ಬೆಲೆ ಏರಿಕೆ ನೀತಿ ವಿರೋಧಿಸಿ ಪ್ರತಿಭಟನೆ

| Published : Jun 27 2024, 01:01 AM IST

ಸಾರಾಂಶ

ರಾಜ್ಯ ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಜನತೆಗೆ ವ್ಯಾಪಕವಾದ ಬೆಲೆ ಏರಿಕೆಯ ಹಾಗೂ ಕರಭಾರದ ಹೊರೆ ಹೇರುವ ಮತ್ತು ಸಾರ್ವಜನಿಕ ಭೂಮಿಯು ಸೇರಿದಂತೆ ಇತರೆ ಆಸ್ತಿಗಳ ಮಾರಾಟಕ್ಕೆ ಕ್ರಮವಹಿಸಿರುವ ಸರ್ಕಾರದ ಕ್ರಮಗಳನ್ನು ಸಿಪಿಐ(ಎಂ) ಪಕ್ಷವು ಬಲವಾಗಿ ಖಂಡಿಸಿ ಬೆಲೆ ಏರಿಕೆ ತಕ್ಷಣ ಹಿಂದಕ್ಕೆ ಪಡೆಯಲು ಆಗ್ರಹಿಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ರಾಜ್ಯ ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಜನತೆಗೆ ವ್ಯಾಪಕವಾದ ಬೆಲೆ ಏರಿಕೆಯ ಹಾಗೂ ಕರಭಾರದ ಹೊರೆ ಹೇರುವ ಮತ್ತು ಸಾರ್ವಜನಿಕ ಭೂಮಿಯು ಸೇರಿದಂತೆ ಇತರೆ ಆಸ್ತಿಗಳ ಮಾರಾಟಕ್ಕೆ ಕ್ರಮವಹಿಸಿರುವ ಸರ್ಕಾರದ ಕ್ರಮಗಳನ್ನು ಸಿಪಿಐ(ಎಂ) ಪಕ್ಷವು ಬಲವಾಗಿ ಖಂಡಿಸಿ ಬೆಲೆ ಏರಿಕೆ ತಕ್ಷಣ ಹಿಂದಕ್ಕೆ ಪಡೆಯಲು ಆಗ್ರಹಿಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಎಂ.ಜೈನೆಖಾನ್ ಮಾತನಾಡಿ, ಸರ್ಕಾರದ ಬೆಲೆ ಏರಿಕೆಯಿಂದ ಬರಗಾಲದಿಂದ ತತ್ತರಿಸಿರುವ ಜನತೆಗೆ ಗಾಯದ ಮೇಲೆ ಬರೆ ಏಳದಂತಾಗಿದೆ ಎಂದು ಸರ್ಕಾರದ ನೀತಿ ವಿರೋಧಿಸಿದರು.ಕೇಂದ್ರ ಸರ್ಕಾರದಿಂದ ಪಡೆಯಬೇಕಾದ ನ್ಯಾಯಯುತ ತೆರಿಗೆಯ ಪಾಲನ್ನು ಮತ್ತು ಬರ ಪರಿಹಾರಕ್ಕೆ ಬರಬೇಕಾದ ಬಾಕಿ ಮೊತ್ತವನ್ನು ಪಡೆಯಲು ಮುಂದಾಗಬೇಕು. ದೊಡ್ಡ ಬಂಡವಾಳಗಾರರಿಗೆ ನೀಡುವ ಸಹಾಯಧನ ಕಡಿತ ಕೈ ಬಿಡಬೇಕು. ಶ್ರೀಮಂತರ ಮೇಲೆ ತೆರಿಗೆ ಸಂಗ್ರಹಿಸಿ ಬೆಲೆ ಏರಿಕೆಯನ್ನು ಕೈಬಿಡಲುಪೆಟ್ರೋಲ್ ಹಾಗೂ ಹಾಲಿನ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.ಆದಾಯಕ್ಕಾಗಿ ಸಾರ್ವಜನಿಕ ಭೂಮಿ ಮತ್ತಿತರೆ ಆಸ್ತಿಗಳ ಮಾರಾಟವನ್ನು ಕೈ ಬಿಡಬೇಕು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣವನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು. ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕವೇ ನಡೆಸಬೇಕು. ಶಿಕ್ಷಣ ಇಲಾಖೆ ನೀಡುವ ಆದೇಶವನ್ನು ವಾಪಸ್ ಪಡೆಯಬೇಕು. ಅಂಗನವಾಡಿ ಕೇಂದ್ರಗಳನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಒತ್ತಾಯಿಸಿದರು.ಸತತ ಬರಗಾಲ ಹಾಗೂ ಅತಿವೃಷ್ಟಿಗಳ ಹಿನ್ನೆಲೆಯಲ್ಲಿ ರೈತ, ಕೂಲಿಕಾರರ, ದಲಿತ ಹಾಗೂ ಮಹಿಳೆಯರ ಎಲ್ಲ ಸಾಲಮನ್ನಾ ಮಾಡಬೇಕು ಮತ್ತು ಉದ್ಯೋಗ ಖಾತ್ರಿ ಕೂಲಿಯನ್ನು ತಕ್ಷಣದಿಂದ ₹424 ಗಳಿಗೆ ಹೆಚ್ಚಿಸಿ ಜಾರಿಗೊಳಿಸಬೇಕು ಎಂದು ಸಿಪಿಐ(ಎಂ) ಪಕ್ಷದ ರಾಮದುರ್ಗ ತಾಲೂಕು ಸಮಿತಿ ಸರ್ಕಾರಕ್ಕೆ ಒತ್ತಾಯಿಸಿತು. ಈ ಸಂದರ್ಭದಲ್ಲಿ ನಾಗಪ್ಪ ಸಂಗೊಳ್ಳಿ, ತುಳಸಮ್ಮ ಮಾಳದಕರ, ರಾಚವ್ವ ರಾಮದುರ್ಗ, ಫಾರೂಖ್ ಶೇಖ್, ತೌಫಿಕ್ ಗೋಕಾಕ, ತಿಪ್ಪಣ್ಣ ನಾವಿ ಮತ್ತಿತರರು ಭಾಗವಹಿಸಿದ್ದರು.26ಆರ್‌ಎಂಡಿ1