ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಪ್ರತಿಭಟನೆ

| Published : Jul 24 2024, 12:20 AM IST

ಸಾರಾಂಶ

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಘಟಕ ಬಾದಾಮಿ ಇವರಿಂದ ಮಂಗಳವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾದಾಮಿ

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಘಟಕ ಬಾದಾಮಿ ಇವರಿಂದ ಮಂಗಳವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಸರಕಾರದ ವಾಲ್ಮೀಕಿ ನಿಗಮದ ಬಹುಕೋಟಿ ಹಣವನ್ನು ನಮ್ಮ ಸಮಾಜದ ಮೀಸಲು ಕ್ಷೇತ್ರದಿಂದ ಚುನಾಯಿತರಾಗಿ ನಮ್ಮ ಸಮಾಜದ ಹಿತ ಕಾಪಾಡಬೇಕಾದ ನಮ್ಮ ವಾಲ್ಮೀಕಿ ನಿಗಮದ ಮಂತ್ರಿಗಳು ನಿಗಮದ ಅಧ್ಯಕ್ಷರು ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ದೃಢವಾಗಿದೆ. ಈಗಿರುವ ಸರ್ಕಾರ ಕಾಂಗ್ರೆಸ್ ಪಕ್ಷವು ಚುನಾವಣೆಗೆ ಬಳಸಿರುವ ಸಂಗತಿ ಬೆಳಕಿಗೆ ಬಂದಿದೆ. ಹಗರಣದ ಹಿಂದೆ ಯಾರೆಯಾಗರಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಸಮಾಜಕ್ಕೆ ಮೀಸಲಿಟ್ಟಿರುವ ಹಣವನ್ನು ಮರಳಿ ನೀಡ ಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಬೃಹತ್‌ ಪ್ರತಿಭಟನೆಯೊಂದಿಗೆ ಊಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಪುರಸಭೆ ಸದಸ್ಯ ಬಸುರಾಜ ತಳವಾರ, ಮಲ್ಲಪ್ಪ ಕಲಾದಗಿ, ಯಲ್ಲಪ್ಪ ಪಾತ್ರೋಟಿ, ರಮೇಶ ಗೌಡರ, ಹುಚ್ಚಪ್ಪ ಹದ್ದನ್ನವರ, ರಮೇಶ ಕಳಸದ, ರಂಗಪ್ಪ ಕೊಳ್ಳನ್ನವರ, ರವಿ ತಳವಾರ, ರಾಮಣ್ಣ ಕಾವಳ್ಳಿ ಇತರರು ಇದ್ದರು.