ಸಾರಾಂಶ
ಹಿಂದೂ ಹಿತರಕ್ಷಣಾ ಸಮಿತಿಯ ವತಿಯಿಂದ ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಕೊಳ್ಳೇಗಾಲ: ಹಿಂದೂ ಹಿತರಕ್ಷಣಾ ಸಮಿತಿಯ ವತಿಯಿಂದ ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ದೇವಲ ಮಹರ್ಷಿ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಪ್ರಮುಖ ರಸ್ತೆಯ ಮೂಲಕ ಸಾಗಿ ಡಾ.ಅಂಬೇಡ್ಕರ್ ಪ್ರತಿಮೆಗೆ ತಲುಪಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಸ್.ಬಾಲರಾಜು, ರಮೇಶ್ ಮುರಾರಿ, ಸತ್ತೇಗಾಲ ಹ್ಯಾಂಡ್ ಪೋಸ್ಟ್ ರವಿಶಂಕರ್, ಎನ್.ವಿ ಪರಮೇಶ್ವರಯ್ಯ, ಬೂದಿತಿಟ್ಟು ಶಿವಕುಮಾರ್, ಸಿದ್ದಪ್ಪಾಜಿ, ಭೃಂಗೀಶ್ ಕಟ್ಟೆ, ಸೋಮಣ್ಣ ಉಪ್ಪಾರ್, ಕೆ.ಕೆ.ಮೂರ್ತಿ, ಜಗದೀಶ್ ಶಂಕನಪುರ, ಡೈರಿಗಿರೀಶ್, ನಗರಸಭೆ ಸದಸ್ಯರು ಪರಮೇಶ್ವರಯ್ಯ, ವಕೀಲ ರಾಜೇಂದ್ರ, ಮಧುಚಂದ್ರ, ಆರ್.ಎಸ್.ಎಸ್ ಶಿವಕುಮಾರ್, ಭಜರಂಗ ದಳದ ನವೀನ್, ಸುಶೀಲಾ ಶಾಂತರಾಜು, ಮಮತ ಬದ್ರಿನಾಥ್, ರಾಜಶೇಖರ್ ಮೂರ್ತಿ, ಆನ೦ದ್ ಇನ್ನಿತರರಿದ್ದರು.