತು ಭಕ್ತ ಕನಕದಾಸ ಭಾವಚಿತ್ರಗಳನ್ನು ಹರಿದು ಧ್ವಂಸಗೊಳಿಸಿರುವ ಘಟನೆಯನ್ನು ಖಂಡಿಸಿ ಪ್ರತಿಭಟನೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಮಂಡ್ಯ ಜಿಲ್ಲೆಯ ಕರ್ನಾಟಕ ಪ್ರದೇಶ ಕುರುಬ ಗೊಂಡ ಸಂಘದ ವಸತಿ ನಿಲಯದ ಅಸುಪಾಸಿನ ಸಂಗೊಳ್ಳಿ ರಾಯಣ್ಣ ಮತ್ತು ಭಕ್ತ ಕನಕದಾಸ ಭಾವಚಿತ್ರಗಳನ್ನು ಹರಿದು ಧ್ವಂಸಗೊಳಿಸಿರುವ ಘಟನೆಯನ್ನು ಖಂಡಿಸಿ ಕರ್ನಾಟಕ ಪ್ರದೇಶಗೊಂಡ (ಕುರುಬ) ಸಂಘದ ಮುಖಂಡರು ತಹಸೀಲ್ದಾರ್‌ ಕಚೇರಿ ಮುಂದೆ ಪ್ರತಿಭಟಿಸಿ ಸರಕಾರಕ್ಕೆ ಮನವಿ ಸಲ್ಲಿಸಿದದರು.

ಮಂಡ್ಯ ಜಿಲ್ಲೆಯ ಕರುಗೋಡ ಗ್ರಾಮದ ಹನುಮಾನ್‌ ಧ್ವಜಕ್ಕೆ ಸಂಬಂಧಿಸಿದಂತೆ ಹೋರಾಟಕ್ಕೆ ಇಳಿದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ನಗರದಲ್ಲಿರುವ ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ವಸತಿ ನಿಲಯದಲಿ ಅಳವಡಿಸಿದ್ದ ವಿವಿಧ ಮಹಾಪುರುಷರ ಭಕ್ತ ಕನಕದಾಸ, ಸಂಗೊಳ್ಳಿ ರಾಯಣ್ಣ ಹಾಗೂ ವಸತಿ ನಿಲಯ ಒಳಗಿನ ಗಾಜು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನುಕೂಡಲೇ ಬಂಧಿಸಬೇಕು. ಗೃಹ ಇಲಾಖೆ ಪುಂಡರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ರೇವಣಸಿದ್ದಪ್ಪ ಅಣಕಲ್, ಹಣಮಂತ ಪೂಜಾರಿ, ರವೀಂದ್ರ ಪೂಜಾರಿ, ಗೋಪಾಲ ಗಾರಂಪಳ್ಳಿ, ಸೋಮಶೇಖರ ಕರಕಟ್ಟಿ, ರಾಜಕುಮಾರ ಕನಕಪೂರ ಇನ್ನಿತರಿದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸರಕಾರಕ್ಕೆ ಸಲ್ಲಿಸಿದರು.