ಸಾರಾಂಶ
ಕೊಪ್ಪತಾಲೂಕು ಮುಸ್ಲಿಂ ಸಂಯುಕ್ತ ಒಕ್ಕೂಟ ಮೇ.೧೩ ರಂದು ಕೊಪ್ಪದಲ್ಲಿ ಹಮ್ಮಿಕೊಂಡಿದ್ದ ವಕ್ಫ್ ಆಕ್ಟ್ ಬಿಲ್ ವಿರುದ್ಧದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ ಎಂದು ಒಕ್ಕೂಟದ ಅಧ್ಯಕ್ಷ ಸೈಯದ್ ಎಜಾಜ್ ಅಹಮ್ಮದ್ ತಿಳಿಸಿದರು..
ಪಟ್ಟಣದ ಜಾಮೀಯ ಮಸೀದಿ ಕಚೇರಿ ಯಲ್ಲಿ ತುರ್ತು ಸುದ್ದಿಗೋಷ್ಠಿ
ಕನ್ನಡಪ್ರಭ ವಾರ್ತೆ, ಕೊಪ್ಪತಾಲೂಕು ಮುಸ್ಲಿಂ ಸಂಯುಕ್ತ ಒಕ್ಕೂಟ ಮೇ.೧೩ ರಂದು ಕೊಪ್ಪದಲ್ಲಿ ಹಮ್ಮಿಕೊಂಡಿದ್ದ ವಕ್ಫ್ ಆಕ್ಟ್ ಬಿಲ್ ವಿರುದ್ಧದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ ಎಂದು ಒಕ್ಕೂಟದ ಅಧ್ಯಕ್ಷ ಸೈಯದ್ ಎಜಾಜ್ ಅಹಮ್ಮದ್ ತಿಳಿಸಿದರು..
ಒಕ್ಕೂಟದ ಅಧ್ಯಕ್ಷ ಸೈಯದ್ ಏಜಾಜ್ ಅಹಮ್ಮದ್ ಆಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಪಟ್ಟಣದ ಜಾಮೀಯ ಮಸೀದಿ ಕಚೇರಿ ಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು ವಿಚಾರ ತಿಳಿಸಿದ ಒಕ್ಕೂಟ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ದೇಶ ಮತ್ತು ಸೈನಿಕರು ಯುದ್ಧವನ್ನು ಎದುರಿಸುತ್ತಿರುವಾಗ ನಾವುಗಳು ನಮ್ಮ ಇಸ್ಲಾಮಿನ ತತ್ವಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಇಸ್ಲಾಂ ಪಠಿಸುವುದೇ ದೇಶ ಮೊದಲು ಎಂಬ ತತ್ವವನ್ನು ಕೇಂದ್ರ ಸರ್ಕಾರ ತಂದಿರುವ ವಕ್ಫ್ ಆಕ್ಟ್ ಬಿಲ್ಲಿನಿಂದ ನಮ್ಮ ಮುಸ್ಲಿಂ ಸಮುದಾಯಕ್ಕೆ ತುಂಬಾ ಘಾಸಿಯಾಗಿದೆ. ಆದರೂ ಇದು ನಮ್ಮ ದೇಶದ ಆಂತರಿಕ ವಿಚಾರ. ಈ ದೇಶದ ಭದ್ರತೆ ಮತ್ತು ಅಖಂಡತೆಗೆ ತೊಂದರೆ ಉಂಟಾದಾಗ ನಮಗೆ ನಮ್ಮೆಲ್ಲ ಸಮಸ್ಯೆಗಳಿಗೂ ಮಿಗಿಲು ನಮ್ಮ ದೇಶದ ಸ್ವಾಭಿಮಾನತೆ, ಏಕತೆ, ಅಖಂಡತೆ ಮತ್ತು ಸುರಕ್ಷೆ ಸುರಕ್ಷತೆಯಾಗಿದೆ ಎಂದರು.ನಮ್ಮ ದೇಶದ ರಕ್ಷಣೆಯಲ್ಲಿ ಸ್ವತಂತ್ರ ಸಂಗ್ರಾಮಗಳಲ್ಲಿ ತನು, ಮನ, ಧನ ಸಹಾಯದೊಂದಿಗೆ ಜೀವಗಳನ್ನೆ ತ್ಯಾಗ ಮಾಡಿರುವ ಇತಿಹಾಸವಿರುವ ನಾವು ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಭಾರತೀಯ ಪ್ರಜೆಗಳಾಗಿ ಕೇಂದ್ರ ಸರ್ಕಾರ ಮತ್ತು ಸೈನಿಕರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಕೊಪ್ಪ ತಾಲ್ಲೂಕು ಮುಸ್ಲಿಂ ಸಂಯುಕ್ತ ಒಕ್ಕೂಟದ ಉಫಾಧ್ಯಕ್ಷರುಗಳಾದ ಝಕ್ರಿಯಾ ಆಶ್ರಫ್, ಶಫಿ ಆಹಮ್ಮದ್, ಕಾರ್ಯದರ್ಶಿ ವೈ.ಹೆಚ್ ಅಬ್ದುಲ್ ಹಮೀದ್, ಸದಸ್ಯರುಗಳಾದ ಮುಹಮ್ಮದ್ ಸಾಧಿಕ್ ನಾರ್ವೆ, ನೌಶದ್, ಶಬ್ಬಿರ್, ಕಮಾಲಿಯಾ, ಝೈನುದ್ದಿನ್, ಹಾಫಿಜ್, ಸೈಯದ್ ಝಹುರ್, ಮನ್ಸೂರ್ ಆಲಿ, ಇಮ್ತಿಯಾಜ್, ಜಾವೀದ್ ಇತರರಿದ್ದರು.