ಸಾರಾಂಶ
ವಕ್ಫ್ ಬೋರ್ಡ್ ಬಿಲ್ ವಿರೋಧಿಸಿ ಪಟ್ಟಣದಲ್ಲಿ ಗುಂಡ್ಲುಪೇಟೆ ಎಸ್‌ಡಿಪಿಐ ನೇತೃತ್ವದಲ್ಲಿ ಮುಸ್ಲಿಮರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ವಕ್ಫ್ ಬೋರ್ಡ್ ಬಿಲ್ ವಿರೋಧಿಸಿ ಪಟ್ಟಣದಲ್ಲಿ ಗುಂಡ್ಲುಪೇಟೆ ಎಸ್‌ಡಿಪಿಐ ನೇತೃತ್ವದಲ್ಲಿ ಮುಸ್ಲಿಮರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.ಪಟ್ಟಣದ ಟಿಪ್ಪು ಸರ್ಕಲ್‌ನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಟಿ.ರಮೇಶ್ ಬಾಬುಗೆ ಮನವಿ ಸಲ್ಲಿಸಿದರು.
ವಕ್ಫ್ ಬಿಲ್ ೨೦೨೪ ರ ವಿರುದ್ಧ ಆಕ್ಷೇಪಣೆ ಸಲ್ಲಿಸಿ ಜಂಟೀ ಪಾರ್ಲಿಮೆಂಟ್ ಸಮಿತಿಗೆ ಹಕ್ಕೋತ್ತಾಯ ಮಂಡಿಸಿ ಎಸ್ ಡಿಪಿಎಐ ವಕ್ಫ್ ಆಸ್ತಿಗಳ ಸಂರಕ್ಷಣಾ ಹಾಗೂ ಸುಧಾರಣೆ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ಬಿಲ್ ೨೦೨೪ ತಂದಿರುವುದು ಅತ್ಯಂತ ಆತಂಕಕಾರಿ ವಿಷಯ ಎಂದು ಎಸ್‌ಡಿಪಿಐ ಅಧ್ಯಕ್ಷ ಅಕ್ರಂ ಪಾಶ್ ಆರೋಪಿಸಿದರು.ಮುಸ್ಲಿಂ ಸಮುದಾಯದ ಕ್ಷೇಮಾಭಿವೃದ್ಧಿಗಾಗಿ ಇರುವ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ಬಿಜೆಪಿ ಪಕ್ಷದ ಹಿಡನ್ ಅಜೆಂಡವಾಗಿದೆ. ಹಾಲಿ ಇರುವ ಕಾಯ್ದೆಗೆ ಸುಮಾರು ೪೦ ತಿದ್ದುಪಡಿ ಮಾಡುವ ಮೂಲಕ ಇಡೀ ವಕ್ಫ್ ಕಾಯ್ದೆಯನ್ನೇ ನಾಶಗೊಳಿಸಲು ವಕ್ಫ್ ಬಿಲ್ ೨೦೨೪ ತಂದಿದ್ದಾರೆ ಎಂದರು. ನೂತನ ವಕ್ಫ್ ಬಿಲ್ ೨೦೨೪ ಜಾತ್ಯಾತೀತ ಮೌಲ್ಯಗಳ ವಿರುದ್ಧವಾಗಿದೆ. ತಾರತಮ್ಯಗಳೊಂದಿಗೆ ಕೂಡಿರುವ ಕಾರಣ ಎಸ್‌ಡಿಪಿಐ ಈ ಬಿಲ್ ವಿರುದ್ಧ ವಿರೋಧ ವ್ಯಕ್ತಪಡಿಸಿದೆ. ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರಿಗೆ ಪ್ರತಿಭಟನೆಯ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಎಸ್ ಡಿಪಿಐ ಉಪಾಧ್ಯಕ್ಷ ಸರ್ದಾರ್, ಕಾರ್ಯದರ್ಶಿ ಸರಪರಾಜ್,ಉಪಾಧ್ಯಕ್ಷ ಅಕ್ರಂ,ಜಾಮಿಯಾ ಮಸೀದಿ ಅಧ್ಯಕ್ಷ ಹೆಚ್.ಎಂ.ಸರ್ದಾರ್,ಕರವೇ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಶ,ಇಮ್ರಾನ್ ಖಾನ್,ಕಾವಲು ಪಡೆಯ ಅಧ್ಯಕ್ಷ ಅಬ್ದುಲ್ ಮಾಲೀಕ್,ವಕ್ಫ್ ವೈಸ್ ಚೇರ್ಮನ್ ಮೊಹಮ್ಮದ್ ಮನ್ಸೂರ್ ಅಲಿ ಇದ್ದರು.