ಸಾರಾಂಶ
ಕನ್ನಡಪ್ರಭ ವಾರ್ತೆ ಜೇವರ್ಗಿ
ಜೇವರ್ಗಿ ಹಾಗೂ ಯಡ್ರಾಮಿ ಉಭಯ ತಾಲೂಕಿನಲ್ಲಿ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದ್ದು, ಅದನ್ನ ತಡೆಯುವಂತೆ ಹೋರಾಟ ನಡೆಸಿದರೆ ಆ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದನ್ನು ರದ್ದು ಪಡಿಸಬೇಕು ಹಾಗೂ ಅಕ್ರಮ ಮದ್ಯ ಮಾರಾಟ ತಡೆಯಬೇಕೆಂದು ಒತ್ತಾಯಿಸಿ ಮಂಗಳವಾರ ಸಾಮಾಜಿಕ ನ್ಯಾಯ ಮತ್ತು ಜನಪರ ಹೋರಾಟಗಾರರ ವೇದಿಕೆಯಿಂದ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾಕಾರರು ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಮಧ್ಯೆ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ, ಅಬಕಾರಿ ಅಧಿಕಾರಿಗಳು ಮಾತ್ರ ಕಣ್ಣಮುಚ್ಚಿ ಕುಳಿತುಕೊಂಡಿದ್ದಾರೆ. ಅಕ್ರಮ ಮಧ್ಯ ಮಾರಾಟ ದಂಧೆ ನಿಲ್ಲಿಸಬೇಕೆಂದು ಹೋರಾಟಗಾರರು ಪ್ರತಿಭಟನೆ ಮಾಡಿದರೆ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ಅಬಕಾರಿ ಅಧಿಕಾರಿ ರೇವಣ ಸಿದ್ದಪ್ಪ ಹೂಗಾರ ಅವರನ್ನು ಕೆಲಸದಿಂದ ಅಮಾನತುಗೋಳಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವ ಅಧಿಕಾರಿಯನ್ನು ಕೂಡಲೆ ಅಮಾನತುಗೋಳಿಸಬೇಕು, ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಮತ್ತೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಸವರಾಜ ಪಡುಕೋಟೆ, ಜಿಲ್ಲಾ ಬಿಜೆಪಿ ನಿಕಟಪೂರ್ವ ಅದ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಶೋಭಾ ಬಾಣಿ, ಚಂದ್ರಶೇಖರ ಹರನಾಳ, ರವಿಚಂದ್ರ ಗುತ್ತೇದಾರ, ಶಿವಲಿಂಗ ಹಳ್ಳಿ, ಪೀರಪ್ಪ ಯಾತನೂರ, ಪರಮೇಶ ಬಿರಾಳ, ಅರುಣರಡ್ಡಿ ಶಿವಪೂರ, ಶಂಕರಗೌಡ ಹಾಲಗಡ್ಲಾ, ಬಸವರಾಜ ಬಾಗೇವಾಡಿ, ಶ್ರವಣ ಕುಮಾರ ನಾಯಕ, ಬೀಮಾಶಂಕರ ಬಿಲ್ಲಾಡ, ಶರಬು ನೆಲೋಗಿ, ಮಲ್ಲಣ್ಣಗೌಡ ಕೆಲ್ಲೂರ, ಮಹಾಂತಗೌಡ ನಂದಿಹಳ್ಳಿ, ಚಂದ್ರಶೇಖರ ಮಲ್ಲಾಬಾದ, ಅನೀತಾ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಗಿರೀಶ ತುಂಬಗಿ, ನಿಂಗು ದೊಡಮನಿ, ನಾಗರಾಜ ವಿಟಿ, ದೇವಕ್ಕಿ ಯಾಳವಾರ, ಪರಮಾನಂದ ಯಲಗೋಡ, ಸತೀಶ ಜಾಗೀರದಾರ, ಸಿದ್ರಾಮ ಕಟ್ಟಿ, ಶ್ರೀಹರಿ ಕರಕಿಹಳ್ಳಿ, ಮಲ್ಲಿಕಾರ್ಜುನ ಗೌನಳ್ಳಿ, ಸೇರಿದಂತೆ ಅನೇಕ ಜನ ಮಹಿಳೆಯರು ಹಾಗೂ ವಿವಿಧ ಪಕ್ಷದ ಮುಖಂಡರು ಹಾಗೂ ಕನ್ನಡಪರ, ರೈತಪರ, ಹೋರಾಟಗಾರರು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.