ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿ ಮತ ಕಾವಲು ಸಮಿತಿ ನೇತೃತ್ವದಲ್ಲಿ ಇದೇ ಅ.9ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಶಾಂತಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿ ಮತ ಕಾವಲು ಸಮಿತಿ ನೇತೃತ್ವದಲ್ಲಿ ಇದೇ ಅ.9ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಶಾಂತಪ್ಪ ತಿಳಿಸಿದರು.ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರವು ದೇಶದ ಸ್ವಾಯುತ್ತ ಸಂಸ್ಥೆಗಳನ್ನು ತಮ್ಮ ಕೈಗೊಂಬೆಗಳಂತೆ ಆಡಿಸುತ್ತಿದ್ದು, ಸಿಇಸಿ ಜ್ಞಾನೇಶ ಕುಮಾರ್ ಅವರ ಏಕಪಕ್ಷೀಯ ತೀರ್ಮಾನದ ಬಗ್ಗೆ ಸಹದ್ಯೋಗಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರೂ ಸಹ, ಉದ್ದೇಶಪೂರ್ವಕವಾಗಿ ಎಸ್‌ಐಆರ್ ಪ್ರಕ್ರಿಯೆ ಕೈಗೊಂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ದೂರಿದರು.
ಇದರ ವಿರುದ್ಧವಾಗಿಯೇ ಈ ಹೋರಾಟ ಕೈಗೊಂಡಿದ್ದು, ಅಂದು ಸ್ಥಳೀಯ ನೇತಾಜಿ ನಗರ ವೃತ್ತದಿಂದ ಆರಂಭಗೊಳ್ಳಲಿರುವ ಪ್ರತಿಭಟನಾ ಮೆರವಣಿಗೆ ಮುಖ್ಯ ರಸ್ತೆಗಳ ಮುಖಾಂತರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ಬಂದು ತಲುಪಲಿದೆ ಎಂದರು.ಜಂಟಿ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಯಣ್ಣ, ಮಾರೆಪ್ಪ ಹರವಿ, ಎಂ.ಆರ್.ಭೇರಿ, ಮಹ್ಮದ್ ಶಾಲಂ, ಅಸೀಮುದ್ದೀನ್ ಅಕ್ತರ್, ಜಾನ್ ವೆಸ್ಲಿ ಟಿ.ಕಾತರಕಿ, ಖಾಜಾ ಅಸ್ಲಂ, ಆಂಜಿನೇಯ್ಯ ಕುರುಬದೊಡ್ಡಿ, ಎನ್.ಶ್ರೀನಿವಾಸರೆಡ್ಡಿ, ಕೆ.ಜಿ.ವೀರೇಶ, ಮಸ್ತಾಕ್, ನರಸಿಂಹಲು ಮಾಡಗಿರಿ, ಅಮರೇಗೌಡ ಹಂಚಿನಾಳ, ನರಸಿಂಹಲು, ಸೇರಿ ಅನೇಕರು ಇದ್ದರು.
ಎಸ್ಐಆರ್ ರದ್ದತಿಗಾಗಿ ಅ.8ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆರಾಯಚೂರು: ಎಸ್‌ಐಆರ್ ಬಳಸಿಕೊಂಡು ಲಕ್ಷಾಂತರ ಶೋಷಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತ ಕೊಲ್ಲುವ ಅಪರೇಷನ್ ಕಮಲ ಬಟಾಬಯಲಾಗಿದೆ. ಆದರೂ ನ್ಯಾಯಾಲಯ ಕಾಲಹರಣ ಮಾಡುತ್ತಿದೆ. ಕೂಡಲೇ ಜ್ಞಾನೇಶ್ ರಾಜೀನಾಮೆ ನೀಡಬೇಕು ಎಸ್‌ಐಆರ್ ರದ್ದಾಗಲೇಬೇಕು ಎಂದು ಅ.8ರಂದು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟ ನಡೆಯಲಿದೆ ಎಂದು ಮತ ಕಾವಲು ಸಮಿತಿ ಜಿಲ್ಲಾ ಮುಖಂಡ ಮಾರೆಪ್ಪ ಹರವಿ ಹೇಳಿದರು.ದೇಶದೆಲ್ಲೆಡೆ ಸಿಇಸಿ ಜ್ಞಾನೇಶ ಕುಮಾರ ರಾಜೀನಾಮೆ ನೀಡಬೇಕು ಎಸ್‌ಐಆರ್ ರದ್ದಾಗಲೇಬೇಕು ಎಂಬ ಘೋಷಣೆಯನ್ನು ಮುಂದಿಟ್ಟುಕೊಂಡು ಹೋರಾಟಗಳು ಪ್ರಾರಂಭಗೊಂಡಿದ್ದು, ರಾಜ್ಯದಲ್ಲಿಯೂ ತುರ್ತು ಕ್ರಮವಾಗಿ ಜನತಾ ನ್ಯಾಯಲಯವನ್ನು ನಡೆಸಲು ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳು ಸೇರಿ ತೀರ್ಮಾನಿಸಿವೆ, ಈ ಹಿನ್ನೆಯಲ್ಲಿಯೇ ಹೋರಾಟ ಹಮ್ಮಿಕೊಂಡಿದ್ದು, ಇದರಲ್ಲಿ ನ್ಯಾಯಾಧೀಶರು, ವಕೀಲರು, ರಾಜ್ಯದ ಅನೇಕ ಕಲಾವಿದರು, ಸಾಹಿತಿ ಚಿಂತಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿನೂತನ ಪ್ರತಿಭಟನೆಗೆ ಸಿಐಪಿ ಒಳಗೊಂಡಂತೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿ ಯುವಜನ ಸಂಘಟನೆಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಸಿಇಸಿ ವಜಾಗೊಳಿಸಲು ಆಗ್ರಹಿಸಿ ಮನವಿಮಾನ್ವಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಆಗ್ರಹಿಸಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ತಾಲೂಕು ಸಮಿತಿ ಆಗ್ರಹಿಸಿದೆ.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಸಮಿತಿ ಪದಾಧಿಕಾರಿಗಳು, ಸದಸ್ಯರು ಗ್ರೇಡ್-2 ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.ಗೊಂದಲಮಯಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದು ಪಡಿಸಬೇಕು, ಸಿಇಸಿರನ್ನು ವಜಾಗೊಳಿಸಬೇಕು, ಅರ್ಹರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದನ್ನು ತಪ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ನಾಸಿರ್ ಅಲಿ, ಉಪಾಧ್ಯಕ್ಷ ಇಮ್ರಾನ್ ಖಾನ್, ಶೈಖ್ ಬಾಬಾ ಹುಸೇನ್, ಮುಹಮ್ಮದ್ ಹಾರೂನ್, ಅಬ್ದುಲ್ ಹಸೀಬ್, ಇರ್ಶದ್ ಖಾನ್, ಜಬ್ಬಾರ್, ಶೇಖ್ ಆಸಿಫ್, ಲಾಲಾಮಿಯಾ, ಹುಸೇನ್ ಸಾಬ್, ಸಮೀರ್ ಪಾಶ, ಶೇಕ್ ಮಹೆಬೂಬ್, ಎಮ್ .ಮಹೆಬೂಬ್, ದಸ್ತಗೀರ್ ಸಾಬ್, ಹನೀಫ್, ಎಂಡಿ ಆಫೀಸ್, ಮಹಮ್ಮದ್ ಅಲಿ ಸೇರಿ ಅನೇಕರು ಇದ್ದರು.