ನಗರಸಭೆ ಅವ್ಯವಸ್ಥೆ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

| Published : Dec 13 2023, 01:00 AM IST

ನಗರಸಭೆ ಅವ್ಯವಸ್ಥೆ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಿಗೆ ಸ್ಪಂದಿಸದ ನಗರಸಭೆ ಅಧಿಕಾರಿಗಳ ವಿರುದ್ಧ ಹಾಗೂ ನಗರಸಭೆಯ ಅವ್ಯವಸ್ಥೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ನಗರ ವ್ಯಾಪ್ತಿಯಲ್ಲಿ ೧೫ ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಸಾರ್ವಜನಿಕರು ನೀರಿನ ಸೌಕರ್ಯದಿಂದ ವಂಚಿತರಾಗಿದ್ದಾರೆ. ಚರಂಡಿ ನಿಯಮಿತವಾಗಿ ಸ್ವಚ್ಛಗೊಳಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು.

ಹಾವೇರಿ: ಸಾರ್ವಜನಿಕರಿಗೆ ಸ್ಪಂದಿಸದ ನಗರಸಭೆ ಅಧಿಕಾರಿಗಳ ವಿರುದ್ಧ ಹಾಗೂ ನಗರಸಭೆಯ ಅವ್ಯವಸ್ಥೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರ ವ್ಯಾಪ್ತಿಯಲ್ಲಿ ೧೫ ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಸಾರ್ವಜನಿಕರು ನೀರಿನ ಸೌಕರ್ಯದಿಂದ ವಂಚಿತರಾಗಿದ್ದಾರೆ. ಚರಂಡಿ ನಿಯಮಿತವಾಗಿ ಸ್ವಚ್ಛಗೊಳಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬ್ಯಾನರ್‌ ಮತ್ತು ಧ್ವಜ ತೆರವುಗೊಳಿಸುವಂತೆ ಒಂದು ತಿಂಗಳಿನಿಂದ ಅಧಿಕಾರಿಗಳಿಗೆ ತಿಳಿಸಿದರೂ ಗಮನ ಕೊಡದ ಬಗ್ಗೆ ಬಿಜೆಪಿಯ ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಿಎಂ ಸ್ವನಿಧಿ ಯೋಜನೆಯ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರ ನೀಡಿರುವ ೫ ಲಕ್ಷ ರುಪಾಯಿಗಳಲ್ಲಿ ೧.೬೦ ಲಕ್ಷವನ್ನ ಪ್ರಚಾರಕ್ಕಾಗಿ ಬಳಸಿರುವುದಾಗಿ ಲೆಕ್ಕ ತೋರಿಸಿದ್ದು ಕೇವಲ ಐದಾರು ಬ್ಯಾನರ್‌ಗಳನ್ನು ಮಾಡಿಸಿ ಅದರಲ್ಲಿಯೂ ನರೇಂದ್ರ ಮೋದಿಯವರ ಭಾವಚಿತ್ರವನ್ನು, ಕೇಂದ್ರ ಸರ್ಕಾರದ ಹೆಸರನ್ನಾಗಲಿ ನಮೂದಿಸದೆ ಪ್ರಿಂಟ್ ಮಾಡಿಸಲಾಗಿದೆ. ಆ ಬ್ಯಾನರ್‌ಗಳನ್ನು ನಗರಸಭೆಯ ಆವರಣದಲ್ಲಿಯೇ ಇಟ್ಟುಕೊಂಡು ಸಾರ್ವಜನಿಕರಿಗೆ ಮಾಹಿತಿ ದೊರೆಯದಂತೆ ಮತ್ತು ಕಾಂಗ್ರೆಸ್ ಸರ್ಕಾರದ ಕೈಗೊಂಬೆಗಳಂತೆ ಅಧಿಕಾರಿಗಳು ವರ್ತಿಸುತ್ತಿರುವುದಕ್ಕೆ ಆಕ್ಷೇಪಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ, ರುದ್ರೇಶ್ ಚಿನ್ನಣ್ಣನವರ, ನಗರಸಭೆ ಮಾಜಿ ಸದಸ್ಯ ನಿರಂಜನ ಹೇರೂರು, ಲಲಿತಾ ಗುಂಡೇನಳ್ಳಿ, ರಾಜ್ಯ ಒಬಿಸಿ ಉಪಾಧ್ಯಕ್ಷ ಭೋಜರಾಜ ಕರೂದಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಅಲದಕಟ್ಟಿ, ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಶಿವಕುಮಾರ ತಿಪ್ಪಶೆಟ್ಟಿ, ಹಾಲೇಶ ಜಾಧವ, ಬಸವರಾಜ ಕಳಸೂರ, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ನೀಲಪ್ಪ ಚಾವಡಿ, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಶಿವಾನಂದ ಯಮನಕ್ಕನವರ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪವನಕುಮಾರ ಮಲ್ಲಾಡದ, ರೇಣಕನಗೌಡ ಪಾಟೀಲ, ಅಲ್ಲಾಭಕ್ಷ ತಿಮ್ಮಾಪೂರ, ನಂಜುಂಡೇಶ ಕಳ್ಳೇರ, ಜಗದೀಶ ಬಸೆಗಣ್ಣಿ, ರಮೇಶ ಬಳ್ಳಾರಿ, ಗಂಗಮ್ಮ ಹಾವನೂರ, ರೂಪಾ ಬಾಕಳೆ, ಚನ್ನಮ್ಮ ಬ್ಯಾಡಗಿ, ಪುಷ್ಪಾ ಚಕ್ರಸಾಲಿ, ರತ್ನಾ ಭೀಮಕ್ಕನವರ, ಸುಜಾತಾ ಆರಾಧ್ಯಮಠ, ಚನ್ನಮ್ಮ ಗುರುಪಾದಮಠ, ಕರಬಸಪ್ಪ ಹಳದೂರ, ವಿಜಯಕುಮಾರ ಚಿನ್ನಿಕಟ್ಟಿ, ಶಿವಯೋಗಿ ಹುಲಿಕಂತಿಮಠ, ಅಬ್ಬಾಸಲಿ ಬೈಗಪಲ್ಲಿ, ಅಭಿಷೇಕ ಬ್ಯಾಡಗಿ, ಸುರೇಶ ಬಿಷ್ಟಕ್ಕನವರ, ನಾಗರಾಜ ಕೋಣನವರ, ಸಚಿನ ಮಡಿವಾಳರ ಇತರರು ಇದ್ದರು.