ಸಾರಾಂಶ
ಮಾನ್ವಿ, ಸಿಂಧನೂರಿನಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಆದ್ದರಿಂದ ಸಂಸದ ರಾಹುಲ್ ಗಾಂಧಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಮಾನ್ವಿ/ಸಿಂಧನೂರು
ಮಾಜಿ ಪ್ರಧಾನಿ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ವಿರೋಧಿಸಿ ಬಿಜೆಪಿ ಸಿಂಧನೂರು ನಗರ ಮತ್ತು ಗ್ರಾಮೀಣ ಮಂಡಲ ಹಾಗೂ ಮಾನ್ವಿ ತಾಲೂಕು ಮಂಡಲದ ವತಿಯಿಂದ ಮಂಗಳವಾರ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು.ಸಿಂಧನೂರು ನಗರದ ಗಾಂಧಿ ವೃತ್ತದ ಗಾಂಧಿ ಪ್ರತಿಮೆಯ ಮುಂದೆ ಬಿಜೆಪಿಗರು ಪ್ರತಿಭಟನೆ ನಡೆಸಿದರು. ಅದೇ ರೀತಿ ಮಾನ್ವಿ ಪಟ್ಟಣದಲ್ಲಿ ಬಸವ ವೃತ್ತದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಆದ್ದರಿಂದ ಸಂಸದ ರಾಹುಲ್ ಗಾಂಧಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ತುರ್ತು ಪರಿಸ್ಥಿತಿ ಘೋಷಣೆ ಮೂಲಕ ಸಂವಿಧಾನದ ನಿಬಂಧನೆಗಳಡಿ ಜನರ ಅಧಿಕಾರವನ್ನು ಹತ್ತಿಕ್ಕಿ ಅನ್ಯಾಯ ಮಾಡಿದೆ. ಇದನ್ನು ದೇಶದ ಜನರು ಎಂದು ಮರೆಯವುದಿಲ್ಲ. ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡಿದೆ ಎಂದು ಬಿಜೆಪಿ ಮುಖಂಡರು ಹೇಳಿದರು.ಸಿಂಧನೂರಿನ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ರಾಜೇಶ ಹಿರೇಮಠ, ಎಂ.ದೊಡ್ಡಬಸವರಾಜ, ಮಧ್ವರಾಜ್ ಆಚಾರ್, ಈರೇಶ ಇಲ್ಲೂರು, ಮಲ್ಲಿಕಾರ್ಜುನ ಜೀನೂರು, ಕೃಷ್ಣಪ್ಪ ರಾಠೋಡ್, ಶಿವಕುಮಾರ, ರಾಮ್ಮೂರ್ತಿ, ಸಿದ್ದು ಹೂಗಾರ್ ಇದ್ದರು.
ಮಾನ್ವಿ ಹೋರಾಟದಲ್ಲಿ ಬಿಜೆಪಿ ಮುಖಂಡರಾದ ಜೆ.ಸುಧಾಕರ್, ಜಗದೀಶ್ ಓತ್ತೂರ್, ಉಮೇಶ ಸಜ್ಜನ್, ಶಿವಕುಮಾರ್, ಜನಾರ್ಧನ್, ವೆಂಕಟೇಶ, ಶಿವಲಿಂಗಯ್ಯ ಸ್ವಾಮಿ, ಸುಧರ್ಶನ್, ಸೇರಿದಂತೆ ಇನ್ನಿತರರು ಇದ್ದರು.