5ರಂದು ಜಾಲಿಮುಳ್ಳು ಬಡಿದು ಪ್ರತಿಭಟನೆ

| Published : Mar 02 2025, 01:18 AM IST

ಸಾರಾಂಶ

Protest by beating Jalimullu on the 5th

ಕನ್ನಡಪ್ರಭ ವಾರ್ತೆ ಯಾದಗಿರಿ

ಗುರುಮಠಕಲ್ ಮತಕ್ಷೇತ್ರದಲ್ಲಿ ಬರುವ ಪಸಪೂಲ್‌ ಗ್ರಾಮದಲ್ಲಿ ಸಿಸಿ ರಸ್ತೆ ಚರಂಡಿ ಮತ್ತು ವಾಟರ್ ಟ್ಯಾಂಕ್ ಸೇರಿದಂತೆ ವಿಶೇಷ ಮೂಲಭೂತ ಸೌರ್ಕಯ ಒದಗಿಸುವಂತೆ ಆಗ್ರಹಿಸಿ ಬಾರಕೋಲ್ ಚಳುವಳಿ ಮಾಡಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯಿತಿ ಕಚೇರಿಗೆ ಜಾಲಿಮುಳ್ಳು ಬಡಿದು ಬೃಹತ್ ಪ್ರತಿಭಟನೆಯನ್ನು ಮಾ.5 ರಂದು ಬೆಳಿಗ್ಗೆ 9:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತಿಯ ಕೋಲಿ ಸಮಾಜದ ರಾಜ್ಯ ಸಂಘಟನೆ ಕಾರ್ಯಾದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಗರಿಕರು ಸಲ್ಲಿಸಿದ ಮನವಿಗೆ 7 ದಿನಗಳಲ್ಲಿ ಹಿಂಬರಹದ ಮೂಲಕ ಉತ್ತರ ನೀಡಬೇಕು. ಆದರೆ, ಅ.27 ರಂದು ಭಾರೀ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಒಂದು ವಾರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರೂ ಇಲ್ಲಿಯವರೆಗೆ ಯಾವುದೇ ಸಮಸ್ಯೆ ಬಗೆಹರಿಸದೆ, ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಈ ಹೊರಾಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

-

1ವೈಡಿಆರ್17: ಉಮೇಶ ಕೆ. ಮುದ್ನಾಳ, ಸಾಮಾಜಿಕ ಹೋರಾಟಗಾರ.

---000--