ಕೆಲಸದ ಒತ್ತಡ ಕಡಿತಕ್ಕೆ ಪಶು ಸಖಿಯರಿಂದ ಪ್ರತಿಭಟನೆ

| Published : Dec 03 2024, 12:35 AM IST

ಸಾರಾಂಶ

ಇಎಸ್‌ಐ ಸೌಲಭ್ಯ, ಪ್ರತಿ ತಿಂಗಳು ಮೊಬೈಲ್ ನಿರ್ವಹಣಾ ವೆಚ್ಚ (ದತ್ತಾಂಶಗಳ ಸಂಗ್ರಹ ಹಾಗೂ ವರ್ಗಾವಣೆ), ರಾಜ್ಯಾದ್ಯಂತ ಏಕರೂಪದ ಸಮವಸ್ತ್ರ, ಆಶಾ ಕಾರ್ಯಕರ್ತರಂತೆ ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಗೌರವ ವೇತನ ಹೆಚ್ಚಳ, ಕೆಲಸದ ಒತ್ತಡ ಕಡಿತಗೊಳಿಸುವಂತೆ ಒತ್ತಾಯಿಸಿ ಪಶು ಸಖಿಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪಶು ಸಖಿಯರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯ್ತಿಗೊಬ್ಬರಂತೆ ಪಶು ಸಖಿಯಾಗಿ ಸಂಜೀವಿನಿ ಒಕ್ಕೂಟದಿಂದ ನಿಯೋಜನೆಗೊಂಡು ಕೆಲಸ ನಿರ್ವಹಿಸುತ್ತಿದ್ದು, ಪಶುಪಾಲನಾ ಇಲಾಖೆಯಲ್ಲಿ ಜಾನುವಾರಗಳ ಗಣತಿ, ಕರುಗಳ ನೋಂದಣಿ, ಲವಂತಿಕೆ ನೋಂದಣಿ, ಅನೇಕ ಇಲಾಖಾ ಕಾರ್ಯಗಳ ಮಾಹಿತಿಯನ್ನು ಜಾನುವಾರುಗಳ ಮಾಲೀಕರಿಗೆ ತಲುಪಿಸುವುದು ಪಶುಪಾಲನಾ ಸಿಬ್ಬಂದಿಯೊಡಗೂಡಿ ಲಸಿಕಾ ಕಾರ್ಯಕ್ರಮ ಹಾಗೂ ಮೇಲಧಿಕಾರಿಗಳು ಸೂಚಿಸಿದ ಇತರೆ ಕೆಲಸಗಳನ್ನೂ ನಿರ್ವಹಿಸುತ್ತಾ ಅತ್ಯಂತ ಕಡಿಮೆ ವೇತನ ಪಡೆಯುತ್ತಿದ್ದೇವೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

ಎರಡೂ ಇಲಾಖೆಗಳಲ್ಲಿ ಕೆಲಸ ನಿರ್ವಹಿಸಲು ಅಸಾಧ್ಯವಾಗಿದ್ದು, ನಿರ್ಧಿಷ್ಟ ಕಾರ್ಯಸೂಚಿ, ಪ್ರತಿ ತಿಂಗಳು ವೇತನ ಸೌಲಭ್ಯ, ವೇತನ ನೇರವಾಗಿ ಕಾರ್ಯಕರ್ತರ ಖಾತೆಗೆ ವರ್ಗಾವಣೆ, ಆರೋಗ್ಯ ಇಲಾಖೆಯಲ್ಲಿನ ಆಶಾ ಕಾರ್ಯಕರ್ತರಂತೆ ಪರಿಗಣಿಸಬೇಕು. ಇಎಸ್‌ಐ ಸೌಲಭ್ಯ, ಪ್ರತಿ ತಿಂಗಳು ಮೊಬೈಲ್ ನಿರ್ವಹಣಾ ವೆಚ್ಚ (ದತ್ತಾಂಶಗಳ ಸಂಗ್ರಹ ಹಾಗೂ ವರ್ಗಾವಣೆ), ರಾಜ್ಯಾದ್ಯಂತ ಏಕರೂಪದ ಸಮವಸ್ತ್ರ, ಆಶಾ ಕಾರ್ಯಕರ್ತರಂತೆ ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಪಶು ಸಖಿಯರ ಸಂಘದ ಅಧ್ಯಕ್ಷೆ ಎಚ್.ಪಿ.ರೇಖಾ, ಕಾರ್ಯದರ್ಶಿ ಎಚ್.ಎಸ್.ಶಾರದ, ಮುಖಂಡರಾದ ಎಚ್.ಬಿ.ರೇಖಾ, ರೂಪಾ, ಎಚ್.ಎಲ್.ಪೂಜಾ, ಡಿ.ಎನ್.ಕವಿತಾ, ವಸಂತ, ಅಲಮೇಲು, ಶ್ವೇತಾ, ಪಿ. ಸುಮಲತಾ, ಕೃಷ್ಣವೇಣಿ, ಪವಿತ್ರಾ, ರಾಜೇಶ್ವರಿ ಸೇರಿದಂತೆ ಹಲವರು ಭಾಗವಹಿಸಿದ್ದರು.