ಚೇಳೈರು ಮಧ್ಯ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಪ್ರತಿಭಟನೆ

| Published : Jun 27 2025, 12:48 AM IST

ಸಾರಾಂಶ

ಚೇಳೈರು - ಮಧ್ಯ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಚೇಳೈರು ಗ್ರಾಮ ಪಂಚಾಯಿತಿ ಕಚೇರಿಯ ಎದುರು ರಾಜ್ಯ ಸರ್ಕಾರದ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ರಾಜ್ಯ ಸರ್ಕಾರದಿಂದ ಬಡವರಿಗೆ ಬಸವ ವಸತಿ ಯೋಜನೆಯಲ್ಲಿ ನೂತನ ಮನೆ ನಿರ್ಮಿಸಲು ಅನುದಾನ ಬರುತ್ತಿದ್ದು ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಿಂದ ಮನೆ ಮಂಜೂರಾತಿ ಮತ್ತು ಅನುದಾನ ನೀಡುತ್ತಿಲ್ಲ, ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ನಡೆಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿದೆ ಎಂದು ಚೇಳೈರು ಗ್ರಾ.ಪಂ. ಅಧ್ಯಕ್ಷ ಜಯಾನಂದ ಹೇಳಿದರು.

ಚೇಳೈರು - ಮಧ್ಯ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಚೇಳೈರು ಗ್ರಾಮ ಪಂಚಾಯತ್ ಕಚೇರಿಯ ಎದುರುಗಡೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಗಳಿಂದ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲು ಸಂಬಂಧಿಸಿದ ಸಚಿವರಿಗೆ, ಅಧಿಕಾರಿಗಳಿಗೆ 40% ಲಂಚ ನೀಡಬೇಕಾಗುತ್ತದೆ , ಬಡವರಿಗೆ ಮನೆ ಕಟ್ಟಲು ಬೇಕಾಗಿರುವ ಸಾಮಾಗ್ರಿಗಳು ಸ್ಥಗಿತಗೊಂಡಿದೆ, ಬಿ.ಪಿ.ಎಲ್ ರೇಶನ್ ಕಾರ್ಡ್ ಸ್ಥಗಿತಗೊಂಡಿದೆ, ವೃದ್ಯಾಪ್ಯ ವೇತನ ಸಂದ್ಯಾಸುರಕ್ಷಾ ದಂತಹ ಬಡಪರ ಯೋಜನೆಗಳು ಸ್ಥಗಿತಗೊಂಡಿದ್ದು ಬಿಟ್ಟಿ ಭಾಗ್ಯ ಯೋಜನೆ ಕೊಟ್ಟು ಜನರನ್ನು ಮೂರ್ಖರನ್ನಾಗಿಸಿದ್ದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆಯೆಂದು ಹೇಳಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇಖಾ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಚೇಳೈರು ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ಪ್ರತಿಮಾ ಶೆಟ್ಟಿ, ಯಶೋದ ಬಿ, ಪ್ರೇಮ ಶೆಟ್ಟಿ, ಸುಕುಮಾರಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಜ್ರಾಕ್ಷಿ ಪಿ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿನೋದ್ ಬೊಳ್ಳೂರು, ಬಿಜೆಪಿ ಪ್ರಮುಖರಾದ ದಿವಾಕರ ಸಾಮಾನಿ, ಹರೀಶ್ ಭಂಡಾರಿ ಮಧ್ಯ, ಭವಾನಿ ಶಂಕರ್, ಭರತ್ ರಾಜ್ ಶೆಟ್ಟಿ, ಸುರೇಶ್ ಸಾಲ್ಯಾನ್, ರಮೇಶ್ ಪೂಜಾರಿ, ಪುರಂದರ ಪೂಜಾರಿ, ವಿಶ್ವನಾಥ ಅಚಾರ್ಯ, ಗಂಗಾಧರ ಪೂಜಾರಿ ಕಾಲನಿ, ತುಕರಾಮ, ನವೀನ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಚಂದ್ರಶೇಖರ್ ಹೆಬ್ಬಾರ್, ದೀಪಕ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮನವಿ ಪತ್ರವನ್ನು ಪಂಚಾಯತ್ ಪಿ.ಡಿ.ಒ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.